Sign in
Sign in
Recover your password.
A password will be e-mailed to you.
ಡಾ.ನರಸಿಂಹ ಗುಂಜಹಳ್ಳಿ
ಮಹಿಳೆಯರು ಎಚ್ಚೆತ್ತಕೊಂಡು ತಮಗನಿಸಿದ ಅನಿಸಿಕೆಗಳನ್ನು ಮತ್ತುಭಾವನೆಗಳನ್ನು ಅನಾವರಣಗೊಳಿಸಲು ಸಾಹಿತ್ಯಕ್ಷೇತ್ರವನ್ನು ಪ್ರವೇಶ ಮಾಡಿದ್ದಾರೆ.ಮಹಿಳೆಯರು ತಮ್ಮ ನೋವುಗಳನ್ನುಬರವಣಿಗೆಯ ಮೂಲಕ ಹೊರ ಹಾಕುತ್ತಾ ಮಹಿಳಾ ಸಾಹಿತ್ಯಕ್ಕೆಮುನ್ನುಡಿ ಬರೆದಿದ್ದಾರೆ.
ಮಹಿಳೆಯರಿಗೆ ನಮ್ಮದೇಶದಲ್ಲಿ ಅಷ್ಟು ಸುಲಭವಾಗಿ ಶಿಕ್ಷಣ ದೊರೆತಿಲ್ಲ. ಶಿಕ್ಷಣ ಪಡೆದ ಬಹುತೇಕ ಮಹಿಳೆಯರುತಮ್ಮ ಸಂಸಾರದಲ್ಲಿ ಮುಳುಗಿರುತ್ತಾರೆ. ಆದರೆರೇಣುಕಾಕೋಡಗುಂಟಿಯವರುತಾವು ಪಡೆದ ಶಿಕ್ಷಣದಿಂದ ಸಾಹಿತ್ಯ ಕೃಷಿ ಮಾಡುವುದರ ಮುಖಾಂತರ ಸಮಾಜ ಬದಲಾವಣೆಗೆ ಪೂರಕವಾಗಿ ಕೆಲಸ ಮಾಡುತ್ತಿದ್ದಾರೆ.
ರೇಣುಕಾಕೋಡಗುಂಟಿಅವರುಮೂಲತಃರಾಯಚೂರುಜಿಲ್ಲೆಯ ಮಸ್ಕಿಯವರು. ತಂದೆಅಯ್ಯಪ್ಪಕೋಡಗುಂಟಿ, ತಾಯಿ ಶಾಂತಮ್ಮಕೋಡಗುಂಟಿ. ಇವರದು ಬಡ ಮಧ್ಯಮ ವರ್ಗದಕುಟುಂಬವಾಗಿತ್ತು.ತಂದೆ ಹಣ್ಣಿನ ವ್ಯಾಪಾರ ಮಾಡಿ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿದ್ದಾರೆ.ಇವರತಂದೆತಾಯಿಗೆಒಟ್ಟು ನಾಲ್ಕು ಜನ ಮಕ್ಕಳು, ಅದರಲ್ಲಿಕೊನೆಯವರೆರೇಣುಕಾ.ಒಬ್ಬ ಅಕ್ಕ ಮತ್ತುಇಬ್ಬರುಅಣ್ಣಂದಿರುಇದ್ದಾರೆ.ಬಾಲಾಜಿ ಪೇರ‍್ಮಿಎಂಬುವವರನ್ನು ಮದುವೆಯಾಗಿರುವಇವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ರೇಣುಕಾಕೋಡಗುಂಟಿಯವರುಒಂದನೇತರಗತಿಯಿಂದ ಪಿಯುಸಿವರೆಗೆ ಮಸ್ಕಿಯಲ್ಲಿ ವಿದ್ಯಾಭ್ಯಾಸ ಮಾಡಿದರು. ಅನಂತರ ಲಿಂಗಸೂಗೂರಿನ ವಿ.ಸಿ.ಬಿಕಾಲೇಜಿನಲ್ಲಿ ಬಿ.ಎ ಪದವಿಯನ್ನು ಮುಗಿಸಿದರು. ಉನ್ನತ ವಿದ್ಯಾಭ್ಯಾಸ ಮಾಡುವಹಂಬಲ ಇವರಿಗಿದ್ದುದ್ದರಿಂದ ಮೈಸೂರು ವಿಶ್ವವಿದ್ಯಾನಿಲಯದಕನ್ನಡಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿಯಲ್ಲಿಕನ್ನಡ ಎಂ.ಎ ಮಾಡಿದರು.ಅದೇ ವಿಶ್ವವಿದ್ಯಾನಿಲಯದಲ್ಲಿ ಎಂ.ಫಿಲ್.ನ್ನು ಮಾಡಿದರು.
