ರಾಮಚಂದ್ರಪ್ಪ ಪರಶುರಾಮಪ್ಪ ನಾಯಕ್ ನಿಧನ
ರಾಮಚಂದ್ರಪ್ಪ ಪರಶುರಾಮಪ್ಪ ನಾಯಕ್ ( 75 ವರ್ಷ ) ಮಾಜಿ ರಾಜ್ಯಾಧ್ಯಕ್ಷರು ಬೆಂಗಳೂರು ಹಾಗೂ ಪ್ರಥಮ ಕೊಪ್ಪಳ ಜಿಲ್ಲಾ ಅಧ್ಯಕ್ಷರು ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಇವರು ಇಂದು ಬೆಳಿಗ್ಗೆ 10 ಗಂಟೆಗೆ ನಿಧನರಾಗಿದ್ದಾರೆ.
ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷೆ ಮಾಲತಿ ನಾಯಕ್ ಸೇರಿ ಮೃತರಿಗೆ ಆರು ಮಕ್ಕಳು. ಇಬ್ಬರು ಹೆಣ್ಣು ಮಕ್ಕಳು ಮತ್ತು ನಾಲ್ಕು ಜನ ಗಂಡು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಕುಷ್ಟಗಿ ನಗರ ವಾರ್ಡ್ ನಂಬರ್ 4 ಮಾಜಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಅವರ ಮನೆಯ ಹತ್ತಿರ ಮಾಲತಿ ನಾಯಕ್ ಅವರ ನಿವಾಸದಲ್ಲಿ ಬೆಳಗ್ಗೆ 10 ಗಂಟೆಯವರೆಗೆ ಅಂತಿಮ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿದೆ. ನಂತರ ಅಂತ್ಯ ಸಂಸ್ಕಾರವನ್ನು ಬುಧವಾರ 25/12/24 ಬೆಳಿಗ್ಗೆ 11:00 ಗಂಟೆಗೆ ಮೃತರ ಸ್ವಗ್ರಾಮ ಕುಷ್ಟಗಿ ತಾಲೂಕಿನ ಚಳಗೇರಿ ಗ್ರಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.