ವಿಶ್ವ ಕಾರ್ಮಿಕ ವರ್ಗದ ಮಹಾನ್ ನಾಯಕ ಲೆನಿನ್ ರವರ ಸ್ಮರಣ ಶತಾಬ್ದಿ ಸಂದರ್ಭದಲ್ಲಿ ಪುಸ್ತಕ ಬಿಡುಗಡೆ
.
ಕೊಪ್ಪಳ ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಕಚೇರಿಯಲ್ಲಿ ಪಕ್ಷದ ರಾಜ್ಯ ಸಮಿತಿಯ ಸದಸ್ಯರಾದ ಕಾಮ್ರೇಡ್ ರಾಮಾಂಜಿನಪ್ಪ ಆಲದಳ್ಳಿಯವರು ಪ್ರಮುಖ ನಾಲ್ಕು ಪುಸ್ತಕಗಳಾದ
ಭಾರತದಲ್ಲಿ ಜನ ಹೋರಾಟದ ಸಮಸ್ಯೆಗಳು, ನವೆಂಬರ್ ಮಹಾಪತಾಕೆ ಎತ್ತಿ ಹಿಡಿಯಿರಿ, ವೈಜ್ಞಾನಿಕ ದ್ವಂದಾತ್ಮಕ ವಿಧಾನಕ್ರಮವೇ ಮಾರ್ಕ್ಸ್ವಾದೀ ವಿಜ್ಞಾನ, ಚೆಗೆಸ್ಕೊವಿಯಾಕದಲ್ಲಿ ಸೋವಿಯತ್ ಮಿಲಟರಿ ಹಸ್ತಕ್ಷೇಪ ಮತ್ತು ಪರಿಷ್ಕರಣವಾದ ಎಂಬ ನಾಲ್ಕು ಪುಸ್ತಕಗಳನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಾರ್ಮಿಕ ವರ್ಗದ ಮಹಾನ್ ನಾಯಕ ಕಾಮ್ರೆಡ್ ಲೆನಿನ್ ಅವರ ಮರಣ ಶತಾಬ್ದಿಯ ಈ ಸಂದರ್ಭದಲ್ಲಿ ನಮ್ಮ ಪಕ್ಷ ಎಸ್.ಯು.ಸಿ.ಐ ಕಮ್ಯುನಿಸ್ಟ್ ರಾಜ್ಯ ಸಮಿತಿಯು ಈ ಯುಗದ ಅಪ್ರತಿಮ ಮಾರ್ಕ್ಸ್ವಾದಿ ಚಿಂತಕರು, ಪ್ರಪಂಚದಲ್ಲಿ ಮಾರ್ಕ್ಸ್ವಾದ ಲೆನಿನ್ ವಾದದ ಆಧಾರದ ಮೇಲೆ ಕಮ್ಯುನಿಸ್ಟ್ ವಿಚಾರಧಾರೆಗಳನ್ನು ವಿಸ್ತರಿಸಿ ಸಂಪತ್ತಬರಿತ ಗೊಳಿಸಿದಂತಹ ಕಾಮ್ರೇಡ್ ಶಿವ ದಾಸ್ ಘೋಷ್ ರವರ ವಿಚಾರಧಾರೆಗಳನ್ನು, ಭಾಷಣ ತುಣುಕುಗಳನ್ನು ಸಂಗ್ರಹಿಸಿ ಭಾಷಾಂತರ ಮಾಡಿರುವಂತಹ ಹಲವಾರು ಪುಸ್ತಕಗಳನ್ನು ಈಗಾಗಲೇ ಕರ್ನಾಟಕ ರಾಜ್ಯ ಸಮಿತಿಯು ಹೊರತಂದಿದೆ, ಅದೇ ರೀತಿ ಅವರ ಈಗಾಗಲೇ ನಮ್ಮ ಹಲವಾರು ಪುಸ್ತಕಗಳನ್ನ ಕರ್ನಾಟಕ ರಾಜ್ಯದ ಎಡವಾದಿ ಚಿಂತನೆಯ ಬೆಂಬಲಿಗರು, ಮಧ್ಯಮ ವರ್ಗ ಹಾಗೂ ಕಾರ್ಮಿಕವರ್ಗದ ಜನರು