ಗಂಗಾವತಿಯಲ್ಲಿ ನಾಳೆ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ
ಗಂಗಾವತಿ: ಪ್ರಮುಖ ಪತ್ರಿಕಗಳು ಒಳಗೊಂಡಂತೆ ಸುಮಾರು ೩೭ಕ್ಕು ಹೆಚ್ಚು ಪತ್ರಿಕೆ ಹಾಗು ಹಲವು ಚಾನಲ್‌ಗಳ ಸದಸ್ಯತ್ವ ಹೊಂದಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಗಂಗಾವತಿ ತಾಲೂಕು ಘಟಕದಿಂದ ನಾಳೆ ರವಿವಾರ ಜುಲೈ ೨೮ ಬೆಳಗ್ಗೆ ೧೧ ಗಂಟೆಗೆ ತಾಲೂಕಾ ಪಂಚಾಯಿತಿ ಆವರಣದಲ್ಲಿರುವ ಮಂಥನ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆ ಆಯೋಜಿಸಲಾಗಿದೆ ಎಂದು ತಾಲೂಕು ಅಧ್ಯಕ್ಷ ನಾಗರಾಜ್ ಇಂಗಳಗಿ, ಉಪಾಧ್ಯಕ್ಷರಾದ ಜೋಗದ ಕೃಷ್ಣಪ್ಪ ನಾಯಕ, ಹರೀಷ್ ಕುಲಕರ್ಣಿ ಪ್ರಧಾನ ಕಾರ್ಯದರ್ಶಿ ದೇವರಾಜ್ ತಿಳಿಸಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಿಂದುಳಿದ ವರ್ಗದ ಕಲ್ಯಾಣ ಇಲಾಖೆ ಹಾಗು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್.ತಂಗಡಗಿಯವರು ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಶಾಸಕ ಗಾಲಿ ಜನಾರ್ದನರೆಡ್ಡಿಯವರು ಡಿವಿಜಿಯವರ ಭಾವಚಿತ್ರಕ್ಕೆ ಪುಷ್ಪರ್ಪಣೆ ಮಾಡುವರು, ಮಾಜಿ ಶಾಸಕ ಪರಣ್ಣ ಮುನವಳ್ಳಿಯವರು ಪತ್ರಕರ್ತರ ಗುರುತಿನ ಕಾರ್ಡ್ ವಿತರಿಸಲಿದ್ದು, ಅಧ್ಯಕ್ಷ ನಾಗರಾಜ್ ಇಂಗಳಗಿಯವರ ಅಧ್ಯಕ್ಷತೆಯಲ್ಲಿ ಜರುಗುವ ಈ ಕಾರ್ಯಕ್ರಮದಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯ ಜಾಜಿ ದೇವೆಂದ್ರಪ್ಪ ಉಪನ್ಯಾಸ ನೀಡುವರು.
ಮುಖ್ಯ ಅತಿಥಿಗಳಾಗಿ ಟಿಎಪಿಸಿಎಂಎಸ್ ನೂತನ ನಿರ್ದೇಶಕರು ಹಾಗು ಶ್ರೀ ದುರ್ಗಾದೇವಿ ದೇವಸ್ಥಾನ ಸಮಿತಿ ಅಧ್ಯಕ್ಷರಾದ ಜೋಗದ ನಾರಾಯಣಪ್ಪ ನಾಯಕ, ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆ ಚೇರ್ಮನ್ ನೆಕ್ಕಂಟಿ ಸೂರಿಬಾಬು, ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿ ನಿರ್ದೇಶಕ ಹಾಗು ಉದ್ಯಮಿ ಜಿ.ಶ್ರೀಧರ್, ಲಿಟಲ್ ಹಾರ್ಟ್ಸ್ ಸ್ಕೂಲ್ ಪ್ರಧಾನ ಕಾರ್ಯದರ್ಶಿ ಜಗನ್ನಾಥ್ ಆಲಂಪಲ್ಲಿ ವೈಜೆಆರ್ ಪಿಯು ಕಾಲೇಜಿನ ಚೇರ್ಮನ್ ಕಲ್ಯಾಣಂ ಜಾನಕಿರಾಮ್, ಗಂಗಾವತಿ ತಾಲೂಕಾ ಉಪ್ಪಾರ ಸಮಾಜದ ಅಧ್ಯಕ್ಷರು ಹಾಗು ಬಿಜೆಪಿ ಹಿಂದುಳಿದ ವರ್ಗ ಕೊಪ್ಪಳ ಜಿಲ್ಲಾಧ್ಯಕ್ಷರಾದ ವೆಂಕಟೇಶ್ ವಿ. ಅಮರಜ್ಯೋತಿ, ಸಮರ್ಥವಾಣಿ ಕನ್ನಡ ದಿನ ಪತ್ರಿಕೆ ಪ್ರಧಾನ ಸಂಪಾದಕರಾದ ಗಿರೀಶ್ ಕುಲಕರ್ಣಿ ಹಾಗು ಅಕ್ಷರ ಪಬ್ಲಿಕ್ ಸ್ಕೂಲ್ ಚೇರ್ಮನ್ ರವಿ ಚೈತನ್ಯ ರೆಡ್ಡಿ ಇವರು ಪಾಲ್ಗೊಳ್ಳುವರು.
ಶ್ರಮಿಕ ವರ್ಗದ ಮಹಿಳೆಯನ್ನೂ ಸನ್ಮಾನಿಸಲಿದ್ದು ಪತ್ರಕರ್ತ ಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ಸುಗೊಳಿಸಬೇಕೆಂದು ಅವರು ಕೋರಿದ್ದಾರೆ.
Comments are closed.