ಪ್ರಭುರಾಜ ಪವಿತ್ರಾ ಮದುವೆಯಲ್ಲಿ ಮತದಾನ ಜಾಗೃತಿ

Get real time updates directly on you device, subscribe now.

ಕೊಪ್ಪಳ : ತಾಲೂಕಿನ ಹ್ಯಾಟಿ ಮುಂಡರಗಿ ಗ್ರಾಮದ ನಂದಿಬಂಡಿ ಬಸವೇಶ್ವರ ದೇವಸ್ಥಾನ ಕಲ್ಯಾಣ ಮಂಟಪದಲ್ಲಿ ಮದುಮಕ್ಕಳಾದ ಪ್ರಭುರಾಜ ಜಾಗೀರದಾರ ಮತ್ತು ಪವಿತ್ರಾ ಅವರ ಮದುವೆಯಲ್ಲಿ ಮತದಾನ ಜಾಗೃತಿ ಹಮ್ಮಿಕೊಳ್ಳಲಾಗಿತ್ತು.
ತಾಲೂಕಿನ ಗೊಂಡಬಾಳ ಗ್ರಾಮದವರಾದ ಪ್ರಭುರಾಜ ಜಾಗೀರದಾರ ಕೃಷಿ ಕುಟುಂಬದವರು ಮತ್ತು ಪತ್ರಕರ್ತರಾಗಿದ್ದು ತಮ್ಮ ಮದುವೆಯಲ್ಲಿ ಜನಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದು ಮತದಾನ ಜಾಗೃತಿ ಮತ್ತು ಪರಿಸರ ಜಾಗೃತಿ ಮೂಡಿಸಿದರು. ತಾಲೂಕ ಸ್ವೀಪ್ ನೋಡಲ್ ಅಧಿಕಾರಿಗಳಾದ ಹೆಚ್. ಹನುಮಂತಪ್ಪ ನೇತೃತ್ವದಲ್ಲಿ ವರ ಪ್ರಭುರಾಜ ಕಡ್ಡಾಯ ಮತದಾನ ಪ್ರತಿಜ್ಞಾ ವಿಧಿ ಬೋಧಿಸಿದರು.
ಸ್ವೀಪ್ ಸದಸ್ಯರಾದ ಬಸವರಾಜ ಬಳಿಗಾರ, ವೀರೇಶ ಬಡಿಗೇರ, ತಾ.ಪಂ. ಐಇಸಿ ಕೋ-ಆರ್ಡಿನೇಟರ್ ದೇವರಾಜ ಪತ್ತಾರ, ಮದುವೆಯಲ್ಲಿ ಈ ಆಲೋಚನೆ ಮಾಡಿದ ಸಮಾಜ ಸೇವಕರಾದ ಮಂಜುನಾಥ ಜಿ. ಗೊಂಡಬಾಳ ಮತ್ತು ಜ್ಯೋತಿ ಎಂ. ಗೊಂಡಬಾಳ, ಶಿಕ್ಷಕರಾದ ಹನುಮಂತಪ್ಪ ಕುರಿ, ಸುರೇಶ ಕಂಬಳಿ, ಬಾಲ ನಾಗಮ್ಮ, ಕುಟುಂಬದವರಾದ ಬಸವರಾಜ ಪಲ್ಲೇದ, ಮಹೇಶ ಕರಿಯಪ್ಪ ಜಾಗೀರದಾರ, ಮಾರ್ಕಂಡೆಪ್ಪ ಜಾಗೀರದಾರ ಇತರರು ಇದ್ದರು. ಮದುವೆ ಮಂಟಪದಲ್ಲಿ ಮತದಾನ ಜಾಗೃತಿ ಮತ್ತು ಪರಿಸರ ಜಾಗೃತಿ ಮೂಡಿಸುವ ಬ್ಯಾನರ್ ಹಾಕಿ ಗಮನ ಸೆಳೆದರು.

Get real time updates directly on you device, subscribe now.

Comments are closed.

error: Content is protected !!