ರೇಣುಕಾಕೋಡಗುಂಟಿಯವರು೨೦೧೧ರಲ್ಲಿ ಯು.ಜಿ.ಸಿ ನೆಟ್ ಪರೀಕ್ಷೆಯನ್ನು ಪಾಸ್ ಮಾಡಿದರು. ಉಪನ್ಯಾಸಕಳಾಗಬೇಕು ಎಂಬ ಆಸೆ ಇವರದಾಗಿತ್ತು, ಆದರೆ ಬದುಕಿನ ತಿರುವುಗಳಲ್ಲಿ ಇವರ ಆಸೆ ಕೈಗೂಡಲಿಲ್ಲ. ಆದರೂಕೂಡಇವರು ಸುಮ್ಮನೆ ಕೈ ಚೆಲ್ಲಿಕೂಡದೆ ಬೆಂಗಳೂರಿನಲ್ಲಿ ಕನ್ನಡೇತರ ಮಕ್ಕಳಿಗೆ ಕನ್ನಡವನ್ನು ಕಲಿಸಲು ತಮ್ಮದೇಆದ “ಕೃತಿ ದೀವಿಗೆ” ಎಂಬ ಟ್ರಸ್ಟ್‌ನ್ನು ಸ್ಥಾಪಿಸಿ ಅದರ ಮೂಲಕ ಮಕ್ಕಳಿಗೆ ಕನ್ನಡ ಕಲಿಸುವುದಕ್ಕೆ ಪ್ರಾರಂಭ ಮಾಡಿದರು. ಇದರಜೊತೆಗೆ, ಶಾಲಾ ಕಾಲೇಜುಗಳಲ್ಲಿ ಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ದಾರೆ.ಇದರಜೊತೆಗೆ ಸಾಹಿತ್ಯಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಸಾಹಿತ್ಯರಚನೆಯಲ್ಲಿತಮ್ಮನ್ನುತಾವು ತೊಡಗಿಸಿಕೊಂಡಿದ್ದಾರೆ.
ರೇಣುಕಾಕೋಡಗುಂಟಿಯವರಿಗೆ ಮೊದಲಿನಿಂದಲು ಸಾಹಿತ್ಯದಲ್ಲಿಅಪಾರವಾದ ಪ್ರೀತಿಇತ್ತು. ಹೈಸ್ಕೂಲಿನಲ್ಲಿಓದುತ್ತಿರುವಾಗಲೆ ಕವನಗಳನ್ನು ಬರೆಯಲು ಪ್ರಾರಂಭಿಸಿದರು. ಪದವಿ ಓದುವಾಗತಾಲೂಕು ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಭಾಗವಹಿಸುವ ಅವಕಾಶ ಇವರಿಗೆ ಸಿಕ್ಕಿತು.ಕಾಲೇಜುಓದುವ ಸಮಯದಲ್ಲಿಕಾಲೇಜು ವಿದ್ಯಾರ್ಥಿಗಳಿಗಾಗಿ ನಡೆಸಿದ ರಾಜ್ಯಮಟ್ಟದ ಶ್ರೀ ಶಾರದಾಗೋಕಾಕ್‌ದತ್ತಿ ಬಹುಮಾನಕಾವ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದರು.ಪದವಿಯಅಂತಿಮವರ್ಷದಲ್ಲಿ “ಕೆಸರಿನಲ್ಲಿ ಅರಳಿದ ಕಮಲ” ಎಂಬ ನಾಟಕವನ್ನು ರಚಿಸಿ ಸ್ನೇಹಿತರೊಂದಿಗೆ ಸೇರಿ ಬೀಳ್ಕೊಡುಗೆ ಸಮಾರಂಭದಲ್ಲಿಅದನ್ನುರಂಗ ಪ್ರಯೋಗ ಮಾಡಿದ್ದರು.
