ಇಟಗಿ ಬಂಧುಗಳ ಮದುವೆ ಸಮಾರಂಭದಲ್ಲಿ ಮತದಾನ ಜಾಗೃತಿ

0

Get real time updates directly on you device, subscribe now.


ಗಂಗಾವತಿ :ಮತದಾನದಿಂದ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಗೆಲುವು ಬರಲಿದೆ
ಆದ್ದರಿಂದ ಕಡ್ಡಾಯವಾಗಿ ಪ್ರತಿಯೊಬ್ಬರು ಮತದಾನ ಮಾಡಿ ಎಂದು ಸ್ವೀಪ್ ಜಿಲ್ಲಾ ಸಮಿತಿ
ರಾಯಭಾರಿ ಡಾ. ಶಿವಕುಮಾರ್ ಮಾಲಿಪಾಟೀಲ್ ಹೇಳಿದರು.
ಅವರು ನಗರದ ಅಮರ್ ಭಗತ್ ಸಿಂಗ್ ನಗರ ಇಟಗಿ ಬಂಧುಗಳ ಶಂಕ್ರಪ್ಪ ಹಾಗೂ ಗೀತಾ ಇವರ
ಮದುವೆ ಸಮಾರಂಭದಲ್ಲಿ ಮತದಾನ ಜಾಗೃತಿಯ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದರು.
ಕಳೆದ ಬಾರಿ ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶೇ. 69 ಅಷ್ಟು
ಮತದಾನವಾಗಿತ್ತು. ಬಾರಿ ಶೇ 80ರಷ್ಟು ಮತದಾನವಾಗುವಂತೆ ಪ್ರತಿಯೊಬ್ಬರು ಕಡ್ಡಾಯವಾಗಿ
ಮತದಾನ ಮಾಡಬೇಕು. ಪ್ರಜಾಪ್ರಭುತ್ವ ಮತ್ತು ಸಂವಿಧಾನ ಯಶಸ್ವಿಗಾಗಿ ವಿಶ್ವದಲ್ಲಿ
ಭಾರತಕ್ಕೆ ಇನ್ನಷ್ಟು ಮೆರಗು ತರಲು ಪ್ರತಿಯೊಬ್ಬರು ಕೇಂದ್ರ ಸರ್ಕಾರ ರಚನೆಯಾಗಲು
ಮತದಾನ ಮಾಡುವ ಮೂಲಕ ಸಹಕರಿಸಬೇಕು. ಭಾರತ ಚುನಾವಣಾ ಆಯೋಗ ಮತದಾನ ಹೆಚ್ಚಾಗಲು ಅನೇಕ
ಜಾಗೃತಿ ಕಾರ್ಯಕ್ರಮಗಳು ಜಾತಗಳು ಮತ್ತು ಪ್ರಬಂಧ ಸ್ಪರ್ಧೆ ಹೀಗೆ ಅನೇಕ ಜನಪರ
ಯೋಜನೆಗಳನ್ನ ಮಾಡುವ ಮೂಲಕ ಮತದಾನಕ್ಕೆ ಪ್ರೋತ್ಸಾಹ ನೀಡುತ್ತಿದೆ ಪಿಂಕ್ ಮತದಾನ ಕಟ್ಟೆ
ಯುವ ಮತದಾನ ಕಟ್ಟೆ ಸೇರಿದಂತೆ ಅನೇಕ ಮತದಾನ ಕಟ್ಟೆಗಳ ಪ್ರಯೋಗದ ಮೂಲಕ ಹೆಚ್ಚಿನ
ಪ್ರಮಾಣದಲ್ಲಿ ಮತದಾನ ವಾಗುವಂತೆ ನೋಡಿಕೊಳ್ಳುತ್ತಿದೆ ಆದ್ದರಿಂದ ಪ್ರತಿಯೊಬ್ಬ
ಮತದಾರರು ಕಡ್ಡಾಯವಾಗಿ ಮತದಾನ ಮಾಡುವಂತೆ ಕರೆ ನೀಡಿದರು ಈ ಸಂದರ್ಭದಲ್ಲಿ ಖ್ಯಾತ
ಹಾಡುಗಾರ ರಮೇಶ್ ಗಬ್ಬೂರ್, ಪ್ರಾಚಾರ್ಯ ಬಸಪ್ಪ ನಾಗೋಲಿ,ಕಿಷ್ಕಿಂಧಾ ಚಾರಣಬಳಗ ಅರ್ನುನ
ಕುಟುಂಬ ವರ್ಗದವರಾದ ಜೆ.ಬಿ.ಲಕ್ಷ್ಮಣ ಗೌಡ,ಅಶೋಕ ಗೌಡ,ಕೆ.ನಿಂಗಜ್ಜ ಪತ್ರಕರ್ತರು,
ನೀಲಕಂಠಪ್ಪ ಮೆಟ್ರಿ,ಕುಮಾರಪ್ಪ ಸಿಂಗನಾಳ,
ಗನಾಳ ಸೇರಿದಂತೆ ಅನೇಕರಿದ್ದರು

Get real time updates directly on you device, subscribe now.

Leave A Reply

Your email address will not be published.

error: Content is protected !!
%d bloggers like this: