ಸ್ವಾತಂತ್ರ್ಯದ ಘನತೆ ಎತ್ತಿ ಹಿಡಿಯಬೇಕು — ಡಾ.ಷಣ್ಮಖಯ್ಯ ತೋಟದ
ಕೊಪ್ಪಳ : ಅಳವಂಡಿ ಹೋಬಳಿ ಮೈನಹಳ್ಳಿ ಗ್ರಾಮದ ಸ.ಹಿ.ಪ್ರಾ.ಶಾಲೆಯಲ್ಲಿ ಸ್ವಾತಂತ್ರ್ಯದಿನೋತ್ಸ
ವದಂದು ಶ್ರೀ ಅಡವಿಬಸಯ್ಯ ತೋಟದ ಶಿಕ್ಷಣ , ಸಾಹಿತ್ಯ, ಮತ್ತು ಸಾಂಸ್ಕೃತಿಕ ಸಂಸ್ಥೆ (ರಿ) ಮೈನಹಳ್ಳಿ ಸಂಸ್ಥೆಯ ಸಂಸ್ಥಾಪಕರಾದ ಡಾ.ಷಣ್ಮುಖಯ್ಯ ತೋಟದ ಮಾತಾಡುತ್ತ ಸ್ವಾತಂತ್ರ್ಯಕ್ಜಾಗಿ ಅನೇಕ ನಾಯಕರು ತಮ್ಮ ಜೀವನ ಬಲಿದಾನ ಮಾಡಿದ್ದಾರೆ ಆ ಸ್ವಾತಂತ್ರ್ಯಕ್ಕೆ ದಕ್ಕೆಯಾಗದಂತೆ ಅದರ ಘನತೆ ಎತ್ತಿ ಹಿಡಿಯಬೇಕೆಂದು ತಿಳಿಸಿದರು.
ತಂದೆ ತಾಯಿಯವರ ಸವಿನೆನಪಗಾಗಿ ಶಾಲೆಯ ಎಲ್ಲಾ ವಿಧ್ಯಾರ್ಥಿಗಳಿಗೆ ನೋಟ ಬುಕ್ಕ್, ಪೆನ್ನು, ಪೆನ್ಸಿಲ್, ಜಾಮೆಟ್ರಿ ಬಾಕ್ಸ್ ಮತ್ತು ಮೂರು ಅಂಗನವಾಡಿ ಕೇಂದ್ರಗಳಿಗೆ ಬುಕ್ಕ್ ರಾಕ್ ವಿತರಣೆ ಮಾಡಿದರು ಮತ್ತು ೫ ಮತ್ತು ೮ ನೇ ತರಗತಿಯಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ಸಮಾರಂಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಡಾ.ಷಣ್ಮುಖಯ್ಯ ತೋಟದವರಿಗೆ ಸನ್ಮಾನ ಮಾಡಿದರು
ಸಮಾರಂಭದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯರು ಮತ್ತು ಕ.ರಾ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶಂಭುನಗೌಡ್ರು ಪಾಟೀಲ ಮಾತನಾಡುತ್ತ ಶಾಲೆಯ ಸುಧಾರಣೆ ಮತ್ತು ಸ್ವಾತಂತ್ರ್ಯದ ಬಗ್ಗೆ ತಿಳಿಸಿದರು. ಎಸ್.ಡಿ.ಎಮ್.ಎಸ್. ಅಧ್ಯಕ್ಷರಾದ ಮಹೇಂದ್ರಕಮಾರ ಕುರಡಿಗಿ ಧ್ವಜಾರೋಹಣ ನೇರವೇರಿಸಿ ಮಾತನಾಡಿದರು. ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಮರಿಶಾಂತವೀರಸ್ವಾಮಿ ಚಕ್ಕಡಿ ಸ್ವಾತಂತ್ರ್ಯದ ಬಗ್ಗೆ ಮಾತನಾಡಿದರು , ಸಿದ್ದರಡ್ಡಿ ಡಂಬ್ರಳ್ಳಿ,
ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು, ಊರ ಗುರುಹಿರಿಯರು , ಗಣ್ಯರು ಶಾಲೆಯ ಸಹ ಶಿಕ್ಷಕರು ಸಮಾರಂಭದಲ್ಲಿ ಭಾಗವಹಿಸಿದ್ದರು.
Comments are closed.