ಪದವಿ ಮುಗಿಯುತ್ತಿದ್ದಂತೆಇವರುಜನಪದ ಹಾಡುಗಳ ಸಂಗ್ರಹದಲ್ಲಿ ತೊಡಗಿಸಿಕೊಂಡರು.ಕಸಬಾ ಲಿಂಗಸೂಗೂರಿನಅಂಪವ್ವ ಪೂಜಾರಿಎಂಬುವವರುಅದ್ಭುತಜನಪದಕಲಾವಿದರಾಗಿದ್ದರು.ಇವರ ಹಾಡುಗಳನ್ನು ಸಂಗ್ರಹಿಸಿ ೨೦೦೮ ರಲ್ಲಿ “ನಮ್ಮಕನ್ನಾಡ ಪ್ರೇಮದಜೋತಿ” ಎಂಬ ಹೆಸರಿನಲ್ಲಿ ಪುಸ್ತಕವನ್ನು ಪ್ರಕಟಿಸಿದರು.ವಿದ್ಯಾರ್ಥಿಯಾಗಿರುವಾಗಲೆ ಬರೆದ ಕವನಗಳನ್ನೆಲ್ಲ “ಬಳಪದ ಚೂರು” ಎಂಬ ಹೆಸರಿನಲ್ಲಿ ಪ್ರಕಟಿಸಿದರು.ಮೊದಲ ಕವನ ಸಂಕಲನ ಬಂದಬಹಳ ದಿನಗಳ ನಂತರ೨೦೨೧ ರಲ್ಲಿ“ಕಂದೀಲಿನ ಕುಡಿ”ಎಂಬ ಎರಡನೆ ಕವನ ಸಂಕಲನ ಪ್ರಕಟಿಸಿದರು.
ರೇಣುಕಾಕೋಡಗುಂಟಿಯವರುಉನ್ನತ ವಿದ್ಯಾಭ್ಯಾಸಕ್ಕಾಗಿಇವರು ಮೈಸೂರಿಗೆ ಹೋದಾಗಅಲ್ಲಿ ಸಾಹಿತ್ಯ, ಸಂಶೋಧನೆಯಓದು, ಅಧ್ಯಯನ, ಸಾಹಿತಿಗಳ ಒಡನಾಟ, ಇವೆಲ್ಲವುರೇಣುಕಾಕೋಡಗುಂಟಿಯವರ ಸಾಹಿತ್ಯದ ಆಸಕ್ತಿಗೆ ಮತ್ತಷ್ಟು ಪ್ರೇರಣೆ ಸಿಕ್ಕಿದಂತಾಯಿತು.ಈ ಸಂದರ್ಭದಲ್ಲಿಇವರುರಾಜ್ಯದ ಬೇರೆ ಬೇರೆ ಊರುಗಳಲ್ಲಿ ನಡೆದ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ.
