ರಾಜಶೇಖರ್ ಹಿಟ್ನಾಳ ಗಂಗಾವತಿ ವಿಧಾನಸಭೆಗೆ ಸುಳ್ಳು ಸುದ್ದಿ : ಜ್ಯೋತಿ
ಕೊಪ್ಪಳ : ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ರಾಜಶೇಖರ್ ಹಿಟ್ನಾಳ ಅವರು ಕೊಪ್ಪಳ ಲೋಕಸಭೆಗೆ ಸ್ಪಧೆ೯ ಮಾಡಿ ಸೋತರೆ ಗಂಗಾವತಿಯಿಂದ ವಿಧಾನಸಭೆಗೆ ಸ್ಪಧೆ೯ ಮಾಡುತ್ತಾರೆ ಎಂಬುದು ಸುಳ್ಳು ಸುದ್ದಿ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾಯ೯ದಶಿ೯ ಜ್ಯೋತಿ ಎಂ. ಗೊಂಡಬಾಳ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜಶೇಖರ್ ಹಿಟ್ನಾಳ ಅವರು ಈಗಾಗಲೇ ಎರಡು ಭಾರಿ ಜಿಲ್ಲಾ ಪಂಚಾಯತಿ ಅಧ್ಯಕ್ಷರಾಗಿದ್ದು, ಕಳೆದ ಲೋಕಸಭೆಯಲ್ಲಿ ಸ್ಪಧಿ೯ಸಿ ಅತ್ಯಂತ ಕಡಿಮೆ ಅಂತರದಿಂದ ಪರಾಭವಗೊಂಡಿದ್ದಾರೆ. ಹಿಂದಿನ ವಿಧಾನಸಭೆಗೆ ಹೊಸಪೇಟೆಯಿಂದ ಆಕಾಂಕ್ಷಿಯಾಗಿದ್ದರು, ಅಲ್ಲಿ ಪಕ್ಷ ಸಂಘಟಿಸಿ ಗೆಲುವಿನ ನಗೆ ಬೀರುವಂತೆ ಮಾಡಿದರು, ಆದರೆ ಗಂಗಾವತಿಯಿಂದ ಸ್ಪಧೆ೯ ಎಂಬುದು ಸತ್ಯಕ್ಕೆ ದೂರವಾದ ಸಂಗತಿ, ಅಷ್ಟಕ್ಕೂ ಅವರು ಈ ಭಾರಿ ಲೋಕಸಭೆಯಲ್ಲಿ ಗೆಲುವು ಸಾದಿಸಲಿದ್ದಾರೆ. ಕಾಂಗ್ರೆಸ್ ಮಾಡಿದ ಕೆಲಸ, ಮಾತಿನಂತೆ ಐದು ಗ್ಯಾರಂಟಿ ಮೂಲಕ ಜನರ ಬದುಕಿಗೆ ಆಸರೆಯಾಗಿದ್ದು, ಐದು ವಷ೯ದ ಸುಭದ್ರ ಸರಕಾರದ ಮೂಲಕ ಇನ್ನಷ್ಟು ಪ್ರಗತಿ ಸಾಧಿಸಲಿದೆ, ಆದ್ದರಿಂದ ಸ್ವತಃ ಹಿಟ್ನಾಳ ಅವರೇ ಈ ಬಗ್ಗೆ ಹೇಳಿಕೊಂಡಿದ್ದು ಯಾವುದೇ ಅಪೇಕ್ಷೆ ಗಂಗಾವತಿ ಕ್ಷೇತ್ರದ ಮೇಲೆ ಇಲ್ಲ ಎಂದಿದ್ದಾರೆ. ಮಾಧ್ಯಮ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಸುದ್ದಿ ಹಬ್ಬಿಸಬಾರದು ಎಂದು ಗೊಂಡಬಾಳ ವಿನಂತಿಸಿದ್ದಾರೆ.
Comments are closed.