ಸರ್ವರ ಜೀವನದಲಿ ಗುರುವಿನ ಪಾತ್ರ ದೊಡ್ಡದು

Get real time updates directly on you device, subscribe now.


ಕೊಪ್ಪಳ :ಸರ್ವರಜೀವನದಲ್ಲಿಗುರುವಿನ ಪಾತ್ರದೊಡ್ಡದು. ಸಮರ್ಥಗುರುದೊರೆತವನು ಮಹಾನ್ ಸಾಧಕರಾಗಿ ಸಮಾಜಕ್ಕೆ ಸಾರ್ಥಕವಾಗಿದ್ದಾರೆಅಂತಹ ಮಹಾನ್ ಪುರುಷರ ಸ್ಮರಣೆ ಬಹುಮುಖ್ಯಎಂದು ಭಾಗ್ಯನಗರದಶ್ರೀ ಶಂಕರಚಾರ್ಯ ಮಠದ ಪರಮಪೂಜ್ಯ ಶ್ರೀ ಶಿವಪ್ರಕಾಶ ಮಹಾಸ್ವಾಮಿಗಳು ಹೇಳಿದರು.ಅವರುಗುರುಪೂರ್ಣಿಮೆಯ ಅಂಗವಾಗಿ ಶ್ರೀ ಗವಿಸಿದ್ಧೇಶ್ವರ ಸಂಗೀತ ವಿದ್ಯಾಪೀಠ (ರಿ) ಗವಿಮಠ ಕೊಪ್ಪಳ ಇವರ ವತಿಯಿಂದಭಾಗ್ಯನಗರದಜಗದ್ಗುರು ಶ್ರೀ ಶಂಕರಾಚಾರ್ಯಮಠದಲ್ಲಿರವಿವಾರ ಸಾಯಂಕಾಲ ಹಮ್ಮಿಕೊಂಡಗಾನಯೋಗಿಪಂ.ಪಂಚಾಕ್ಷರಿ ಗವಾಯಿಗಳ ಹಾಗೂ ನಾಡೋಜ ಪಂ. ಪುಟ್ಟರಾಜ ಕವಿಗವಾಯಿಗಳ ಸ್ವರ ಸ್ಮರಣೆಕಾರ್ಯಕ್ರಮದಅಧ್ಯಕ್ಷತೆಯನ್ನುವಹಿಸಿ ಮಾತನಾಡಿದರು.ಅವರು ಮಾತನಾಡಿ ಗಾನಯೋಗಿಗಳಿಬ್ಬರ ಗುರು-ಶಿಷ್ಯರ ಜೀವನ ಮತ್ತು ಸಂಗೀತಕ್ಷೇತ್ರಕ್ಕೆ ನೀಡಿದಕೊಡುಗೆಅಪಾರಎಂದು ಹೇಳಿದರು.
ಮುಖ್ಯ ಅತಿಥಿಗಳಾದ ಜ್ಞಾನಬಂಧು ವಸತಿಶಾಲೆಯಅಧ್ಯಕ್ಷರಾದದಾನಪ್ಪಕವಲೂರ ಮಾತನಾಡಿ ನಾನು ಕೂಡಾಶ್ರೀ ಗವಿಸಿದ್ಧೇಶ್ವರ ಸಂಗೀತ ವಿದ್ಯಾಪೀಠದ ಹಳೆಯ ವಿದ್ಯಾರ್ಥಿಯಾಗಿದ್ದುನನ್ನ ಪುಣ್ಯದ ಫಲ. ಸಂಗೀತ ನೃತ್ಯ,ಶಿಲ್ಪಕಲೆಗಳಿಗೆ ಕ್ಷೇತ್ರಗಳಲ್ಲಿ ಅಮೋಘ ಸಾಧನೆಗೆ ಗುರುಗಳ ಮಾರ್ಗದರ್ಶನ ಹಾಗೂ ಆಶೀರ್ವಾದ ಅತಿಅವಶ್ಯಎಂದು ಹೇಳಿದರು. ವಿದ್ಯಾಪೀಠದಪದ್ದತಿಯಂತೆ ಭಾಗ್ಯನಗರದ ಹಿರಿಯಕಲಾವಿದರಾದ ಶ್ರೀ ರಾಮಚಂದ್ರಪ್ಪಇವರಿಗೆಹಿರಿಯಕಲಾವಿದರಗೌರವಾರ್ಪಣೆಜರುಗಿತು.
