ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಲು ಕರೆ : ತಾ.ಪಂ ಇಓ ಕೆ.ರಾಜಶೇಖರ್
ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2025 ರ ಜಾಗೃತಿ ಕಾರ್ಯಕ್ರಮ
ಕನಕಗಿರಿ: ಸುಭದ್ರ ದೇಶವನ್ನು ನಿರ್ಮಿಸಲು ಯುವ ಮತದಾರರ ಪಾತ್ರ ನಿರ್ಣಾಯಕವಾಗಿದೆಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷರಾದ ಕೆ.ರಾಜಶೇಖರ್ ಅವರು ಹೇಳಿದರು.
ಅವರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2025 ರ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಬಹಳಷ್ಟು ಯುವಕರು ಮತದಾನದ ಮಹತ್ವದ ಬಗ್ಗೆ ತಿಳಿದುಕೊಂಡಿಲ್ಲ. ಸುಭದ್ರ ಸರ್ಕಾರಕ್ಕೆ ಪ್ರತಿ ಮತ ಅಮೂಲ್ಯ. ಮತದಾನ ಎನ್ನುವುದು ಪವಿತ್ರವಾದ ಕಾರ್ಯ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಕಡ್ಡಾಯವಾಗಿ ಗುರುತಿನ ಚೀಟಿಯನ್ನು ಮಾಡಿಸಿಕೊಳ್ಳಬೇಕು ಎಂದರು.
ನಂತರ ತಹಶೀಲ್ದಾರ್ ವಿಶ್ವನಾಥ ಮುರುಡಿ ಅವರು ಮಾತನಾಡಿ, 18 ವರ್ಷ ತುಂಬಿದ ಎಲ್ಲಾ ಯುವಕ ಮತ್ತು ಯುವತಿಯರು ಅಗತ್ಯವಾದ ವರ್ಗಾವಣೆ ಪ್ರಮಾಣಪತ್ರದ ಪ್ರತಿ, ಆಧಾರ ಕಾರ್ಡ ಪ್ರತಿ, 02 ಪಾಸ್ ಪೋರ್ಟ್ ಸೈಜ್ ಪೋಟೋ ಹಾಗು ಪಾಲಕರ ಮತದಾನ ಗುರುತಿನ ಚೀಟಿಯ ಪ್ರತಿಯೊಂದಿಗೆ ನಿಮ್ಮ ಹತ್ತಿರದ ಮತಗಟ್ಟೆ ಅಧಿಕಾರಿಗೆ ಸಂಪರ್ಕಿಸಿ ನೊಂದಣಿ ಮಾಡಿಕೊಳ್ಳಬೇಕೆಂದು ಯುವ ಮತದಾರರಿಗೆ ಕರೆ ನೀಡಿದರು.
ನಂತರ ಪಟ್ಟಣದ ಸರ್ಕಾರಿ ಪಿಯು ಕಾಲೇಜಿನಲ್ಲೂ ವಿದ್ಯಾರ್ಥಿಗಳಿಗೆ ಮತದಾನ ಕುರಿತು ಜಾಗೃತಿಯನ್ನು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಆಡಳಿತ ಸಿಬ್ಬಂದಿಗಳಾದ ವಿಜಯ್, ಶರಣಬಸವ, ತಾ.ಪಂ ಸಿಬ್ಬಂದಿಗಳಾದ ಪವನಕುಮಾರ್, ಯಂಕೋಬ, ಶಿವಕುಮಾರ್ ಕೆ, ಪಟ್ಟಣ ಪಂಚಾಯತ್ ಸಿಬ್ಭಂದಿಗಳಾದ ಪ್ರಕಾಶ್, ಪುರುಷೋತ್ತಮ ಸೇರಿದಂತೆ ಕಾಲೇಜಿನ ಪ್ರಾರ್ಚಾಯರರು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.
Comments are closed.