ಕವಲೂರ ಗ್ರಾಮದಲ್ಲಿ ಕುಡಿಯುವ ನೀರಿನ ಹಾಹಾಕಾರ: ಕ್ರಮಕ್ಕೆ ಒತ್ತಾಯ
ಕೊಪ್ಪಳ : ತಾಲೂಕಿನ ಕವಲೂರ ಗ್ರಾಮದಲ್ಲಿ ಕುಡಿಯುವ ನೀರು ಪೂರೈಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ತಾಲೂಕಾ ಸಂಚಾಲಕ ರಾಜಾ ಸಾಬ್ ತಹಶೀಲ್ದಾರ್. ಗ್ರಾಮ ಘಟಕದ ಉಪಾಧ್ಯಕ್ಷ ಸೈಯ್ಯದ್ ಬಾಷಾ ದೊಡ್ಡಮನಿ. ಕಾರ್ಯದರ್ಶಿ ಪಾನಿ ಶಾ ಮಕಾಂದಾರ್. ಬಸವರಾಜ್ ವಗ್ಗರಣಿ. ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್ ಮುಂತಾದವರು ಒತ್ತಾಯಿಸಿದ್ದಾರೆ.
ಕೊಪ್ಪಳ ತಾಲೂಕಾ ಪಂಚಾಯಿತಿಗೆ ಭೇಟಿ ನೀಡಿ ಕವಲೂರ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಹೇಳಿಕೊಳ್ಳಲು ಬಂದಾಗ ಅಧಿಕಾರಿಗಳು ಇಲ್ಲದೆ ಮರಳ ಬೇಕಾಗಿದೆ. ಗ್ರಾಮದಲ್ಲಿ ಮೊದಲು ಹೊಳಿ ನೀರು ಬರುತ್ತಿತ್ತು. ಈಗ ಅದು ಸಹ ಇಲ್ಲ. ಕೆರೆ ನೀರು ತರಬೇಕೆಂದರೆ ಒಂದೆರಡು ಕಡೆ ಅಷ್ಟೇ ಇದೆ. ಗ್ರಾಮದಲ್ಲಿ ಐದು ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿದೆ ಅಂತ ಅದು ಕೇವಲ ದಾಖಲೆಗಳಲ್ಲಿ ಇದೆ. ಒಂದೂ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಬಡ ಕಾರ್ಮಿಕರು ನಾಲ್ಕೈದು ಕಿಲೋಮೀಟರ್ ಹೋಗಿ ಒಂದು ಕೊಡ ನೀರು ತರಬೇಕಾದ ಪರಿಸ್ಥಿತಿ ಬಂದಿದೆ. ನಮ್ಮ ಗ್ರಾಮದ ಕುಡಿಯುವ ನೀರು ಪೂರೈಕೆಗೆ ಯಾವ ಅಧಿಕಾರಿಗಳು ಗಮನಹರಿಸುತ್ತಿಲ್ಲ. ತಾಲೂಕಾ ಪಂಚಾಯಿತಿ ಅಧಿಕಾರಿಗಳನ್ನು ಭೇಟಿಯಾಗಿ ನೀರಿನ ಸಮಸ್ಯೆ ಮನವರಿಕೆ ಮಾಡಬೇಕೆಂದು ಬಂದಿದ್ದೀವಿ. ಯಾವ ಅಧಿಕಾರಿಗಳು ಇಲ್ಲ. ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ನಮ್ಮ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ ಎಂದು ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಕವಲೂರ ಗ್ರಾಮ ಘಟಕದ ಕಾರ್ಯದರ್ಶಿ ಪಾನಿ ಶಾ ಮಕಾಂದಾರ್ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳನ್ನು ಭೇಟಿಯಾಗಲು ಬಂದಿದ್ವಿ. ನಮ್ಮ ಊರಿನಲ್ಲಿ ನೀರಿನ ಪರಿಸ್ಥಿತಿ ಹಾಹಾಕಾರ ಉಂಟಾಗಿದೆ. ಬೇರೆ ಊರುಗಳಿಂದ ಕಷ್ಟಪಟ್ಟು ತರಬೇಕಾಗಿದೆ. ಇದ್ದ ಒಂದು ಶುದ್ಧ ಕುಡಿಯುವ ನೀರಿನ ಘಟಕ ಕಾರ್ಯನಿರ್ವಹಣೆ ನಿಲ್ಲಿಸಿದೆ. ಏನರ ಮಾಡಿ ನಮ್ಮ ಊರಿಗೆ ಒಂದಾದರೂ ಶುದ್ಧ ಕುಡಿಯುವ ನೀರಿನ ಘಟಕ ದುರಸ್ಥಿ ಮಾಡಿಸಿಕೊಟ್ಟರೆ ಮುದಿಯರು. ಕಾರ್ಮಿಕರು ಅದರ ನೀರನ್ನಾದರೂ ತಂದು ಕುಡಿಯುತ್ತಾರೆ. ಕೊಪ್ಪಳಕ್ಕೆ ಕುಡಿಯುವ ನೀರು ತರಲು ಕ್ಯಾನ್ ತಂದಿದ್ದೇನೆ ಎಂದು ಕ್ಯಾನ್ ಪ್ರದರ್ಶಿಸಿದರು. ನಮ್ಮಲ್ಲಿ ಶಕ್ತಿ ಇದೆ ಬಂದಿದ್ದೇವೆ. ಮುದಿಯರು ಏನು ಮಾಡಬೇಕು ಹೇಳಿರಿ ? ಮುದಿಯರಿಗೆ. ಕಾರ್ಮಿಕರಿಗೆ ಅನುಕೂಲವಾಗಲು ಶುದ್ಧ ನೀರಿನ ಘಟಕ ದುರಸ್ಥಿಗೊಳಿಸುವಂತೆ ತಾಲೂಕಾ ಸಂಚಾಲಕ ರಾಜಾ ಸಾಬ್ ತಹಶೀಲ್ದಾರ್ ಕೋರಿದರು.
ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಅಧಿಕಾರಿಗಳು ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನಿರ್ವಹಿಸಲು ಅಧಿಕಾರಿಗಳಿಗೆ ಸಭೆಗಳ ನಡೆಸಿ ಸೂಚನೆ ನೀಡುತ್ತಾರೆ ಅದು ಕೇವಲ ತೋರಿಕೆಯಾಗಿದೆ. ಕಾರ್ಯರೂಪಕ್ಕೆ ಬರುತ್ತಿಲ್ಲ. ಜಿಲ್ಲಾ ಕೇಂದ್ರವಾದ ಕೊಪ್ಪಳ ನಗರದಿಂದ ಕೇವಲ 25 ಕಿಲೋ ಮೀಟರ್ ದೂರದ ಕವಲೂರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಉಲ್ಬಣಗೊಂಡರೂ ಯಾವ ಅಧಿಕಾರಿಗಳಿಗೂ ಸ್ಪಂದಿಸುವ ಮನಸ್ಸಿಲ್ಲ. ತಕ್ಷಣ ಸರ್ಕಾರ ಗಮನಹರಿಸಿ ನಿರ್ಲಕ್ಷ ಮಾಡಿದ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು. ಕವಲೂರು ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬೇಕೆಂದು ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್ ಒತ್ತಾಯಿಸಿದ್ದಾರೆ.
Comments are closed.