ಬೆಂಬಲಿಸಿದ್ದಾರೆ. ಹಾಗೆಯೇ ಈ ಹೊಸ ಪುಸ್ತಕಗಳಲ್ಲಿನ ಕಾಮ್ರೆಡ್ ಶಿವದಾಸ್ ಘೋಷ್ ರವರ ವಿಚಾರಗಳನ್ನು ಪ್ರೀತಿಯಿಂದ ಸ್ವೀಕರಿಸಿ, ಮುಂದೆ ದೇಶದಾದ್ಯಂತ, ಮುಖ್ಯವಾಗಿ ಕರ್ನಾಟಕದಲ್ಲಿ ಪಕ್ಷವು ಬೆಳೆಸುತ್ತಿರುವ ಕಾರ್ಮಿಕ ವರ್ಗದ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಹೋರಾಟವನ್ನು ಮುನ್ನಡೆಸಲು ಈ ಪುಸ್ತಕಗಳ ವಿಚಾರಗಳು ಸಹಾಯಕಾರಿಯಾಗಲಿವೆ ಎಂದರು. ಹಾಗೆಯೇ ನಮ್ಮ ಪಕ್ಷದ ಸದಸ್ಯರು,ಹಿತೈಸಿಗಳು ಬೆಂಬಲಿಗರು ಹಾಗೂ ಕಾರ್ಮಿಕ ವರ್ಗದ ಎಲ್ಲಾ ಜನತೆಯು ಈ ಪುಸ್ತಕಗಳನ್ನು ಖರೀದಿಸಿ ಅಲ್ಲಿರುವಂತಹ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಪ್ರಸ್ತುತ ನಡೆಯುತ್ತಿರುವ ಫ್ಯಾಸಿಸ್ಟ್ ಶಕ್ತಿಗಳ ವಿಜೃಂಭಿಸುತ್ತಿರುವ ಈ ಸನ್ನಿವೇಶದಲ್ಲಿ ಅಂತಹ ಫ್ಯಾಸಿಸ್ಟ್ ಶಕ್ತಿಗಳ, ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಹೋರಾಡಲು ಮತ್ತು ಸೋಲಿಸಲು ಕಾಮ್ರೆಡ್ ಶಿವದಾಸ್ ಘೋಷ್ ರವರ ಚಿಂತನೆಗಳು ಕಾರ್ಮಿಕ ವರ್ಗದ ಜನತೆಗೆ ಅಸ್ತ್ರವಾಗಲಿವೆ ಎಂದರು. ಈ ವಿಚಾರಗಳನ್ನು ಎಲ್ಲರೂ ತಿಳಿದುಕೊಂಡು ಮುಂದಿನ ಜನ ಚಳುವಳಿಯನ್ನು ಗಟ್ಟಿಗೊಳಿಸಬೇಕೆಂದು ಕರೆ ನೀಡಿದರು.
ಈ ಪುಸ್ತಕ ಬಿಡುಗಡೆಯ ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯ ಮುಖಂಡರಾದ ಶರಣಪ್ಪ ಉದ್ಬಾಳ್, ಜಿಲ್ಲಾ ಮುಖಂಡರಾದ ಶರಣು ಗಡ್ಡಿ ಸದಸ್ಯರಾದ ರಮೇಶ್,ವಿಜಯಲಕ್ಷ್ಮಿ,ಗಂಗರಾಜ್, ಶಾರದಾ,ದೇವರಾಜ್, ಮಂಜುಳಾ ಮುಂತಾದವರು ಭಾಗವಹಿಸಿದ್ದರು.
Comments are closed.