ಇವರಸಂಶೋಧನೆಗೆ ಸಂಬಂಧಪಟ್ಟಂತೆಇವರ ಕೃತಿಗಳು “ಕರ್ನಾಟಕದಲ್ಲಿ ಶವಸಂಸ್ಕಾರ (೨೦೦೯)” ಎನ್ನುವ ಮತ್ತು “ಕರ್ನಾಟಕದ ಬುಡಕಟ್ಟುಜನಾಂಗ ಮತ್ತು ಹಿಂದುಳಿದ ಸಮುದಾಯಗಳ ಶವಸಂಸ್ಕಾರ (೨೦೨೦)”ಎರಡು ಕೃತಿಗಳು ತುಂಬಾ ಮುಖ್ಯವಾದವುಗಳಾಗಿವೆ.ಏಕೆಂದರೆಕನ್ನಡದಲ್ಲಿ ಈ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳು ಬಂದಿದ್ದುತುಂಬಾ ವಿರಳ ಅಥವಾಇಲ್ಲವೇಇಲ್ಲಎನ್ನಬಹುದು.ಇಂತಹ ಸೂಕ್ಷ್ಮವಾದ ವಿಷಯವನ್ನು ಅಷ್ಟು ಚಿಕ್ಕ ವಯಸ್ಸಿನಲ್ಲಿಯೆ ಇವರುಅಧ್ಯಯನಕ್ಕೆಆಯ್ಕೆ ಮಾಡಿಕೊಂಡಿರುವುದುಅಚ್ಚರಿ ಮೂಡಿಸುವ ಸಂಗತಿಎಂದು ಹೇಳಿದರೆ ತಪ್ಪಾಗಲಾರದು.
ರೇಣುಕಾಕೋಡಗುಂಟಿಯವರು ಬರೆದಿರುವ‘ಕರ್ನಾಟಕದ ಬುಡಕಟ್ಟುಜನಾಂಗ ಮತ್ತು ಹಿಂದುಳಿದ ಸಮುದಾಯಗಳ ಶವಸಂಸ್ಕಾರ ಪುಸ್ತಕಕ್ಕೆ ಮುನ್ನುಡಿ ಬರೆದಿರುವ ಪ್ರೊ.ಪುರುಷೋತ್ತಮ ಬಿಳಿಮಲೆಯವರು, ‘ನನಗೆ ತಿಳಿದಮಟ್ಟಿಗೆ ಕನ್ನಡದಲ್ಲಿಇಂತದ್ದೊಂದು ಪುಸ್ತಕ ಇದುವರೆಗೆ ಪ್ರಕಟವಾಗಿಲ್ಲ. ಈ ಅರ್ಥದಲ್ಲಿರೇಣುಕಾಕೋಡಗುಂಟಿಅವರ ಈ ಪುಸ್ತಕ ಒಂದುದೊಡ್ಡಕೊರತೆಯನ್ನು ತುಂಬಿಸಿಕೊಡುವ ಮಹಾ ಸಾಹಸದಂತೆ ನನಗೆ ಭಾಸವಾಗುತ್ತದೆ” ಎಂದು ಹೇಳಿದ್ದಾರೆ.
ರೇಣುಕಾಕೋಡಗುಂಟಿಯವರ ಕೃತಿಗಳು
ನಮ್ಮಕನ್ನಾಡ ಪ್ರೇಮದಜೋತಿ (ಅಂಪವ್ವ ಪೂಜಾರಿ ಕಸಬಾ ಲಿಂಗಸೂಗೂರುಇವರು ಹಾಡಿರುವ ೧೩೨ ಜನಪದ ಹಾಡುಗಳು) ೨೦೦೮ ರಲ್ಲಿ ಪ್ರಕಟಣೆ.ಕರ್ನಾಟಕದಲ್ಲಿ ಶವಸಂಸ್ಕಾರ, ಸಂಪಾದಿತಕೃತಿ (ಸಂಶೋಧನೆ) ೨೦೦೯ ರಲ್ಲಿ ಪ್ರಕಟಣೆ.