ಕನ್ನಡ ಭಾಷೆಯನ್ನು ಪ್ರಾಚೀನ ಭಾಷೆ, ಕನ್ನಡಿಗರುಎಲ್ಲೆಇದ್ದರು ಎಲ್ಲರೊಂದಿಗೆಬೆರೆಯುತ್ತಾರೆ – ಡಿಐಜಿ ರಾಜಶೇಖರ

0

Get real time updates directly on you device, subscribe now.

ಹೈದರಾಬಾದ : ನಮ್ಮಕನ್ನಡ ಭಾಷೆಯು ಸರಳ-ಸುಲಭವಾಗಿಕಲಿಯುವ ಭಾಷೆಯಾಗಿದೆ, ಹಾಗೇ ನಮ್ಮಕನ್ನಡ ಭಾಷೆಯುಅತ್ಯಂತ ಪ್ರಾಚೀನವಾದ ಭಾಷೆಯಾಗಿದೆ. ಕನ್ನಡಿಗರುಯಾವರಾಜ್ಯದಲ್ಲಿದರು.ಸ್ಥಳೀಯರೊಂದಿಗೆ ಸ್ಥಳೀಯ ಭಾಷೆಯನ್ನುಕಲಿಯು ಸರಳ ಜೀವಿಗಳು. ಹೀಗಾಗಿ ಕನ್ನಡಿಗರುಎಲ್ಲೆಇದ್ದರು ಬದುಕು ಕಟ್ಟಿಕೊಳ್ಳುವ ಸಾಮಾರ್ಥ್ಯವನ್ನು ಹೊಂದಿರುತ್ತಾರೆಎಂದುಕನ್ನಡಿಗ ಹಿರಿಯಐಪಿಎಸ್‌ಅಧಿಕಾರಿರಾಜಶೇಖರಡಿಐಜಿ ನುಡಿದರು.
ಅವರು ಭಾನುವಾರ ಸಂಜೆಘಟಕೇಸರನ ಬಿಬಿ ನಗರದಲ್ಲಿಕನ್ನಡ ಬಳಗವು ಆಯೋಜಿಸಿದ ಕನ್ನಡರಾಜ್ಯೋತ್ಸವ ಸಮಾರಂಭವುಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಮಾಧ್ಯಮದಲ್ಲಿಓದಿರುವ ವಿದ್ಯಾರ್ಥಿಗಳು ತಮ್ಮ ಮನಸ್ಸಿನಿಂದ ಕೀಳರಿಮೆಯನ್ನು ತೆಗೆದು ಹಾಕಿ ಅಚ್ಚಕನ್ನಡದಲ್ಲಿಯೇಯುಪಿಎಸ್ ಸಿ ಪರೀಕ್ಷೆಯನ್ನು ಬರೆದುಉನ್ನತ ಅಧಿಕಾರಿಗಳಾಗಬಹುದು.ಇದಕ್ಕೆಕಠಿಣ ಪರಿಶ್ರಮದಅವಶ್ಯಕತೆಯಿದೆ. ಹಾಗೂ ಶ್ರದ್ಧೆ-ನಿಷ್ಠೆಯಿಂದ ವಿದ್ಯಾರ್ಜನ ಮಾಡಿದರೆ ಸಾಕು ಪರೀಕ್ಷೆಯಲ್ಲಿ ಪಾಸಾಗುವುದುಕಬ್ಬಿಣಕಡಲ ಅಲ್ಲಎಂಬುದನ್ನು ಮನಗಾಣಬೇಕು. ಸದ್ಯದ ವಿದ್ಯಮಾನಗಳ ಬಗ್ಗೆ ಹಾಗೂ ಸಾಮಾನ್ಯಜ್ಞಾನದಅರಿವುಇದರೆತಾವು ಸರಳವಾಗಿ ಯುಪಿಎಸ್ ಸಿ ಪರೀಕ್ಷೆಯನ್ನು ಬರೆದು ಪಾಸಾಗಬಹುದುಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕನ್ನಡ ಭಾಷೆಯ ಮೂರು ವಿಭಾಗಗಳನ್ನು ವಿವರಿಸಿದರು. ಹಳಗನ್ನಡ, ಮಧ್ಯಗನ್ನಡ. ಹೊಸಗನ್ನಡಗಳ ಮಧ್ಯೆಇರುವ ವ್ಯತ್ಯಾಸ ಹಾಗೂ ಕನ್ನಡ ಭಾಷೆ ಬೆಳೆದು ಬಂದ ಹಾದಿಯನ್ನು ವಿವರವಾದ ಮಾಹಿತಿಯನ್ನು ನೀಡಿದರು.
