ಕೊಪ್ಪಳ ಪಿಕಾರ್ಡ್ ಬ್ಯಾಂಕಿಗೆ : ಲಕ್ಷ್ಮೀದೇವಿ ಚೌದ್ರಿ ,ಸಂಗನಗೌಡ ,ರಾಮಣ್ಣ ಅವಿರೋಧ ಆಯ್ಕೆ

Get real time updates directly on you device, subscribe now.

ಕೊಪ್ಪಳ : ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿ. ಕೊಪ್ಪಳ ಇದರ ಸನ್ 2024-25 ರಿಂದ 2029-30ನೇ ಸಾಲಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರ ಸಾಮಾನ್ಯ ಚುನಾವಣೆಯಲ್ಲಿ  ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹುಲಗಿ ಸಾಮಾನ್ಯ ಮಹಿಳಾ ಮೀಸಲು ಕ್ಷೇತ್ರದಿಂದ ಶ್ರೀಮತಿ ಲಕ್ಷ್ಮೀದೇವಿ ನಿಂಗಜ್ಜ ಶಹಪುರ (ಚೌದ್ರಿ) ಹಾಗೂ ಇರಕಲ್ಲಗಡಾ ಸಾಮಾನ್ಯ ಕ್ಷೇತ್ರದಿಂದ ಸಂಗನಗೌಡ ಬಿ.ಟಿ. ಪಾಟೀಲ ಹಾಗೂ ಕೊಪ್ಪಳ ಪರಿಶಿಷ್ಟ ಪಂಗಡ ಕ್ಷೇತ್ರದಿಂದ ರಾಮಣ್ಣ ಕಲ್ಲನ್ನವರ  ಒಟ್ಟು ಏಳು ಜನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಗವಿಸಿದ್ದಪ್ಪ ಹುಳ್ಳಿ. ಕರೆಕಲ್ಲಪ್ಪ ಒಣಬಳ್ಳಾರಿ. ರಾಮನಗೌಡ ಡಂಬ್ರಳ್ಳಿ. ವಿರೇಶ ಕಿನ್ನಾಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.   ಆಯ್ಕೆಗೆ ಕಾರಣಿಕರ್ತರಾದ ಮಾಜಿ ಶಾಸಕರು ಹಾಗೂ ಹಿರಿಯರಾದ   ಕೆ ಬಸವರಾಜ್ ಹಿಟ್ನಾಳ್  ಹಾಗೂ ಮಾಜಿ ಸಂಸದ ಸಂಗಣ್ಣ ಕರಡಿ, ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಹಾಗೂ ಸಂಸದರಾದ ಕೆ.ರಾಜಶೇಖರ್ ಹಿಟ್ನಾಳ  ಹಾಗೂ ಕಾಂಗ್ರೆಸ್ ಪಕ್ಷದ ಎಲ್ಲ ಮುಖಂಡರುಗಳಿಗೆ ಅಭಿನಂದಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!