ಬಿಜೆಪಿ ಅಧಿಕಾರಕ್ಕೆ ಬಂದರೆ ಚುನಾವಣೆಯೇ ಇರುವುದಿಲ್ಲ : ಮುಖ್ಯಮಂತ್ರಿ ಚಂದ್ರು
ಕೊಪ್ಪಳ : ಸರ್ವಾಧಿಕಾರಿ ಬಿಜೆಪಿಯಂತಹ ಸರ್ಕಾರ ಮುಂದೆ ಅಧಿಕಾರಕ್ಕೆ ಬಂದರೆ ಚುನಾವಣೆಯೇ ಇರುವುದಿಲ್ಲ ಜನ ಎಚ್ಚೆತ್ತುಕೊಂಡು ಮತ ಹಾಕಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮನವಿ ಮಾಡಿದರು.
ಅವರು ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿದ್ದೇಶಿಸಿ ಮಾತನಾಡಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಆಮ್‌ಆದ್ಮಿ ಪಕ್ಷ ಕಾಂಗ್ರೆಸ್ ಜೊತೆ ರಾ? ಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದರಿಂದ ಎರಡು ಕಡೆ ಸ್ಪರ್ಧಿಸಲು ಅವಕಾಶ ಕೇಳಿದ್ದೇವೆ, ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಸರಕಾರ ಬೆಂಬಲಿಗರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನ ಸೃಷ್ಟಿ ಮಾಡಿಕೊಂಡಿದ್ದು ಈ ಅನುಕೂಲಕ್ಕೆ ಹಣ ಇದೆ ಆದರೆ,ಬರಗಾಲವಿದ್ದು ಜನರ ಕ?ಕ್ಕೆ ದುಡ್ಡಿಲ್ಲ, ಮರಳು ದಂಧೆಯಿದ್ದು ಸಮರ್ಪಕ ನೀರು ಕೊಡದಿದ್ದರೇ ಟ್ಯಾಂಕರ್ ದಂಧೆ ಪ್ರಾರಂಭವಾಗುತ್ತದೆ, ಕನ್ನಡ ಸಂಸ್ಕೃತಿಗೆ ದುಡ್ಡಿಲ್ಲ. ಜನರಿಗಿಂತ ನಿಮ್ಮ ವೈಯಕ್ತಿಕ ಅಸ್ತಿತ್ವ ಮುಖ್ಯ ಅನ್ನುವುದನ್ನು ಖಂಡಿಸುವುದಾಗಿ ಹೇಳಿದ ಅವರು ಅಭಿವೃದ್ಧಿಯ ಪಥದಲ್ಲಿ ಯಾರೂ ಮತಗಳನ್ನ ಕೇಳುತ್ತಿಲ್ಲ. ಬಿಜೆಪಿಯವರು ೪೦೦ ಕ್ಕೂ ಹೆಚ್ಚು ಸ್ಥಾನ ಗೆಲ್ಲಲು ಎಲ್ಲಾ ಅಧಿಕಾರ ಮೊಟುಕುಗೊಳಿಸುವ ಕೆಲಸ ಮಾಡುತ್ತಿದೆ. ಬಿಜೆಪಿಯೇತರ ಸರ್ಕಾರಗಳನ್ನ ಹತ್ತಿಕ್ಕುವ ಹುನ್ನಾರ ಮಾಡುತ್ತಿದೆ. ಸಿಬಿಐ, ಇಡಿ ಬಿಟ್ಟು ಹೆದರಿಸಿ ಬೆದರಿಸಿ ಬಾಂಡ್ ಲೆಕ್ಕದಲ್ಲಿ ಸಾವಿರಾರು ಕೋಟಿ ಹಣ ಪಡೆದಿದೆ ಎಂದ ಅವರು ಈಶಾನ್ಯ ಪದವೀಧರರ ವಿಧಾನಪರಿಷತ್ ಚುನಾವಣೆಯಲ್ಲಿ ಅಭ್ಯರ್ಥಿ ನಾರಾ ಪ್ರತಾಪ್‌ರಡ್ಡಿಗೆ ಆಮ್‌ಆದ್ಮಿ ಪಕ್ಷ ಸಂಪೂರ್ಣ ಬೆಂಬಲ ನೀಡುತ್ತದೆ ಕಳೆದ ಬಾರಿ ಸ್ವಲ್ಪ ಮತಗಳ ಅಂದರೆ ಮತಗಳು ಹಾಕುವ ರೀತಿ ತಪ್ಪಾಗಿ ನಾರಾ ಪ್ರತಾಪ್‌ರಡ್ಡಿ ಸೋಲಾಯಿತು ಈ ಬಾರಿ ಪದವೀಧರ ಮತದಾರರ ಬೆಂಬಲಿಸಿ ಗೆಲ್ಲಿಸುವಂತೆ ಮನವಿ ಮಾಡಿದರು.
ಅಭ್ಯರ್ಥಿ ನಾರಾ ಪ್ರತಾಪ್‌ರಡ್ಡಿ ಮಾತನಾಡಿ ಈ ಭಾಗದ ಸಮಗ್ರ ಅಭಿವೃದ್ಧಿಗಾಗಿ ಈಶಾನ್ಯ ಪದವೀಧರರ ವಿಧಾನಪರಿಷತ್ ಚುನಾವಣೆಯಲ್ಲಿ ಈ ಬಾರಿ ಬೆಂಬಲಿಸಿ ಮೊದಲ ಪ್ರಾಶಸ್ತ್ಯ ಮತ ನೀಡಿ, ಯಾದಗಿರಿ, ಕಲಬುರಗಿ, ಬೀದರ ಜಿಲ್ಲೆಯಲ್ಲಿ ಪದವೀಧರರು ಬೆಂಬಲಿಸುವುದಾಗಿ ತಿಳಿಸಿದ್ದು ಈ ಬಾರಿ ಕೊಪ್ಪಳ ಜಿಲ್ಲೆಯ ಪದವೀಧರರು ಬೆಂಬಲಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಆಮ್‌ಆದ್ಮಿ ಪಕ್ಷ ಜಿಲ್ಲಾ ಉಸ್ತುವಾರಿ ರುದ್ರಯ್ಯ ನವಲಿಹಿರೇಮಠ, ಜಿಲ್ಲಾಧ್ಯಕ್ಷ ಕನಕಪ್ಪ, ಆರ್.ಪಿ.ರಡ್ಡಿ, ಮರಿಸ್ವಾಮಿ, ರೊಹೀತ್ಕುಮಾರ ಉಪಸ್ಥಿತರಿದ್ದರು.
Comments are closed.