ಕರ್ನಾಟಕ ರಾಜ್ಯ ಮಿನಿ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭತ್ತದ ನಾಡಿನ ಕ್ರೀಡಾಪಟುಗಳ ಅಮೋಘ ಸಾಧನೆ

Get real time updates directly on you device, subscribe now.

ಗಂಗಾವತಿ :- ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಇವರ ನೇತೃತ್ವದಲ್ಲಿ ನ. 13 ರಿಂದ 20 ರವರೆಗೆ ನಡೆದ 14 ರ ವಯೋಮಿತಿಯ 3ನೇ ಕರ್ನಾಟಕ ರಾಜ್ಯ ಮಿನಿ ಒಲಂಪಿಕ್ ಕ್ರೀಡಾಕೂಟದಲ್ಲಿ ತಾಲೂಕಿನ ಕ್ರೀಡಾಪಟುಗಳು ವುಶೂ ಕ್ರೀಡೆಯಲ್ಲಿ ಭಾಗವಹಿಸಿ ವಿಜೇತರಾಗಿ ಅಮೋಘ ಸಾಧನೆಗೆ ಮುಂದಾಗಿದ್ದಾರೆ.

ಥಾವಲು (ಕಾಲ್ಪನಿಕ ಯುದ್ಧ) ಮತ್ತು ಸಾಂದಾ ( ಫೈಟ್ ) ವಿವಿಧ ತೂಕಗಳ ಆಧಾರದ ಮೇಲೆ ಕ್ರೀಡಾಕೂಟವನ್ನು ಏರ್ಪಡಿಸಲಾಗಿತ್ತು .

ಸಾಂದಾ (ಫೈಟ್) 42 ಕೆಜಿ ವಿಭಾಗದಲ್ಲಿ ವಿಜಯಲಕ್ಷ್ಮಿ ದ್ವಿತೀಯ ಸ್ಥಾನ, 39-ಕೆಜಿ ವಿಭಾಗದಲ್ಲಿ ಕೃತಿಕಾ – ತೃತೀಯಸ್ಥಾನ, 45- ಕೆಜಿ
ವಿಭಾಗದಲ್ಲಿ ಹೇಮಂತ್ – ತೃತೀಯ ಸ್ಥಾನ, ಸಚಿನ್ ನಾಯ್ಕ್ – 60 ಕೆಜಿ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.

ಥಾವಲು ( ಕಾಲ್ಪನಿಕ ಯುದ್ದ )
ದಾಶು ವಿಭಾಗದಲ್ಲಿ ನಂದನ್ – ಪ್ರಥಮ ಸ್ಥಾನ, ತೈಜಿಕ್ವಾನ್ ವಿಭಾಗದಲ್ಲಿ ಸಂಜನಾ ದ್ವಿತೀಯ ಸ್ಥಾನ, ಚಾಂಗ್ ಕ್ವಾನ್ ವಿಭಾಗದಲ್ಲಿ ಕಾರ್ತಿಕ್ ತೃತೀಯ ಸ್ಥಾನ ಪಡೆದಿದ್ದಾರೆ ಮತ್ತು ಆಪ್ರೀನ್, ರಾಜಭಕ್ಷಿ , ರಾಕೇಶ್ ಭಾಗವಹಿಸಿ ಪ್ರಶಸ್ತಿ ಪತ್ರವನ್ನು ಪಡೆದಿದ್ದಾರೆ ಎಂದು ಕ್ರೀಡಾಪಟುಗಳಿಗೆ ತರಬೇತಿ ನೀಡಿರುವಂತಹ ರಾಜ್ಯ ವುಶೂ ತರಬೇತಿದಾರರಾದ ಬಾಬುಸಾಬ್ ರವರು ತಿಳಿಸಿರುತ್ತಾರೆ.

ವಿಜೇತರಾದಂತಹ ಕ್ರೀಡಾಪಟುಗಳಿಗೆ ಪಾಲಕರು, ಕ್ರೀಡಾಭಿಮಾನಿಗಳು ಮತ್ತು ಊರಿನ ಗುರು ಹಿರಿಯರು ಶುಭ ಹಾರೈಸಿರುತ್ತಾರೆ.

Get real time updates directly on you device, subscribe now.

Comments are closed.

error: Content is protected !!