ಕೊಪ್ಪಳ ವಿಶ್ವವಿದ್ಯಾಲಯ – ಅಂತರ್ ಕಾಲೇಜು ಟೇಬಲ್ ಟೆನ್ನಿಸ್ ಸ್ಪರ್ಧೆ
ಕೊಪ್ಪಳ ನ. ೧೬:ನಗರದ ಶ್ರೀಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಕೊಪ್ಪಳ ವಿಶ್ವವಿದ್ಯಾಲಯವು ಪ್ರಪ್ರಥಮ ಭಾರಿಗೆಅಂತರ್‌ಕಾಲೇಜುಟೇಬಲ್ ಟನ್ನಿಸ್ ಪಂದ್ಯಾಟಗಳನ್ನು ಆಯೊಜಿಸಲಾಗಿತ್ತು.ಈ ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲೆಯ ವಿವಿಧ ಪದವಿ ಮಹಾವಿದ್ಯಾಲಯಗಳು ಭಾಗವಹಿಸಿದ್ದು, ಈ ಪಂದ್ಯಾಟದಲ್ಲಿಪುರುಷರವಿಭಾಗದಲ್ಲಿಪ್ರಥಮ ಸ್ಥಾನವನ್ನುಶ್ರೀಮತಿ ಶಾರದಮ್ಮ ವಿ.ಕೊತಬಾಳ ಪದವಿ ಮಹಾವಿದ್ಯಾಲಯ, ದ್ವೀತಿಯ ಸ್ಥಾನವನ್ನು ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯ ಮತ್ತುತೃತೀಯ ಸ್ಥಾನವನ್ನು ಹೆಚ್.ಆರ್.ಶ್ರೀರಾಮುಲು ಪದವಿ ಮಹಾವಿದ್ಯಾಲಯ, ಗಂಗಾವತಿ ಪಡೆಯಿತು.ಮತ್ತುಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನುಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯ ದ್ವೀತಿಯಸ್ಥಾನವನ್ನುಹೆಚ್.ಆರ್.ಶ್ರೀರಾಮುಲು ಪದವಿ ಮಹಾವಿದ್ಯಾಲಯ, ಗಂಗಾವತಿ ಮತ್ತುತೃತೀಯಾಸ್ಥಾನವನ್ನುಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯ, ಕೊಪ್ಪಳ ಪಡೆದುಕೊಂಡವು.
ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದಕೊಪ್ಪಳ ವಿಶ್ವವಿದ್ಯಾಲಯಸಿಂಡಿಕೆಟ್ ಸದಸ್ಯರಾದರಾಜರಾಜೇಶ್ವರರಾವ್‌ಅವರುಕೊಪ್ಪಳ ವಿಶ್ವವಿದ್ಯಾಲಯದಅದೀನದಲ್ಲಿಕ್ರೀಡಾಕಾರ್ಯಕ್ರಮವನ್ನು ಆಯೋಜಿಸಿರುವ ಶ್ರೀಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ನಡೆಯುತ್ತಿರುವುದುತುಂಬಾ ಸಂತೋಷಕರ ವಿಷಯ. ಕೊಪ್ಪಳ ವಿಶ್ವವಿದ್ಯಾಲಯದಎಲ್ಲಾ ಮುಖ್ಯಸ್ಥರರಿಗೂ ನನ್ನಅನಂತಅನಂತ ಅಭಿನಂದನೆಗಳನ್ನು ತಿಳಿಸಿ ಮುಂದಿನ ದಿನಗಳಲ್ಲಿ ಕೊಪ್ಪಳ ವಿಶ್ವವಿದ್ಯಾಲಯವುಇಂತಹ ಹಲವಾರು ಸಕ್ರೀಯಕ್ರೀಡಾಕಾರ್ಯಕ್ರಮವನ್ನು ಆಯೋಜಿಸಿ ಎಲ್ಲಾಯುವ ಸಮೂಹದಲ್ಲಿಕ್ರೀಡಾಸ್ಪೂರ್ತಿತುಂಬಿಸಲಿ ಮತ್ತುಕ್ರೀಡೆಯಮಹತ್ವವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆಎಲ್ಲರನ್ನು ಪ್ರೋಸ್ತಾಹಿಸಿ ಎಂದುಅಭಿಪ್ರಾಯಪಟ್ಟರು.
ಅಧ್ಯಕ್ಷಿಯ ನುಡಿಗಳನ್ನು ಶ್ರೀಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲದ ಪ್ರಾಂಶುಪಾಲರಾದಡಾ.ಚನ್ನಬಸವ ಮಾತನಾಡುತ್ತಾಎಲ್ಲಾ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ಧನಾತ್ಮಕ ಪ್ರೇರಣೆಯೊಂದಿಗೆ ಸ್ವೀಕರಿಸಿಕೊಳ್ಳುವುದರ ಮೂಲಕ ಬಂದಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಅವರು ಆಶಿಸಿದರು.ಕೊನೆಯಲ್ಲಿ ಸಮಾರೋಪ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.ಕಾರ್ಯಕ್ರಮದ ಸ್ವಾಗತವನ್ನುಡಾ.ಪ್ರಶಾಂತಕೊಂಕಲ್, ನಿರೂಪಣೆಯನ್ನುಡಾ.ನಾಗರಾಜದಂಡೋತಿಮತ್ತು ಶರಣಪ್ಪಮಾಡಿದರು.ಕಾರ್ಯಕ್ರಮದಲ್ಲಿದೈಹಿಕ ಶಿಕ್ಷಣ ನಿರ್ದೇಶಕರಾದಜಯರಾಮ ಮರಡಿತೋಟ, ಡಾ.ಮೋಹನ ಹೊಸಕೋಟಿ, ಈಶಪ್ಪದೊಡ್ಡಮನಿ ಹಾಗೂ ಪರಶುರಾಮಗುಗ್ರಿ ಹಾಜರಿದ್ದರು.ಮಹಾವಿದ್ಯಾಲಯದಎಲ್ಲಾ ವಿಭಾಗದ ಮುಖ್ಯಸ್ಥರು ಮತ್ತು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದುಕಾರ್ಯಕ್ರವನ್ನು ಯಶಸ್ವಿಗೊಳಿಸಿದರು.