ಬಳಪದ ಚೂರು (ಕವನ ಸಂಕಲನ) ೨೦೧೧ ರಲ್ಲಿ ಪ್ರಕಟಣೆ.ಕನ್ನಡ ಭಾಷಾವಿಜ್ಞಾನ ಸಂಶೋಧನೆ:ಇಂದು. ಸಂಪಾದಿತಕೃತಿ (ಭಾಷಾವಿಜ್ಞಾನ) ೨೦೧೧ ರಲ್ಲಿ ಪ್ರಕಟಣೆ.ಇಜಬೂಪನ ಪದ (ಜನಪದಖಂಡಕಾವ್ಯ) ೨೦೧೯ರಲ್ಲಿ ಪ್ರಕಟಣೆ.ಕರ್ನಾಟಕದ ಹಿಂದುಳಿದ ಮತ್ತು ಬುಡಕಟ್ಟುಸಮುದಾಯಗಳಲ್ಲಿ ಶವಸಂಸ್ಕಾರ, ಸಂಪಾದಿತಕೃತಿ (ಸಂಶೋಧನೆ) ೨೦೨೦ ರಲ್ಲಿ ಪ್ರಕಟಣೆ.ಕಂದೀಲಿನ ಕುಡಿ (ಕವನ ಸಂಕಲನ) ೨೦೨೧ ರಲ್ಲಿ ಪ್ರಕಟಣೆ.ನಿಲುಗನ್ನಡಿ (ಕತಾ ಸಂಕಲನ) ೨೦೨೧ ರಲ್ಲಿ ಪ್ರಕಟಣೆ.ಕರ್ನಾಟಕದಜನಪದಆಟಗಳು, ಸಂಪಾದಿತಕೃತಿ, ೨೦೨೩ ರಲ್ಲಿ ಪ್ರಕಟಣೆ.ಚಿಗುರೊಡೆದ ಬೇರು (ಕಥಾ ಸಂಕಲನ) ೨೦೨೪ ರಲ್ಲಿ ಪ್ರಕಟಣೆ. ಮಂಜಿನ ಮಣಿ ಸಾಲು (ಹಾಯ್ಕು ಸಂಕಲನ) ೨೦೨೪ ರಲ್ಲಿ ಪ್ರಕಟಣೆ.ಪಾಟಿಚೀಲ (ಮಕ್ಕಳ ಕಥೆಗಳು) ೨೦೨೪ ರಲ್ಲಿ ಪ್ರಕಟಣೆಗೊಂಡಿವೆ.
ಪ್ರಶಸ್ತಿಗಳ ಗರಿ
ಇವರಿಗೆಇವರನಿಲುಗನ್ನಡಿಕೃತಿಗೆ “ಡಾ.ಪಂ.ಪುಟ್ಟರಾಜ ಸಾಹಿತ್ಯ ಪುರಸ್ಕಾರ ಸಿಕ್ಕಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ‘ಮಲ್ಲಿಕಾದತ್ತಿ ಪ್ರಶಸ್ತಿ’ದೊರೆತಿದೆ.ಇವರುಕರ್ನಾಟಕ ಲೇಖಕಿಯರ ಸಂಫದ “ತ್ರಿವೇಣಿ ಸಾಹಿತ್ಯ ಪುರಸ್ಕಾರ’ ರಾಜ್ಯಮಟ್ಟದ ಮೂರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವರುಜನಪದ ಸಾಹಿತ್ಯದಲ್ಲಿ ಮಾಡಿರುವ ಸೇವೆಯನ್ನು ಗುರುತಿಸಿ ರಾಯಚೂರುಜಿಲ್ಲೆಯಎರಡನೆಜನಪದ ಸಾಹಿತ್ಯ ಸಮ್ಮೇಳನದಲ್ಲಿ “ಎಡೆದೊರೆ ನಾಡಿನಜನಪದ ಸಾಧಕರು” ಎಂಬ ಪ್ರಶಸ್ತಿಯನ್ನು ನೀಡಿಗೌರವಿಸಲಾಯಿತು.ಇವುಗಳಷ್ಟೇ ಅಲ್ಲದೆ ಬಿಡಿ ಕಥೆ, ಕವನಗಳಿಗೆ ಸಾಕಷ್ಟು ಬಹುಮಾನಗಳನ್ನು ಪಡೆದಿದ್ದಾರೆ. ಅವುಗಳಲ್ಲಿ ಕೆಲವನ್ನು ನೋಡುವುದಾದರೆ,
