ಅಪಘಾತದಲ್ಲಿ ಪತ್ರಕರ್ತ ಸಾವು : ಕೆಯುಡಬ್ಲ್ಯೂಜೆ ಸಂತಾಪ

Get real time updates directly on you device, subscribe now.

ಮಂಡ್ಯ ಜಿಲ್ಲೆ ನಾಗಮಂಗಲ ಸಮೀಪ ಇಂದು ಸಂಜೆ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಹಿರಿಯ ಪತ್ರಕರ್ತ ಬಿ.ಸಿ.ಮೋಹನಕುಮಾರ್ (50) ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಆಂದೋಲನ, ಪ್ರಜಾವಾಣಿ ಸೇರಿದಂತೆ ಹಲವು ಪತ್ರಿಕೆಯಲ್ಲಿ ವರದಿಗಾರರಾಗಿ ಬಿ.ಸಿ.ಮೋಹನ ಕುಮಾರ್ ಅವರು ನಾಗಮಂಗಲ ತಾಲೂಕಿನ ಬ್ಯಾಡರಹಳ್ಳಿಯವರು.
ಪತ್ನಿ, ಬಂಧು ಬಳಗ ಸೇರಿದಂತೆ ಸ್ನೇಹ ಬಳಗವನ್ನು ಅಗಲಿದ್ದಾರೆ.

 

ಹಿರಿಯ ಪತ್ರಕರ್ತ ಬಿ.ಸಿ.ಮೋಹನಕುಮಾರ್ ಅವರ ನಿಧನಕ್ಕೆ ಕರ್ನಾಟ ಕಾರ್ಯನಿರತ ಪತ್ರಕರ್ತರ ಸಂಘ (KUWJ) ಸಂತಾಪ ವ್ಯಕ್ತಪಡಿಸಿದೆ.
ಮೋಹನಕುಮಾರ್ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಪ್ರಾರ್ಥಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!