ಕೊಪ್ಪಳ ಜಿಲ್ಲೆಯ ಐತಿಹಾಸಿಕ ಅಶೋಕ ವೀರಸ್ತಂಭ ಲೋಕಾರ್ಪಣೆ

Get real time updates directly on you device, subscribe now.

: ಕೊಪ್ಪಳ ನಗರದ ವಿಶೇಷತೆಯಾದ ಐತಿಹಾಸಿಕ ಅಶೋಕ ವೀರಸ್ತಂಭವನ್ನು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ ತಂಗಡಗಿ ಅವರು ಆಗಸ್ಟ್ 15ರಂದು ಲೋಕಾರ್ಪಣೆ ಮಾಡಿದರು.
ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಕೊಪ್ಪಳ ಸಂಸದರಾದ ರಾಜಶೇಖರ ಹಿಟ್ನಾಳ, ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ, ವಿಧಾನ ಪರಿಷತ್ ಶಾಸಕರಾದ ಹೇಮಲತಾ ನಾಯಕ, ಮುಖಂಡರಾದ ಅರುಣ ಅಪ್ಪುಶೆಟ್ಟಿ, ಅಕ್ಬರ್ ಪಾಶಾ ಪಲ್ವನ್, ಅಮ್ಜದ್ ಪಟೇಲ್, ಜ್ಯೋತಿ ಎಂ.ಗೊAಡಬಾಳ, ಕಾಟನ್ ಪಾಶಾ, ಕೆ.ಎಂ.ಸಯ್ಯದ್, ಸಲೀಂ ಅಳವಂಡಿ, ಶರಣಪ್ಪ ಸಜ್ಜನ, ಸೇರಿದಂತೆ ಅನೇಕ ಪ್ರಮುಖರು ಸಾಕ್ಷಿಯಾದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್, ಜಿಪಂ ಸಿಇಓ ರಾಹುಲ್ ರತ್ನಂ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ರಾಮ್ ಎಲ್ ಅರಸಿದ್ದಿ, ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಹೇಮಂತಕುಮಾರ, ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ನಗರಸಭೆ ಪೌರಾಯುಕ್ತರಾದ ಗಣಪತಿ ಪಾಟೀಲ, ತಹಸೀಲ್ದಾರರಾದ ವಿಠ್ಠಲ್ ಚೌಗಲಾ ಸೇರಿದಂತೆ ಇನ್ನೀತರರು ಇದ್ದರು.
ಪಟಾಕಿಸಿಡಿಸಿ ಸಂಭ್ರಮ: ಐತಿಹಾಸಿಕ ಅಶೋಕ ವೀರಸ್ತಂಭದ ಉದ್ಘಾಟನೆಗೆ ಸಚಿವರು, ಸಂಸದರು, ಶಾಸಕರು ಆಗಮಿಸುತ್ತಿದ್ದಂತೆ ಸಾರ್ವಜನಿಕರು ಪಟಾಕಿಸಿಡಿಸಿ ಸಂಭ್ರಮಿಸಿದ್ದು ವಿಶೇಷವಾಗಿತ್ತು. ಲೋಕಾರ್ಪಣೆ ಸಮಾರಂಭದ ಹಿನ್ನೆಲೆಯಲ್ಲಿ ಅಶೋಕ ವೀರಸ್ತಂಭವನ್ನು ತಳಿರು ತೋರಣದಿಂದ ಸಿಂಗರಿಸಲಾಗಿತ್ತು.
ಅಶೋಕ ವೀರಸ್ತಂಭದ ಹಿನ್ನೆಲೆ: 1858ರ ಜುಲೈ 1ರಂದು ಯುದ್ದಭೂಮಿಯಲ್ಲಿ ಹೋರಾಡಿ ಮಡಿದ ಕೊಪ್ಪಳ ಜಿಲ್ಲೆಯ ಸ್ವಾತಂತ್ರö್ಯ ಹೋರಾಟಗಾರರಾದ ಮುಂಡರಗಿ ಭೀಮರಾಯ ನಾಡಗೌಡ ಮತ್ತು ಹಮ್ಮಗಿ ಕೆಂಚನಗೌಡ ದೇಸಾಯಿ ಅವರ ಗೌರವಾರ್ಥ 1957ರ ಆಗಸ್ಟ್ 15ರಂದು ಈ ವೀರಸ್ತಂಭವನ್ನು ಸ್ಥಾಪಿಸಲಾಗಿದೆ.

Get real time updates directly on you device, subscribe now.

Comments are closed.

error: Content is protected !!