ಇನ್ನರ್ ವೀಲ್ ಕ್ಲಬ್ ನಿಂದ ಮಾವಿನಇಟಗಿ ಶಾಲೆಗೆ ಪ್ರಿಂಟರ್ ಮತ್ತು ಮಕ್ಕಳಿಗೆ ಟೂತ್ ಪೇಸ್ಟ್, ಪ್ಯಾಡ್ ವಿತರಣೆ
ಕುಷ್ಟಗಿ, ಫೆ,10; ಪಟ್ಟಣದ ಇನ್ನರ್ ವೀಲ್ ಕ್ಲಬ್ ವತಿಯಿಂದ ಶನಿವಾರ ಬೆಳಿಗ್ಗೆ ತಾಲೂಕಿನ ಮಾವಿನಇಟಗಿ ಗ್ರಾಮದ ಉನ್ನತಿಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪ್ರಿಂಟರ್ ಮತ್ತು ಮಕ್ಕಳಿಗೆ ಟೂತ್ ಪೇಸ್ಟ್, ಪ್ಯಾಡ್ ವಿತರಸಿದರು.
ಈ ಸಂದರ್ಭದಲ್ಲಿ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಶಾರದಾ ಶೆಟ್ಟರ್, ಕಾರ್ಯದರ್ಶಿ ವಂದನಾ ಗೋಗಿ, ಖಜಾಂಚಿ ಗೌರಮ್ಮ ಕುಡತಿನಿ, ಶಾರದಾ ಜಿಗಜಿನ್ನಿ, ತಬಸುಮ್ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರು ಉನ್ನತಿಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾವಿನಿಟಗಿ ಶಾಲೆಯ ಮುಖ್ಯ ಗುರುಗಳಾದ
ಗುರುಪಾದಪ್ಪ ಮಚಗಾರ ಹಾಗೂ ಶಿಕ್ಷಕರಾದ ಸುಶಿಲೇಂದ್ರ ಕುಲಕರ್ಣಿ, ಗೌರಮ್ಮ ತಳವಾರ, ಜ್ಯೋತಿ ಪಟಗಾರ, ಅಮರೇಶ ಹಿರೆಮಠ, ಸುಮಾ ಜಿ ಎಚ್ ವೆಂಕಟೇಶ ಕರೆಕಲ್ಲ ಶಿವಪ್ಪ ಬಿಂಗಿ ಉಪಸ್ಥಿತರಿದ್ದರು.
ನಂತರ ಡಿಸ್ಟಕ್ ಎಡಿಟರ್ ಡಾ.ಪಾರ್ವತಿ ಪಳೂಟಿ ಹದಿಅರಿಯದ ಮಕ್ಕಳಿಗೆ ಆರೋಗ್ಯ ಶುಚಿತ್ವ ಕುರಿತು ಮಾಹಿತಿ ನೀಡಿದರು.
ದಂತ ವೈದ್ಯೆ ಡಾ.ಕುಮದಾ ಪಲ್ಲೇದ ಶಾಲೆಯ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಉಚಿತ ದಂತ ತಪಾಸಣೆ ನಡೆಸಿ ದಂತ ಚಿಕಿತ್ಸೆ ಹಾಗೂ ತಪಾಸಣೆ ಕುರಿತು ಮಾಹಿತಿ ನೀಡಿದರು.
Comments are closed.