ಬಿಜೆಪಿ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ ಪಕ್ಷ- ದೊಡ್ಡನಗೌಡ ಪಾಟೀಲ್ 

Get real time updates directly on you device, subscribe now.

ಕೊಪ್ಪಳ: ಬಿಜೆಪಿ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ ಏಕೈಕ ಪಕ್ಷವಾಗಿದೆ. ಅಭಿವೃದ್ಧಿ ಆಡಳಿತ ನೀಡಿದ ಮೋದಿ ಸರ್ಕಾರಕ್ಕೆ ಮತ್ತೊಮ್ಮೆ ಅವಕಾಶ ನೀಡಿ ಎಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯಸಚೇತಕ ದೊಡ್ಡನಗೌಡ ಪಾಟೀಲ್ ಅವರು ಮತದಾರರಲ್ಲಿ ಮನವಿ ಮಾಡಿಕೊಂಡರು.
ವಿಧಾನಸಭಾ ಕ್ಷೇತ್ರದ ದೋಟಿಹಾಳದ ಮಹಾಶಕ್ತಿ ಕೇಂದ್ರದ ಚುನಾವಣಾ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಧ್ಯವರ್ತಿಗಳ ಹಾವಳಿ ಇಲ್ಲದೇ ನೇರವಾಗಿ ಫಲಾನುಭವಿಗಳ ಖಾತೆಗೆ ಯೋಜನೆಯ ಹಣ ರವಾನೆಯಾಗುವಂತೆ ಮಾಡಿದ ಕೀರ್ತಿ ನರೇಂದ್ರ ಮೋದಿ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಸೇರುತ್ತದೆ ಎಂದರು.
ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕೆ. ಶರಣಪ್ಪ ಮಾತನಾಡಿ, ಭಾರತದ ರಕ್ಷಣಾ ಕ್ಷೇತ್ರದಲ್ಲಿ ಅನೇಕ ಸುಧಾರಣೆಗಳು, ಬದಲಾವಣೆ ಆಗಿವೆ. ಇತ್ತೀಚಿಗೆ ಸ್ವದೇಶಿ ಬುಲೆಟ್ ಪ್ರೂಪ್ ಜಾಕೆಟ್ ಉದಾಹರಣೆ ಕೂಡಾ ಒಂದು. ಆತ್ಮನಿರ್ಭರ ಭಾರತ ಎಂಬ ಘೋಷಣೆ ಕೇವಲ ಮಾತಾಗಿ ಉಳಿಯದೆ ಇಂದು ಕಾರ್ಯರೂಪದಲ್ಲಿ ಅನುಷ್ಠಾನಗೊಳಿಸಲಾಗಿದೆ. ಇದು ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ. ಮತ್ತೊಮ್ಮೆ ನಮ್ಮ ದೇಶ ಸುಭದ್ರವಾಗಿ ಮುನ್ನಡೆಯಲು ಬಿಜೆಪಿ ಪಕ್ಷಕ್ಕೆ ಮತ ಹಾಕಿ ಎಂದರು.
ಈ ಸಂದರ್ಭದಲ್ಲಿ ಕುಷ್ಟಗಿ ಬಿಜೆಪಿ ಮಂಡಲ ಅಧ್ಯಕ್ಷ ಮಹಾಂತೇಶ್ ಬಾದಾಮಿ, ಮುಖಂಡರಾದ ಅಶೋಕ್ ಬಳೂಟಗಿ, ಫಕೀರಪ್ಪ ಚಳಗೇರಿ, ಗುರುಮೂರ್ತಿ ಸ್ವಾಮಿ, ಶಂಕರಗೌಡ ಜಾಲಿಹಾಳ, ವಿಜಯಕುಮಾರ್ ಹಿರೇಮಠ,  ಲಾಡಸಾಬ್ ಕೊಳ್ಳಿ, ಚೆನ್ನಪ್ಪ ಕಡಿವಾಳ, ಬಾಲಾಜಿ, ಕ್ಯಾದಿಕಪ್ಪ ಹೆಸರೂರು, ಚನ್ನಪ್ಪ, ಶೇಖರಗೌಡ,  ಶಿವನಗೌಡ ಪಾಟೀಲ್, ಬಿನ್ನನಗೌಡ, ಸಿದ್ದನಗೌಡ, ಕಾಳೇಶ ಬಡಿಗೇರ,  ದೇವಪ್ಪ ಬಾಗೇವಾಡಿ ಸೇರಿದಂತೆ ಉಭಯ ಪಕ್ಷದ ಪ್ರಮುಖರು, ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
*ಬಿಜೆಪಿ ಅಭ್ಯರ್ಥಿಯಿಂದ ಬೈಕ್ ರ‌್ಯಾಲಿ*
ದೋಟಿಹಾಳ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕೆ.ಶರಣಪ್ಪ ಅವರಿಗೆ ಅದ್ದೂರಿ ಸ್ವಾಗತ ದೊರೆಯಿತು. ಬಿಜೆಪಿ ಕಾರ್ಯಕರ್ತರು ನೂರಾರು ಬೈಕ್ ಗಳಲ್ಲಿ ರ‌್ಯಾಲಿ ನಡೆಸಿದರು. ರ‌್ಯಾಲಿಯುದ್ಧಕ್ಕೂ ದೇಶದ ಭದ್ರತೆಗೆ ಬಿಜೆಪಿಗೆ ಮತ ನೀಡಿ ಎಂದು ಘೋಷಣೆ ಕೂಗಿದರು.

Get real time updates directly on you device, subscribe now.

Comments are closed.

error: Content is protected !!