ಅಳವಂಡಿ ಕಾಲೇಜಿನ ವಿದ್ಯಾರ್ಥಿಗೆ ಬಹುಮಾನ -ತುಮಕೂರಿನಲ್ಲಿ ನಡೆದ ಮಾಧ್ಯಮ ಹಬ್ಬದಲ್ಲಿ ಸಾಧನೆ
ಕೊಪ್ಪಳ: ಈಚೆಗೆ ತುಮಕೂರಿನಲ್ಲಿ ನಡೆದ ರಾಜ್ಯಮಟ್ಟದ ಮಾಧ್ಯಮ ಹಬ್ಬದ ವಿವಿಧ ಸ್ಪರ್ಧೆಗಳಲ್ಲಿ ಅಳವಂಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಮಹಮ್ಮದ್ ಅಖೀಲ್ ಉಡೇವು ಬಹುಮಾನ ಗಳಿಸುವ ಮೂಲಕ ಸಾಧನೆ ಮಾಡಿದ್ದಾನೆ.
ಮಾಧ್ಯಮ ಹಬ್ಬದಲ್ಲಿ ನಡೆದ ಸ್ಪರ್ಧೆಯಲ್ಲಿ ಕಾಲೇಜಿನ ಮಹಮ್ಮದ್ ಅಖೀಲ್ ಉಡೇವು, ಭೀಮೇಶ ಅಲಳ್ಳಿ, ಅಣಯ್ಯ ಹಿರೇಮಠ ಮತ್ತು ಚಂದ್ರಕಾಂತ ದೇಶಪಾಂಡೆ ನಾಲ್ಕು ಜನ ವಿಧ್ಯಾರ್ಥಿಗಳು ಭಾಗವಹಿದ್ದರು ಅದರಲ್ಲಿ ಬಿಎ ನಾಲ್ಕನೇ ಸೆಮೆಸ್ಟರ್‌ನ ಮಹಮ್ಮದ್ ಅಖೀಲ್ ಉಡೇವು ಪಿಟಿಸಿ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ನಗದು ಬಹುಮಾನ, ಪಾರಿತೋಷಕ ಹಾಗೂ ಪ್ರಮಾಣಪತ್ರ ಗಳಿಸಿದ್ದಾನೆ.
ವಿದ್ಯಾರ್ಥಿಯ ಸಾಧನೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಗವಿಸಿದ್ದಪ್ಪ ಮುತ್ತಾಳ ಶ್ಲಾಘಿಸಿ, ಅಭಿನಂದಿಸಿ ಕಾಲೇಜಿನಲ್ಲಿ ಸನ್ಮಾಸಿನಿಸಿದರು. ಮುಂಬರು ದಿನಗಳಲ್ಲಿ ಹಿಗೆಯೇ ಸಾದನೆ ಮಾಡಿ ಕಾಲೇಜಿಗೆ ಹೆಸರು ತರಬೇಕೆಂದು ವಿದ್ಯಾರ್ಥಿಗಳಿಗೆ ಹೇಳಿದರು.
ಈ ಸಂದರ್ಭದಲ್ಲಿ ಇಂಗ್ಲೀಷ್ ಉನ್ಯಾಸಕರಾದ ಮಲ್ಲಿಕಾರ್ಜುನ, ಪತ್ರಿಕೋದ್ಯಮ ವಿಭಾಗದ ಉನ್ಯಾಸಕರಾದ ವಿಜಯ ಕುಮಾರ್ ಕುಲಕರ್ಣಿ, ಉನ್ಯಾಸಕರಾದ ರಾಘವೆಂದ್ರ, ಸಮಾಜ ಶಾಸ್ತ್ರದ ಉನ್ಯಾಸಕರಾದ ಡಾ.ನಾಗೆಂದೆಪ್ಪ ಎಸ್., ಕನ್ನಡ ಉನ್ಯಾಸಕರಾದ ಇಬ್ರಾಹಿಂ ನದಾಫ್, ರಾಜ್ಯಶಾಸ್ತ್ರದ ಉನ್ಯಾಸಕರಾದ ಇಮಾಂಮ್, ಅರ್ಥಶಾಸ್ತ್ರ ವಿಭಾಗದ ಉನ್ಯಾಸಕರಾದ ವೆಂಕಟೇಶ, ಉನ್ಯಾಸಕರಾದ ವಿರೇಶ ಹೆಚ್, ಸಿದ್ದಾರ್ಥ, ಕೃಷ್ಣ, ಹಾಗೂ ಕಾಲೇಜಿನ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Comments are closed.