ಕೊಪ್ಪಳ ಪ್ರಾಥಮಿಕ ಕೃಷಿ ಪತ್ತಿನ ಸಂಘ‌ : ಅಧ್ಯಕ್ಷರಾಗಿ ರಾಜಶೇಖರಗೌಡ ಆಡೂರು, ಉಪಾಧ್ಯಕ್ಷರಾಗಿ ಅಬ್ದುಲ್ ಲತೀಫ್  ಖತೀಬ್ ಅವಿರೋಧ ಆಯ್ಕೆ.

0

Get real time updates directly on you device, subscribe now.

ಕೊಪ್ಪಳ : ಕೊಪ್ಪಳ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಅಧ್ಯಕ್ಷರಾಗಿ ರಾಜಶೇಖರಗೌಡ ಆಡೂರು, ಉಪಾಧ್ಯಕ್ಷರಾಗಿ ಅಬ್ದುಲ್ ಲತೀಫ್  ಖತೀಬ್ (ಬಾಷುಸಾಬ್ ಖತೀಬ್)  ಅವಿರೋಧವಾಗಿ ಆಯ್ಕೆಗೊಂಡಿದ್ದಾರೆಂದು ಚುನಾವಣಾಧಿಕಾರಿ ಘೋಷಿಸಿದರು.
ಈ ಸಂದರ್ಭದಲ್ಲಿಆಡಳಿತ ಮಂಡಳಿಯ ನಿರ್ದೇಶಕರಾದ ದೇವಪ್ಪ ಸೊಂಪುರ, ಪ್ರಭುಗೌಡ  ಈಶ್ವರಗೌಡ, ಮುಕ್ಕಣ್ಣ ಹೊಸಗೇರಿ, ಗವಿಸಿದ್ದನಗೌಡ  ಅಂಗಡಿ, ಶಿವಾನಂದಪ್ಪ ಮೆತಗಲ್ಲ, ಅಜಯ  ದೊಡ್ಡಮನಿ, ಬಸವರಾಜ  ಬಂಡಿ,ವಿಶ್ವನಾಥ ಅಗಡಿ,ರಾಬಿಯ ಬೇಗಂ ಆದೋನಿ,ಪವಿತ್ರಾ  ಹಿರೇಮಠ ಉಪಸ್ಥಿತರಿದ್ದರು.
ನೂತನ ಅಧ್ಯಕ್ಷ ರಾಜಶೇಖರ್ ಗೌಡ ಆಡೂರು ಮಾತನಾಡಿ‌ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ಎರಡನೇ ಬಾರಿಗೆ ಅವಿರೋಧವಾಗಿ ಆಯ್ಕೆಗೊಳಿಸಿದ್ದು ಸಂತಸ ತಂದಿದೆ, ಸಂಘದ ಅಭಿವೃದ್ಧಿಗೆ ಎಲ್ಲ ಆಡಳಿತ ಮಂಡಳಿ ಸದಸ್ಯರ ಸಲಹೆ ಸೂಚನೆ ಮೇರೆಗೆ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ನಗರಸಭೆಯ ಅಧ್ಯಕ್ಷ ‌ ಅಮ್ಜದ್ ಪಟೇಲ್, ಕೆಪಿಸಿಸಿ ಸಂಯೋಜಕ ಹಾಗೂ ಉದ್ಯಮಿ ಕೆ.ಎಂ.ಸಯ್ಯದ್ , ಕಾಂಗ್ರೆಸ್ ಪಕ್ಷದ ನಗರ ಘಟಕದ ಅಧ್ಯಕ್ಷ ಎಂ.ಕಾಟನ್ ಪಾಷಾ ಮುಖಂಡರಾದ ಜಗದೀಶ ಗುಳ್ಳಾ,ಬಸವರಾಜ ಶಹಪುರ, ಬಾಬಾ ಅರಗಂಜಿ, ದೇವಪ್ಪ ಓಜನಹಳ್ಳಿ, ಬಸವರಾಜ್ ಈಶ್ವರಗೌಡರು, ಮಾನ್ವಿ ಪಾಷಾ, ಬಸವರೆಡ್ಡಿ ಶಿವನಗೌಡ, ಚಾಂದಪಾಷಾ ಕಿಲ್ಲೇದಾರ, ರಮೇಶ ಕವಲೂರು, ಶಿವಕುಮಾರ ಕುಕನೂರು, ಅಶೋಕ್ ಕುಂಬಾರ್, ಸೇರಿದಂತೆ ಮತ್ತಿತರರು ಆಗಮಿಸಿ ಶುಭ ಕೋರಿದರು.

Get real time updates directly on you device, subscribe now.

Leave A Reply

Your email address will not be published.

error: Content is protected !!