ಇನ್ನೊರ್ವ ಮುಖ್ಯಅತಿಥಿಯಾಗಿ ಆಗಮಿಸಿದ ಹೈದರಾಬಾದ ಸಿಟಿ ಟ್ರಾಫೀಕ್‌ಉಪಆಯುಕ್ತರಾಹುಲ ಹೆಗಡೆಐಪಿಎಸ್ ಮಾತನಾಡಿಕನ್ನಡ ಸಮಾರಂಭವನ್ನುಆಯೋಜನೆ ಮಾಡಿಕನ್ನಡತನ್ನವನ್ನು ಮೆರೆದ ನೀವುಗಳು ನಿಜವಾದಕನ್ನಡಿಗರುಎಂದು ಹೆಮ್ಮೆಯ ವಿಷಯವಾಗಿದೆ. ಹಾಗೂ ಈ ಭಾಗದಲ್ಲಿಇಷ್ಟೊಂದುಕನ್ನಡಿಗರುಇರುವುದುಆಶ್ಚರ್ಯವಾದ ಸಂಗತಿಎಂದು ಸಂತೋಷ ಪಟ್ಟರು. ಎಲ್ಲರಿಗೂಧನ್ಯವಾದ ತಿಳಿಸಿದರು.
ವಿಶೇಷ ಅತಿಥಿಯಾಗಿಕನ್ನಡಿಗರಕಲ್ಯಾಣಅಭಿವೃದ್ದಿ ಸಂಘದಅಧ್ಯಕ್ಷಧರ್ಮೇಂದ್ರ ಪೂಜಾರಿ ಬಗೂರಿ ಮಾತನಾಡುತ್ತ ಹೈದರಾಬಾದನಗರಲ್ಲಿ ಸುಮಾರು ೧೨ಲಕ್ಷ ಜನಕನ್ನಡಿಗರು ವಾಸವಾಗಿದ್ದೇವೆ. ಪ್ರತಿಯೊಂದು ಪ್ರದೇಶದಲ್ಲಿಕನ್ನಡಿಗರುಇದ್ದಾರೆಇವರೆಲ್ಲರನ್ನುಒಂದೇ ವೇದಿಕೆಯ ಮೇಲೆ ತರುವಒಂದು ಪ್ರಯತ್ನಕನ್ನಡಿಗರಕಲ್ಯಾಣಅಭಿವೃದ್ದಿ ಸಂಘ ಕಾರ್ಯ ಮಾಡುತ್ತಿದೆ. ಹಾಗೂ ಕನ್ನಡಿಗರಿಗೆಏನಾದರೂ ಸಮಸ್ಯ ಬಂದರೆ ನೇರವಾಗಿ ನಮ್ಮನ್ನು ಸಂಪರ್ಕ ಮಾಡಿ ಸದಾ ನಿಮ್ಮ ಸೇವೆಯಲ್ಲಿ ನಾವು ಇದ್ದೇವೆಎಂದು ಭರವಸೆ ನೀಡಿದರು.
ವೇದಿಕೆಯ ಮೇಲೆ ಕನ್ನಡ ಸಂಘದ ಕಾರ್ಯದರ್ಶಿ ಬಸವರಾಜ ಲಾರಾ ಉಪಸ್ಥಿತರಿದ್ದರು.ಡಾ. ಎಡುಕುಲ, ಡಾ.ಸುನೀಲ, ಡಾ.ಸಿದ್ರಾಮ, ಡಾ.ವಾಮನ, ಅಕ್ಷಯ ಕಾಂಬಳೆ, ಸಂತೋಷ ನಾಡಿಗ, ಧನಂಜಯ, ಮನೋಜ, ಕಡಪ್ಪ, ಭೀಮ, ಶ್ರೀಮತಿ ಸುವರ್ಣ, ವಿನಯ, ನಾಗರಾಜ, ಹಾಗೂ ಉತ್ತರಕನ್ನಡಿಗರ ಬಳಗ ಬಿಬಿ ನಗರಎಲ್ಲಾ ಸದಸ್ಯರು ಸಮಾರಂಭದಲ್ಲಿ ಪಾಲ್ಗೊಂಡಿದರು.ಅನೇಕ ಸಾಂಸ್ಕೃತಿಕಕಾರ್ಯಕ್ರಮ ನಡೆದವು.ಅನೇಕ ಬಿಬಿ ನಗರದಕನ್ನಡಿಗರು ಹಾಜರಿದರು.ಜಯಂತಿ ನಿರೂಪಣೆ ಮಾಡಿದರು.

hyderabad kannada programme

Get real time updates directly on you device, subscribe now.

Leave A Reply

Your email address will not be published.

error: Content is protected !!