ಸಂತ ಕವಿ ಕನಕದಾಸರ ನುಡಿಗಳು ಮತ್ತು ಕೀರ್ತನೆಗಳು ಸಾರ್ವಕಾಲಿಕ ಸತ್ಯ, ಅವುಗಳ ಪಾಲನೆ ಇಂದಿನ ಅಗತ್ಯ. ಡಾ. ಗಣಪತಿ ಲಮಾಣಿ
ಕೊಪ್ಪಳ: ನ.೧೮.. ಕನಕದಾಸರ ನುಡಿಗಳು ಮತ್ತು ಕೀರ್ತನೆಗಳು ಸಾರ್ವಕಾಲಿಕ ಸತ್ಯ. ಅವುಗಳ ಪಾಲನೆ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ ಗಣಪತಿ ಕೆ ಲಮಾಣಿ ಅಭಿಪ್ರಾಯ ಪಟ್ಟರು
ಅವರು ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ ಕನಕದಾಸ ಜಯಂತಿಯ ಕಾರ್ಯಕ್ರಮದಲ್ಲಿ ಭಾವಹಿಸಿ ಮಾತನಾಡಿದರು.
ಮುಂದುವರೆದು ಮಾನತನಾಡಿದ ಅವರು ಕನಕದಾಸರು ಮನುಕುಲಕ್ಕೆ ಸಮಾನತೆಯನ್ನು ಸಾರಿದರು. ಅವರ ಈ ಹೇಳಿಕೆಯನ್ನು ಮಾನವ ಪೀಳಿಗೆ ಅಳವಡಿಸಿಕೊಳ್ಳುವುದು ಜರೂರಾಗಿದೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಶ್ರೀ. ವಿಠೋಬ.ಎಸ್ ಮಾತನಾಡಿ, ಕನಕದಾಸರು ಒಬ್ಬ ಶ್ರೇಷ್ಠ ದಾರ್ಶನಿಕ. ಅವರು ಜಾತಿ ವರ್ಗವನ್ನು ಖಂಡಿಸಿದರು. ಕನಕದಾಸರು ಸಮಾನತೆಯನ್ನ ಕುರಿತು ಜನಸಾಮಾನ್ಯರಿಗೆ ತಿಳಿಸಿದ್ದಾರೆ ಎಂದರು.
ರಾಜ್ಯ ಶಾಸ್ರ್ತ ವಿಭಾಗದ ಮುಖ್ಯಸ್ಥ ಡಾ.ಗವಿಸಿದ್ದಪ್ಪ ಮುತ್ತಾಳ ಮಾತನಾಡಿ ಕನಕದಾಸರು ಜಾತಿ ಭೇದ ಮಾಡಬಾರದು, ಇಲ್ಲಿ ಯಾರೂ ಶ್ರೇ? ರಲ್ಲ, ಯಾರೂ ಕನಿ? ರಲ್ಲ, ಎಲ್ಲರೂ ಸಮಾನರು, ಎಂದು ಆ ಕಾಲಕ್ಕೆ ಕರೆ ನೀಡಿದ್ದಾರೆ ಎಂದು ಮಾತನಾಡಿದರು.
ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಹುಲಿಗೆಮ್ಮ ಬಿ. ಮಾತನಾಡುತ್ತಾ ಕನಕದಾಸರ ಕೀರ್ತನೆಗಳು, ಸಾಹಿತ್ಯ, ಎಲ್ಲಾ ವರ್ಗದ ಜನರಿಗೂ ಮಾದರಿ ಯಾಗಿವೆ. ಕನಕದಾಸರು ಸ್ರೀ ಸಮಾನತೆಯ ಕುರಿತು ಆ ಕಾಲಘಟ್ಟದಲ್ಲಿಯೇ ಹೇಳಿದ್ದಾರೆ. ಆದರೆ ಈಗಲೂಕೂಡ ಮಹಿಳೆಯರಿಗೆ ಸಮಾನತೆ ಸಿಗದೇ ಇರುವುದು ವಿಶಾದನೀಯ ಎಂದರು.
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ನರಸಿಂಹ ಗುಂಜಳ್ಳಿ ಅವರು ಕನಕದಾಸರ ಜೀವನ ಹಾಗೂ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಕರೆನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಡಾ. ಪ್ರದೀಪ್ ಕುಮಾರ್ ಯು, ಡಾ. ಮಲ್ಲಿಕಾಜುನ ಬಿ, ಇಬ್ರಾಹಿಂ, ಹನುಮಪ್ಪ ಮೇಟಿ, ಅತಿಥಿ ಉಪನ್ಯಾಸಕರಾದ ಶಿವಪ್ರಸಾದ್ ಹಾದಿಮನಿ, ಶಿ.ಕಾ ಬಡಿಗೇರ, ನಿಂಗಪ್ಪ ಕಿನ್ನಾಳ, ಕಲ್ಲಯ್ಯ ಪೂಜಾರ ಮತ್ತು ಬೋಧಕೇತರ ಸಿಬ್ಬಂದಿ ತಾರಮ್ಮ, ಲಕ್ಷ್ಮಿ ಎ.ಕೆ, ರುಕ್ಕಮ್ಮ, ಮತ್ತು ಗವಿಸಿದ್ದಪ್ಪ ಅಜ್ಜ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಡಾ.ಹುಲಿಗೆಮ್ಮ ಬಿ. ಅವರು ನಿರೂಪಿಸಿದರು, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಪ್ರದೀಪ್ ಕುಮಾರ್ ಯು ಅವರು ವಂದಿಸಿದರು.
Comments are closed.