‘ಕುಲುಮೆಕಥೆಗೆ ವಿಜಯಕರ್ನಾಟಕ ಮತ್ತು ವೀರಲೋಕ ಪ್ರತಿಷ್ಠಾನ ಇವರ ಸಹಯೋಗದಲ್ಲಿ೨೦೨೩ ರಲ್ಲಿನಡೆದ ದೀಪಾವಳಿ ಕಥಾಸ್ಪರ್ಧೆಯಲ್ಲಿಟಾಪ್ ೨೫ ರಲ್ಲಿ ಸ್ಥಾನ ಪಡೆದಿದೆ. ‘ಗಂಡಾರ‍್ತಿ’ ಕಥೆಗೆ ವಿಷ್ಣು ಸೇನಾ ಧಾರವಾಡಇವರು ನಡೆಸಿದ ಕರ್ನಾಟಕರಾಜ್ಯೋತ್ಸವದ ಅಂಗವಾಗಿ ೨೦೨೩ ರಲ್ಲಿನಡೆದಕಥಾ ಸ್ಪರ್ಧೆಯಲ್ಲಿಟಾಪ್ ೨೫ ರಲ್ಲಿ ಸ್ಥಾನ ಪಡೆದಿದೆ. ‘ಮತ್ತೊಮ್ಮೆ ಬಸವಣ್ಣ’ ಎಂಬ ಕವನಕ್ಕೆ ‘ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನ ಬಹುಮಾನ೨೦೨೦ರಲ್ಲಿ ಬಂದಿದೆ.‘ಸುನಾಮಿ’ ಎಂಬ ಕವನಕ್ಕೆ ‘ಶಾರದಾಗೋಕಾಕ್‌ದತ್ತಿನಿಧಿ ಬಹುಮಾನ ೨೦೦೫ರಲ್ಲಿ ಸಿಕ್ಕಿದೆ. ‘ಕಂದೀಲು” ಕವನಕ್ಕೆ ಮೈಸೂರಿನ ‘ಗ್ರಾಮಾಂತರ ಬುದ್ಧಿ ಜೀವಿಗಳ ಸಂಘ’ ಇವರು ಏರ್ಪಡಿಸಿದ ಸ್ಪರ್ಧೆಯಲ್ಲಿ ‘ದಸರಾ-ಕನ್ನಡರಾಜ್ಯೋತ್ಸವಕಾವ್ಯ ಪುರಸ್ಕಾರ’ ಪ್ರಶಸ್ತಿಯು ೨೦೨೧ರಲ್ಲಿ ಬಂದಿದೆ. ‘ಅವ್ವ’ ಎಂಬ ಕವನಕ್ಕೆ ‘ಬೆವರ ಸಿರಿ’ ಸಂಸ್ಥೆ ಬೆಂಗಳೂರು ಇವರು ನಡೆಸಿದ ಕವನ ಸ್ಪರ್ಧೆಯಲ್ಲಿ ಬಹುಮಾನವು೨೦೦೮ರಲ್ಲಿ ಸಿಕ್ಕಿದೆ.‘ಕನ್ನಡ ಕಲಿಕೆ’ ಎಂಬ ಮಕ್ಕಳ ಕಥೆಗೆ ಮಕ್ಕಳ ಸಾಹಿತ್ಯ ಪರಿಷತ್ತುರಾಯಚೂರುಇವರು ಏರ್ಪಡಿಸಿದ ಮಕ್ಕಳ ಕಥಾ ಸ್ಫರ್ಧೆಯಲ್ಲಿ ಮೂರನೆ ಬಹುಮಾನವು೨೦೨೦ರಲ್ಲಿ ಬಂದಿದೆ.
