ನಮ್ಮ ನಾಡು ನಮ್ಮ ಹೆಮ್ಮೆ ಸ್ವಾತಂತ್ರೋತ್ಸವ ವಿಶೇಷಾಂಕ ಲೋಕಾರ್ಪಣೆ
ಕೊಪ್ಪಳ : 78ನೇ ಸ್ವಾತಂತ್ರ್ಯೋತ್ಸವ ನಿಮಿತ್ತ ನಾಲ್ಕು ದಿಕ್ಕು ದಿನಪತ್ರಿಕೆ ಹಾಗೂ ಕನ್ನಡ ನೆಟ್ ಡಾಟ್ ಕಾಮ್ ವತಿಯಿಂದ ನಮ್ಮ ನಾಡು ನಮ್ಮ ಹೆಮ್ಮೆ ಎನ್ನುವ ವಿಶೇಷ ಸಂಚಿಕೆಯನ್ನು ಲೋಕಾರ್ಪಣೆ ಮಾಡಲಾಯಿತು.
ಇಂದು ಅಶೋಕ್ ಸರ್ಕಲ್ ನ ಲೋಕಾರ್ಪಣೆಯ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ , ಶಾಸಕ ರಾಘವೇಂದ್ರ ಹಿಟ್ನಾಳ್ ಸಂಸದ ರಾಜಶೇಖರ ಹಿಟ್ನಾಳ್, ಜಿಲ್ಲಾಧಿಕಾರಿ ನಳಿನ ಅತುಲ್ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಮ್ ಪಾಂಡೆ ಲೋಕಾರ್ಪಣೆ ಮಾಡಿದರು.
ಕೊಪ್ಪಳದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ಇತಿಹಾಸ ಹಾಗೂ ಅಶೋಕ ಸರ್ಕಲ್ ಸ್ಥಾಪನೆಯ ಹಿಂದಿನ ಇತಿಹಾಸ ಹಾಗೂ ಹೋರಾಟದ, ತ್ಯಾಗ ಬಲಿದಾನದ ಕುರಿತು ಈ ವಿಶೇಷ ಸಂಚಿಕೆಯಲ್ಲಿ ಲೇಖನಗಳನ್ನು ಪ್ರಕಟಿಸಲಾಗಿದೆ.
ಈ ಸಂದರ್ಭದಲ್ಲಿ ಮುಖಂಡರಾದ ಕೆ ಎಂ ಸಯ್ಯದ್, ಕಾಟನ್ ಪಾಷಾ, ಜ್ಯೋತಿ ಗೊಂಡಬಾಳ, ನಗರಸಭೆಯ ಮುಖ್ಯ ಅಧಿಕಾರಿ ಗಣಪತಿ ಪಾಟೀಲ್ ಹಾಗೂ ನಗರಸಭೆಯ ಸದಸ್ಯರಾದ ಅಜೀಮ್ ಅತ್ತಾರ, ಅರುಣ್ ಶೆಟ್ಟಿ, ಚೆನ್ನಪ್ಪ ಕೋಟ್ಯಾಳ, ರಾಜಶೇಖರ ಅಡೂರ್ ಅಮ್ಜದ್ ಪಟೇಲ್, ಗವಿಸಿದ್ದಪ್ಪ ಚಿನ್ನೂರ್ , ತೋಟಪ್ಪ ಕಾಮನೂರ್, ನಿಂಗಜ್ಜ ಚೌದರಿ, ಅಲ್ಲಮಪ್ರಭು ಬೆಟ್ಟದೂರು, ಮಾನ್ವಿ ಪಾಷಾ, ಚಿಕನ್ ಪೀರಾ , ಎಚ್ ವಿ ರಾಜಭಕ್ಷಿ, ಸಿರಾಜ್ ಬಿಸರಳ್ಳಿ ಖಲೀಲ್ ಹುಡೆವು, ಅಖಿಲ್ ಉಡೆವು, ಸೇರಿದಂತೆ ಇತರರು ಉಪಸ್ಥಿತರಿದ್ದರು.
Comments are closed.