ಹುಲಿಗಿ : ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ 134ನೇ ಜಯಂತಿ ಆಚರಣೆ
ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದಲ್ಲಿ ಸಮಾನತೆಯ ಹರಿಕಾರ, ಮಾನವತಾವಾದಿ, ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ರವರ 134 ನೇ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಜಯಂತಿ ಆಚರಣೆ ಸಮಾರಂಭದಲ್ಲಿ ಗ್ರಾ. ಪಂ.ಅಧ್ಯಕ್ಷೆ ನೀಲಮ್ಮ ಗವಿಸಿದ್ದಪ್ಪ ಗೂಂಗಾಡಿ ಮಾಜಿ ತಾ. ಪಂ ಸದಸ್ಯ ಪಾಲಕ್ಷಪ್ಪ ಗೂಂಗಾಡಿ, ಪ್ರಭುರಾಜ ಪಾಟಿಲ್ ಮಾತಂಗೇಪ್ಪ ಕರಿಯಪ್ಪ ಶರಬಯ್ಯ ಹಿರೇಮಠ ದುರುಗಪ್ಪ ಪರಸುರಾಮ ಗ್ರಾ.ಪಂ.ಸದಸ್ಯರಾದ ಜೀಯಾಸಾಬ, ನಾಗರಾಜ ನರೇಗಲ್, ಖಾಜವಲಿ ಜವಳಿ, ನಾಗಮ್ಮ ಶರನಗೌಡ ಪಾಟಿಲ್, ಪಿಡಿಒ ಗುರುದೇವಮ್ಮ ಕಾರ್ಯದರ್ಶಿ ನಾಗರಾಜ ಹಲಿಗೇರಿ ಯುವಕ ಸಂಘದ ಪದಾಧಿಕಾರಿಗಳು ಸಿಬ್ಬಂದಿ ಇನ್ನಿತರರು ಹಾಜರಿದ್ದರು.