ರೇಣುಕಾಕೋಡಗುಂಟಿಯವರುಕೇವಲ ಸಂಶೋಧನೆ ಮಾತ್ರವಲ್ಲದೆಕಥೆ, ಕವನಗಳನ್ನೂ ಕೂಡ ರಚಿಸಿದ್ದಾರೆ. ಸಂಶೋಧನೆ, ಜನಪದ, ಕಥೆ, ಕವನ ಎಲ್ಲಾ ಸೇರಿಇದುವರೆಗೆಒಟ್ಟು ೧೨ ಕೃತಿಗಳನ್ನು ಪ್ರಕಟಿಸಿದ್ದಾರೆ.ಗೃಹಿಣಿಯಾಗಿರುವಇವರುಎಲೆಮರೆಕಾಯಿಯಂತೆಇದ್ದುಕೊಂಡುಕನ್ನಡ ಸಾಹಿತ್ಯ ಲೋಕಕ್ಕೆ ಅತ್ಯಮೂಲ್ಯವಾದ ಸೇವೆ ಸಲ್ಲಿಸುತ್ತಿದ್ದಾರೆ.ಆಕ್ಸಫರ್ಡ್ ವಿಶ್ವವಿದ್ಯಾನಿಲಯದಇಂಗ್ಲೀಷ್-ಕನ್ನಡ-ಕನ್ನಡ ಪ್ರೊಜೆಕ್ಟ್‌ನಲ್ಲಿಕನ್ನಡಎಡಿಟರ್ ಆಗಿ ಕೆಲಸ ಮಾಡಿದ್ದಾರೆ.
ಇವರ ಮತ್ತೊಂದು ವಿಶೇಷತೆಎಂದರೆಇವರು ಬರೆದಿರುವ ಕಥೆಗಳು ಸಂಪೂರ್ಣವಾಗಿರಾಯಚೂರುಜಿಲ್ಲೆಯ ಮಸ್ಕಿ ಪ್ರದೇಶದ ಭಾಷೆಯಲ್ಲಿ ಇವೆ. ಭಾಷೆಯನ್ನು ಮಾತನಾಡುವುದು ಸುಲಭಆದರೆ ಆ ಗ್ಯಾಮ್ಯ ಭಾಷೆಯನ್ನು ಅಕ್ಷರಗಳಲ್ಲಿ ಹಿಡಿದಿಡುವುದು ಅಷ್ಟು ಸುಲಭವಲ್ಲ. ಆದರೆಇವರುತಮ್ಮ ಕಥೆಗಳಲ್ಲಿ ಮಸ್ಕಿ ಭಾಷೆಯನ್ನು ಸಮರ್ಥವಾಗಿ ಬಳಸಿದ್ದಾರೆ. ಇವರ ಕಥೆಗಳನ್ನು ಓದಿದವರೆಲ್ಲ “ಭಾಷೆಯೇಇವರ ಶಕ್ತಿ” ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಇಷ್ಟಲ್ಲದೇರೇಣುಕಾಕೋಡಗುಂಟಿಯವರ ‘ನಿಲುಗನ್ನಡಿ’ ಕಥಾ ಸಂಕಲನದ ಕಥೆಗಳ ಆಧಾರಿತ ನಾಟಕವೊಂದು ಸಿದ್ಧವಾಗುತ್ತಲಿದೆ.ಇನ್ನು ಕೆಲವೇ ದಿನಗಳಲ್ಲಿ ರಂಗದ ಮೇಲೆ ಪ್ರದರ್ಶನಗೊಳ್ಳಲಿದೆ.ರೇಣುಕಾಕೋಡಗುಂಟಿಯವರುಅವರಬರವಣಿಗೆ ಸಮಾಜ ಬದಲಾವಣೆಗೆ ಪೂರಕವಾಗಲಿ ಮತ್ತುಅವರಸಾಹಿತ್ಯ ಕೃಷಿ ಇನ್ನಷ್ಟು ಪಸರಿಸಲಿಎಂದು ಹಾರೈಸೋಣ.
ರೇಣುಕಾಕೋಡಗುಂಟಿಯವರ ಸಂಪರ್ಕದ ಮೋಬೈಲ್ ಸಂಖ್ಯೆ : ೮೦೯೫೮೯೭೧೧೮.
ಡಾ. ನರಸಿಂಹ ಗುಂಜಹಳ್ಳಿ
ಸಹಾಯಕ ಪ್ರಾಧ್ಯಾಪಕರು, ಪತ್ರಿಕೋದ್ಯಮ ವಿಭಾಗ,
ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು, ಕೊಪ್ಪಳ
ಮೊ: ೯೯೦೨೯೨೭೯೪೫
Get real time updates directly on you device, subscribe now.