ಪೆಹಲ್ಗಾಮ್ ಉಗ್ರರ ದಾಳಿ, ಅಮಾಯಕರ ಹತ್ಯೆ ಖಂಡಿಸಿ ಕೊಪ್ಪಳ ಮುಸ್ಲಿಂ ಸಮುದಾಯ ಪ್ರತಿಭಟನೆ

ಕೊಪ್ಪಳ: ಕಾಶ್ಮೀರದ ಪೆಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿ ಹಾಗೂ ಅಮಾಯಕರ ಹತ್ಯೆಯನ್ನು ಖಂಡಿಸಿ ಮುಸ್ಲಿಂ ಸಮುದಾಯದ ಮುಖಂಡರು ಪ್ರತಿಭಟನೆ ನಡೆಸಿದರು. ನಗರದ ಜಾಮೀಯಾ ಮಜಿದ್ ಎದುರಿಗೆ ಪ್ರತಿಭಟನೆ ನಡೆಸಿ ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಯುಸೂಪಿಯಾ ಮಸ್ಜಿದ್ ನ ಮುಪ್ತಿ ನಜೀರ್ ಅಹ್ಮದ್ ರವರು ಭಾರತದ ಸ್ವರ್ಗ ಎಂದೇ ಖ್ಯಾತಿಯಾಗಿರುವ ಕಾಶ್ಮೀರದ ಪೆಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿ ಖಂಡನೀಯ ಅಮಾಯಕರ ಹತ್ಯೆ ಅಮಾನವೀಯವಾದದ್ದು. ಇಸ್ಲಾಂ ನಲ್ಲಿ ಒಬ್ಬ ವ್ಯಕ್ತಿಯನ್ನು ಕೊಂದರೆ ಇಡೀ ಮನುಕುಲವನ್ನೇ ಕೊಂದಂತೆ, ಒಬ್ಬ ವ್ಯಕ್ತಿಯನ್ನು ಬದುಕಿಸಿದರೆ ಇಡೀ ಮನುಕುಲವನ್ನೇ ಬದುಕಿಸಿದಂತೆ ಎಂದು ಹೇಳಲಾಗಿದೆ. ಉಗ್ರರ ದಾಳಿ ಅಮಾಯಕರ ಹತ್ಯೆ ಖಂಡನೀಯ. ಕೂಡಲೇ ಸರಕಾರ ಇಂತವರ ವಿರುದ್ದ ತೀವ್ರ ಉಗ್ರವಾದ ಕ್ರಮಕೈಗೊಳ್ಳಬೇಕು. ಮತ್ತೊಮ್ಮೆ ಈ ರೀತಿಯ ಘಟನೆಗಳು ನಡೆಯದಂತೆ ಇದಕ್ಕೆ ಕಾರಣೀಕರ್ತರಾದವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕೊಪ್ಪಳ ನಗರಸಭಾ ಅದ್ಯಕ್ಷ ಅಮ್ಜದ್ ಪಟೇಲ್ ಭಾರತ ದೇಶ ವಿಶಾಲವಾದದ್ದು ನಮ್ಮಲ್ಲಿ ಸಾವಿರಾರು ಜಾತಿ ಧರ್ಮಗಳಿದ್ದರೂ ಎಲ್ಲರೂ ಕೂಡ ಸಹೋದರತ್ವದಿಂದ ಒಂದೇ ತಾಯಿಯ ಮಕ್ಕಳಂತೆ ಬಾಳುತ್ತಿದ್ದೇವೆ , ಉಗ್ರರ ದಾಳಿ ಖಂಡನೀಯ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ದಾಳಿಯಲ್ಲಿ ಹುತಾತ್ಮರಾದವರಿಗೆ ಮೌನಾಚರನೆ ಮಾಡುವ ಮೂಲಕ ಶ್ರದ್ದಾಂಜಲಿ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ವೆಲ್ಪೆರ್ ಪಾರ್ಟಿ ಆಫ್ ಇಂಡಿಯಾದ ಅದಿಲ್ ಪಟೆಲ್, ಫಕ್ರು ಚುಕ್ಕನಕಲ್, ಸೈಯದ್ ನಾಸಿರ್ ಹುಸೇನ, ಮೈಲೈಕ್ ಜೀಲಾನ ಕಿಲ್ಲೇದಾರ್, ಮಾನ್ವಿ ಪಾಷಾ, ಚಿಕನ್ ಪೀರಾ, ಎಸ್ ಎ ಗಫಾರ್, ಸೈಯದ್ ಮೆಹಮೂದ ಹುಸೆನ್, ಯಾಜ್ದಾನಿ ಖಾದ್ರಿ, ಕಮಿಟಿ ಸದಸ್ಯರು, ಸಲೀಂ ಮಂಡಲಗೇರಿ, ಖಾದರಸಾಬ ಕುದರಿಮೋತಿ, ