ಕೊಪ್ಪಳ ವಿವಿ : ಮಾಧ್ಯಮ ಹಬ್ಬದಲ್ಲಿ ವಿದ್ಯಾರ್ಥಿಗಳ ಸಾಧನೆ

Get real time updates directly on you device, subscribe now.

ಕೊಪ್ಪಳ : ತುಮಕೂರು ವಿಶ್ವ ವಿದ್ಯಾಲಯದಲ್ಲಿ ಇತ್ತಿಚೆಗೆ ನಡೆದ ಮಾಧ್ಯಮ ಹಬ್ಬದಲ್ಲಿ ಆಯೋಜನೆ ಮಾಡಲಾಗಿದ್ದ, ವಿವಿಧ ಸ್ಪರ್ಧೆಗಳಲ್ಲಿ ಕೊಪ್ಪಳ ವಿಶ್ವ ವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಪ್ರಥಮ ವರ್ಷದ ಪತ್ರಿಕೋದ್ಯಮದ ವಿದ್ಯಾರ್ಥಿ ಜುನಸಾಬ ವಡ್ಡಟ್ಟಿ ರಾಜ್ಯ ಮಟ್ಟದ ವರದಿಗಾರಿಕೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಪಾರಿತೋಷಕ, ಪ್ರಮಾಣ ಪತ್ರ ಹಾಗೂ ನಗದು ಬಹುಮಾನ ತನ್ನದಾಗಿಸಿಕೊಂಡಿದ್ದಾನೆ. ಅದೆ ರೀತಿ ಪತ್ರಿಕೋದ್ಯಮ ವಿಭಾಗದ ಮತ್ತೊರ್ವ ವಿದ್ಯಾರ್ಥಿ ಈರಣ್ಣ ಪಗಡಾಲ್ ರಾಜ್ಯ ಮಟ್ಟದ ರೆಡಿಯೋ ಜಾಕಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ನ್ಯೂಸ್ ಪ್ರೆಸೆಂಟೇಷನ್ ಸ್ಪರ್ಧೆಯಲ್ಲಿ ತೃತೀಯಾ ಸ್ಥಾನ ಪಡೆದು ಪಾರಿತೋಷಕ, ಪ್ರಮಾಣ ಪತ್ರ ಹಾಗೂ ನಗದು ಬಹುಮಾನ ಗೆದ್ದಿದ್ದಾರೆ.

ಪ್ರಥಮ ವರ್ಷದ ವಿದ್ಯಾರ್ಥಿಗಳಾದ ಶಿವರಾಜ್ ಕುಮಾರ್ ಮೇಣೆದಾಳ, ಭಾನುಪ್ರಕಾಶ್ ರಾಠೋಡ್, ವಿಜಯಕುಮಾರ ಪೂಜಾರ ಹಾಗೂ ನರಸಪ್ಪ ಗಂಗಾವತಿ ಅವರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಮೆಚ್ಚುಗೆ ಪ್ರಮಾಣ ಪತ್ರ ಪಡೆದಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಕೊಪ್ಪಳ ವಿವಿಯ ಕುಲಪತಿ ಪ್ರೊ.ಬಿ.ಕೆ.ರವಿ, ಕುಲಸಚಿವ ಡಾ.ಕೆ.ವಿ.ಪ್ರಸಾದ್, ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಸಿ.ಐ.ಚಲವಾದಿ, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ರಂಗನಾಥ ಕೋಳೂರು, ಸಂತೋಷಕುಮಾರ.ಎಚ್.ಕೆ ಹಾಗೂ ವಿವಿಧ ವಿಭಾಗಗಳ ಉಪನ್ಯಾಸಕರು ಅಭಿನಂದಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!