ಜು. 27 ಕ್ಕೆ  ವಸತಿ ರಹಿತ ಕುಟುಂಬಗಳ ವಸತಿ ಹಕ್ಕಿನ ಜಾಗೃತಿಗಾಗಿ ಸ್ವಂತ ಮನೆ ನಮ್ಮ ಹಕ್ಕು    ಜಾಥಾ ಕಾರ್ಯಕ್ರಮಕ್ಕೆ ಚಾಲನೆ 

Get real time updates directly on you device, subscribe now.

ಕೊಪ್ಪಳ : ವಸತಿ ರಹಿತರ ಕುಟುಂಬಗಳ ವಸತಿ ಹಕ್ಕಿನ ಜಾಗೃತಿಗಾಗಿ ಸ್ವಂತ ಮನೆ ನಮ್ಮ ಹಕ್ಕು ಘೋಷಣೆಯೊಂದಿಗೆ ತಾಲೂಕಿನಲ್ಲಿ ಜಾಥಾ ಕಾರ್ಯಕ್ರಮಕ್ಕೆ ಗಿಣಿಗೇರಿ ಗ್ರಾಮದಲ್ಲಿ . ಜು. 27 ರಂದು ಶನಿವಾರ ಭಾರತ ಕಮ್ಯೂನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಚಾಲನೆ ನೀಡಲಿದ್ದಾರೆ ಎಂದು ನಿವೇಶನ ಮತ್ತು ವಸತಿ ರಹಿತರ ಹೋರಾಟ ಸಮಿತಿಯ ಕೊಪ್ಪಳ ತಾಲೂಕಾ ಅಧ್ಯಕ್ಷ ಎಸ್.ಎ. ಗಫಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
     ವಸತಿ ರಹಿತ ಕುಟುಂಬಗಳ ವಸತಿ ಹಕ್ಕಿನ ಜಾಗೃತಿಗಾಗಿ ಜಾಥಾ ಗಂಗಾವತಿ ಯಿಂದ ಹೊರಟು ದಿನಾಂಕ 27.07.2024 ರಂದು ಶನಿವಾರ ಬೆಳಿಗ್ಗೆ 10 ಗಂಟೆಗೆ ಕೊಪ್ಪಳ ತಾಲೂಕಿನ ಹೊಸ ಕನಕಪೂರ. ಅಲ್ಲಾ ನಗರ ಒಳಗೊಂಡು ಗಿಣಿಗೇರಾ ಗ್ರಾಮದ ಕೇಂದ್ರ ಸ್ಥಾನದಲ್ಲಿ ತಲುಪಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮಧ್ಯಾಹ್ನ 2:30ಕ್ಕೆ ಓಜನಹಳ್ಳಿ. ನವನಗರ. ಗಣೇಶ್ ತೆಗ್ಗ್ ಒಳಗೊಂಡು ಭಾಗ್ಯನಗರದಲ್ಲಿ ಕೇಂದ್ರ ಸ್ಥಳದಲ್ಲಿ ಜಾಥಾ ನಡೆಸಿ ಬಹಿರಂಗ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಬಳಿಕ ಸಂಜೆ 6:00 ಗಂಟೆಗೆ ಕುಕನೂರ ತಾಲೂಕಿನ ಲಕಮಾಪೂರ   ಗ್ರಾಮದಲ್ಲಿ ಜಾಥಾ ನಡೆಸಿ ಬಹಿರಂಗ ಸಭೆ ನಡೆಸಲು ಸರ್ವಸಮತದಿಂದ ನಿರ್ಣಯಿಸಲಾಯಿತು.
      ಜಾಥಾದಲ್ಲಿ ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟ (ಎಐಟಿಯುಸಿ) ರಾಜ್ಯ ನಾಯಕ ಚಂದ್ರಶೇಖರ ಡೊಂಗ್ರೆ. ಭಾರತ ಕಮ್ಯೂನಿಸ್ಟ್ ಪಕ್ಷದ ಕೊಪ್ಪಳ ಜಿಲ್ಲಾ ಉಸ್ತುವಾರಿ ಡಾ: ಕೆ.ಎಸ್. ಜನಾರ್ದನ ಸೇರಿದಂತೆ ಹಲವು ಮುಖಂಡರು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಮುಖಂಡರಾದ ಎ.ಎಲ್. ತಿಮ್ಮಣ್ಣ ಸಭೆಯಲ್ಲಿ ವಿವರಿಸಿದರು.
    ನಿವೇಶನ ಮತ್ತು ವಸತಿ ರಹಿತರ ಹೋರಾಟ ಸಮಿತಿಯ ಕೊಪ್ಪಳ ತಾಲೂಕಾ ಅಧ್ಯಕ್ಷ ಎಸ್.ಎ. ಗಫಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಾಲೂಕಾ ಕಾರ್ಯದರ್ಶಿ ತುಕಾರಾಮ್ ಬಿ. ಪಾತ್ರೋಟಿ. ಜಿಲ್ಲಾ ಮುಖಂಡರಾದ ನೂರ್ ಸಾಬ್ ಹೊಸಮನಿ. ರಾಜಪ್ಪ ಚೌವ್ಹಾಣ್. ರಾಜಾ ಸಾಬ್ ತಹಶೀಲ್ದಾರ್. ರೇಣುಕಾ ದ್ಯಾಮೋಜಿ ನಲವಡೆ. ರಾಜೇಶ್ವರಿ ರಾಮು ಇಟಗಿ. ಕಮಲಾಕ್ಷಿ ನಾರಾಯಣ ಘೋರ್ಪಡೆ. ಪಾರ್ವತಿ ಮಲ್ಲಿಕಾರ್ಜುನ್ ಹಡಪದ್ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: