ಎನ್ ಪಿಎಸ್ ವಿರುದ್ದ ನಿರಂತರವಾಗಿ ಹೋರಾಟ ಮುಂದುವರಿಯಲಿದೆ: ಶಂಶಾದಬೇಗ್ಂ

Get real time updates directly on you device, subscribe now.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷರಾಗಿ ಶಂಶಾದಬೇಗ್ಂ

ನೌಕರರ‌ ನಿರೀಕ್ಷೆ ಹುಸಿಗೊಳಿಸುವುದಿಲ್ಲ

 

ಕನಕಗಿರಿ: ಇಲ್ಲಿನ‌ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷರಾಗಿ ಶಂಶಾದಬೇಗ್ಂ ಅವರು ಆಯ್ಕೆಯಾದರು. ಪಟ್ಟಣದ ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಮತದಾನ ನಡೆಯಿತು.
ಒಟ್ಟು 26 ಮತಗಳ ಪೈಕಿ ಎಲ್ಲಾ ಮತದಾರರು ತಮ್ಮ ಹಕ್ಕು ಚಲಾಯಿಸಿದರು

.  ಶಂಶಾದಬೇಗ್ಂ ಅವರು 15 ಮತಗಳನ್ನು ಪಡೆದು‌ ಗೆಲುವು ಸಾಧಿಸಿದರೆ ಪ್ರತಿ ಸ್ಪರ್ಧಿ ತುಗ್ಲೆಪ್ಪ ಅವರು 11 ಮತಗಳನ್ನು ಪಡೆದು ಪರಾಭವಗೊಂಡರು. ನೌಕರರ ಸಂಘದ ತಾಲ್ಲೂಕು ಘಟಕದ ನೂತನ ಅಧ್ಯಕ್ಷೆ ಶಂಶಾದಬೇಗಂ ಮಾತನಾಡಿ ತಾಲ್ಲೂಕಿನ  ನೌಕರರು ಹಾಗೂ ಶಿಕ್ಷಕರ ಸಹಕಾರದಿಂದ ಗೆಲುವು ಸಾಧಿಸಿದ್ದೇನೆ, ಎನ್‌ಪಿಎಸ್‌ ನೌಕರರ ಧ್ವನಿಯಾಗಿ ಹಳೆಯ ಪಿಂಚಣಿ ಯೋಜನೆಯ ಸೌಲಭ್ಯ ನೀಡುವಂತೆ ( ಒಪಿಎಸ್) ಹೋರಾಟ ನಡೆಸಲಾಗುವುದು, ಎನ್ ಪಿಎಸ್ ವಿರುದ್ದ ನಿರಂತರವಾಗಿ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು. ತಮ್ಮ ಅವಧಿಯಲ್ಲಿ ನೌಕರರ ನಿರೀಕ್ಷೆಗಳನ್ನು ಹುಸಿಗೊಳಿಸುವುದಿಲ್ಲ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು, ರಾಜ್ಯ , ಜಿಲ್ಲಾಸಂಘದ ಸಹಕಾರದಿಂದ ತಾಲ್ಲೂಕಿನಲ್ಲಿ ನೌಕರರ ಭವನ ಹಾಗೂ ವಸತಿ ಗೃಹ ನಿರ್ಮಾಣಕ್ಕೆ ಯತ್ನಿಸಲಾಗುವುದು ಎಂದು ತಿಳಿಸಿದರು. ಸುಳ್ಳು ಭರವಸೆಗಿಂತ ಬದ್ದತೆಯಿಂದ ಕೆಲಸ ಮಾಡುವುದಾಗಿ ಹೇಳಿದರು. ನೌಕರರ ಹಿತಾಸಕ್ತಿ ಕಾಪಾಡಲು ಶಕ್ತಿ ಮೀರಿ ಪ್ರಯತ್ನಿಸಲಾಗುವುದು ಎಂದರು. ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ‌ ಜುಮ್ಮಣ್ಣವರ್, ಗಂಗಾವತಿ ತಾಲ್ಲೂಕು ಮಾಜಿ ಅಧ್ಯಕ್ಷ ವಿಜಯಪ್ರಸಾದ ಅರ್ಚಕ,  ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ವಿರುಪಣ್ಣ ಕಲ್ಲೂರು, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಕಂಠಿರಂಗ ನಾಯಕ, ಇತರರು ನೂತನ ಅಧ್ಯಕ್ಷರನ್ನು ಸನ್ಮಾನಿಸಿದರು.
ನೌಕರರ ಸಂಘದ ತಾಲ್ಲೂಕು ನಿರ್ದೇಶಕರಾದ ಶೇಖರಯ್ಯ ಕಲ್ಮಠ, ಉಮೇಶ ಕಂದಕೂರು, ಜಗದೀಶ ಟಿ.ಎಸ್,
ಜಿಪಿಟಿ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಕನಕರಾಯ, ಗೌರವಾಧ್ಯಕ್ಷ ಹನುಮಂತಪ್ಪ ಪಚ್ಚಿ, ಶಿಕ್ಷಕರಾದ ಪರಶುರಾಮ, ಮಂಜುನಾಥ ಉದ್ದಿಹಾಳ, ಶಂಕರಗೌಡ ಪೊಲೀಸ್ ಪಾಟೀಲ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ತಿಪ್ಪಣ್ಣ ಮಡಿವಾಳರ, ಯುವ ಮುಂದಾಳುಗಳಾದ ಅನ್ನು ಚಳ್ಳಮರದ, ಶಿವಕುಮಾರ ಈಚನಾಳ ಇತರರು ಇದ್ದರು.ಪಿಐ ಎಂ.ಡಿ. ಫೈಜುಲ್ಲಾ ಅವರು ಬಂದೋ ಬಸ್ತ್ ಒದಗಿಸಿದ್ದರು.

Get real time updates directly on you device, subscribe now.

Comments are closed.

error: Content is protected !!