ಅತಿಥಿಗಳಾದಡಾ|| ಶಂಕರ್ ಬಿನ್ನಾಳ ಹಾಗೂ ಶ್ರೀಮತಿ ಹೇಮಾವತಿ ಪಂ.ಅಂಬಣ್ಣಕೊಪ್ಪರದಕಾರ್ಯಕ್ರಮದಕುರಿತು ಮಾತನಾಡಿದರು.ಗಾನಯೋಗಿ ಪಂ.ಪಂಚಾಕ್ಷರಿಗವಾಯಿಗಳ ಹಾಗೂ ನಾಡೋಜ ಪಂ. ಪುಟ್ಟರಾಜ ಕವಿಗವಾಯಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವದರ ಮೂಲಕ ಕಾರ್ಯಕ್ರಮವುಪ್ರಾರಂಭವಾಯಿತು.ಸಾಯಿ ಸಮರ್ಥ ಸ್ವಾಗತಿಸಿದರು.ಭಾನುಪ್ರೀಯಾಕುಂಬಾರ ವಂದಿಸಿದರು.ಶ್ರೀಗೌರಿ ಪಾಟೀಲ್ ನಿರೂಪಿಸಿದರು.
ಸ್ವರ ಸ್ಮರಣೆಕಾರ್ಯಕ್ರಮದಲ್ಲಿ ವೈಷ್ಣವಿ.ಕೆ ಹಾಗೂ ಸನ್ನಿಧಿ.ಕೆಇವರಿಂದಗಾಯನ, ಹೊಸಪೇಟೆಯಚಿನ್ಯಿ ನಿಹಾರಿಕಾಇವರಿಂದ ವಚನವಾಣಿ, ಅಚಿಂತ್ಯ ಓಬಳಾಪುರ ಇವರಿಂದದಾಸವಾಣಿ ಸನ್ನಿಧಿಇವರಿಂದತತ್ವಪದ, ಶಾಂತಯ್ಯ ಹಿರೇಮಠ ಹುಬ್ಬಳ್ಳಿ ಇವರಿಂದ ಸುಗಮ ಸಂಗೀತ, ಗೌಡೇಶ್ ಪವಾರ್ ಹಾಗೂ ವಿನಯ ಶಿರೂರಮಠ ಇವರಿಂದ ಹಾರ್ಮೋನಿಯಂ. ಗಂಗಾವತಿಯರಾಘವೇಂದ್ರ ಹಾಗೂ ಶ್ರೀನಿವಾಸ್‌ಜೋಷಿ ಇವರಿಂದತಬಲಾ, ಹೊಸಪೇಟೆಯ ಮಹೇಶಾಚಾರ್‌ಇವರಿಂದಕೀಬೋರ್ಡ, ಕೃಷ್ಣ ಸೋರಟೋರ್‌ಇವರಿಂದ ತಾಳ ವಾಧ್ಯಕಾರ್ಯಕ್ರಮವುಜರುಗಿದವು.
ಕಾರ್ಯಕ್ರಮದಲ್ಲಿ ನಗರದ ಹಿರಿಯಕಲಾವಿದರು, ಸಾಹಿತಿಗಳು, ಕಲಾಭಿಸಕ್ತರು, ವಿದ್ಯಾಪೀಠದ ವಿದ್ಯಾರ್ಥಿಗಳು ಹಾಗೂ ಪಾಲಕರು ಪಾಲ್ಗೊಂಡಿದ್ದರುಎಂದು ಶ್ರೀ ಗವಿಸಿದ್ಧೇಶ್ವರ ಸಂಗೀತ ವಿದ್ಯಾಪೀಠದ ಶಿಕ್ಷಕರಾದ ವೀರೇಶ ಹಿಟ್ನಾಳ ಅವರುಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!