ಅಂಜನಾದ್ರಿಯಲ್ಲಿ ಭಕ್ತರುʼ ಚಿತ್ರಕ್ಕೆ IAAP ಡಿಪ್ಲೋಮಾ ಗೌರವ
ನಾರ್ತ್ ಮೆಸಿಡೋನಿಯಾದಲ್ಲಿ ನಡೆದ ಫೋಟೋಗ್ರಫಿ ವರ್ಲ್ಡ್‌ಕಪ್-2024
ಕೊಪ್ಪಳ: ಇಂಟರ್ನ್ಯಾಷನಲ್ ಅಸೋಸಿಯೇಷನ್ ಆಫ್ ಆರ್ಟ್ ಫೋಟೋಗ್ರಫಿ(IAAP) ವತಿಯಿಂದ ಆಯೋಜಿಸಲಾಗಿದ್ದ ಫೋಟೋಗ್ರಫಿ ವರ್ಲ್ಡ್‌ಕಪ್-2024ರಲ್ಲಿ ನಗರದ ಪತ್ರಿಕಾ ಛಾಯಾಗ್ರಾಹಕ ಭರತ್ ಕಂದಕೂರ ಸೆರೆಹಿಡಿದ ʻಅಂಜನಾದ್ರಿಯಲ್ಲಿ ಭಕ್ತರುʼ ಶೀರ್ಷಿಕೆಯ ಚಿತ್ರ IAAP ಡಿಪ್ಲೋಮಾ ಗೌರವಕ್ಕೆ ಭಾಜನವಾಗಿದೆ.
ನಾರ್ತ್ ಮೆಸಿಡೋನಿಯಾದಲ್ಲಿ ನಡೆದ ಈ ವರ್ಲ್ಡ್‌ಕಪ್‌ನಲ್ಲಿ ಜಗತ್ತಿನ 80 ದೇಶಗಳ 967 ಜನ ಛಾಯಾಗ್ರಾಹಕರು ಭಾಗವಹಿಸಿದ್ದರು. ಖ್ಯಾತ ಅಂತರಾಷ್ಟ್ರೀಯ ಛಾಯಾಗ್ರಾಹಕರಾದ ಮಾಲ್ಟಾ ದೇಶದ ಗಾಟ್‌ಫ್ರೈಡ್ ಕೆಟಾನಿಯಾ, ಬೋಸ್ನಿಯಾ ಮತ್ತು ಹೆರ್ಜಾಗೋವಿನಾ ದೇಶದ ಓಲಿವರ್ ವುಕ್ಮಿರೋವಿಕ್, ಸಿಂಗಪೂರ್‌ನ ಕೆನ್ ಆಂಗ್ ತೀರ್ಪುಗಾರರಾಗಿದ್ದರು.
* ಪತ್ರಿಕಾ ಛಾಯಾಗ್ರಾಹಕ ಭರತ್ ಕಂದಕೂರ
Comments are closed.