ಶ್ರೀರಾಮ ದರ್ಶನ ಭಾಗ್ಯದ ಫಲ ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ್

Get real time updates directly on you device, subscribe now.

ಅಯ್ಯೋದ್ಯೆಗೆ ತೆರಳಿದ ಜಿಲ್ಲೆಯ 315 ಜನ

 ಕೊಪ್ಪಳ

ಶ್ರೀರಾಮ ದರ್ಶನ ಪಡೆಯುವುದು ಭಾಗ್ಯದ ಫಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ್ ಹೇಳಿದರು.

ನಗರದ ರೈಲ್ವೆ ನಿಲ್ದಾಣದಲ್ಲಿ ಕೊಪ್ಪಳದಿಂದ ಅಯೋಧ್ಯೆಗೆ ತೆರಳಿದ 315 ಜನರನ್ನು ಅಭಿನಂದಿಸಿ, ಅಯೋಧ್ಯೆಗೆ ತೆರಳುವ ವಿಶೇಷ ರೈಲನ್ನು ಸ್ವಾಗತಿಸಲು ಆಯೋಜಿಸಿದ್ದ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ಕಳೆದ ಐದು ವರ್ಷಗಳ ಭಾರತೀಯರ ಕನಸು ಶ್ರೀರಾಮಮಂದಿರ ನಿರ್ಮಾಣವಾಗುವ ಮೂಲಕ ನನಸಾಗಿದೆ. ಸದ್ಯ ಕೋಟಿ ಕೋಟಿ ಭಾರತೀಯರು ಶ್ರೀರಾಮನ ದರ್ಶನಕ್ಕೆ ಕಾತೊರೆಯುತ್ತಿದ್ದಾರೆ. ಸದ್ಯ ಆಸ್ಥಾ ವಿಶೇಷ ರೈಲಿನ ಮೂಲಕ ಜನರು ಶ್ರೀರಾಮನ ದರ್ಶನಕ್ಕೆ ತೆರಳುತ್ತಿರುವುದು ಸಂತೋಷದ ವಿಷಯ. ಶ್ರೀರಾಮಮಂದಿರ ಉದ್ಘಾಟನೆ ಆದ ನಂತರ ಹನುಮನ ಉದಯಿಸಿದ ಕೊಪ್ಪಳ ನಾಡಿನಿಂದ ಜನರು ಶ್ರೀರಾಮನ ದರ್ಶನಕ್ಕೆ ತೆರಳುತ್ತಿರುವುದು ಜಿಲ್ಲೆಯ ಪುಣ್ಯವೇ ಸರಿ ಎಂದರು.

ಪ್ರಧಾನಿ ನರೇಂದ್ರ ಮೋದಿ ಭಾರತಕ್ಕೆ ಮತ್ತೊಂದು ಐತಿಹ್ಯ ನೀಡಿದರು. ಶ್ರೀರಾಮ ಮಂದಿರ ಕೆಲಸ ಸಾಮಾನ್ಯವಾದದ್ದಲ್ಲ. ಶ್ರೀರಾಮ ಶಕ್ತಿ ಭಾರತದ ನೆಲೆಯಲ್ಲಿದೆ. ಇದರಿಂದ ಭಾರತ ಮತ್ತಷ್ಟು ಎತ್ತರಕ್ಕೇರಲಿದೆ ಎಂದರು.

ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ರಾಮ ಮಂದಿರ ನಿರ್ಮಾಣದಲ್ಲಿ ಶ್ರೀರಾಮ ದೇವರ ಮೂರ್ತಿ ಮಾಡಿದ ಯೋಗೀರಾಜ್ ಅವರು ಕರ್ನಾಟಕದವು ಎಂಬುದು ಹೆಮ್ಮೆಯ ಸಂಗತಿ. ಶ್ರೀರಾಮ ದರ್ಶನ ಮಾಡುತ್ತಿರುವ ಜನರ ದರ್ಶನದಿಂದ ನಮಗೂ ಶ್ರೀರಾಮದ ದರ್ಶನ ಆದಂತೆ ಆಯಿತು ಎಂದರು.

ಬಿಜೆಪಿ ಮುಖಂಡೆ ಮಂಜುಳಾ ಕರಡಿ, ರೈಲ್ವೆ ಅಧಿಕಾರಿಗಳಾದ ಆಸೀಫ್ ಜಿ, ದೇವಾನಿ ಹಾಗು ಅಪಾರ ಜನರಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: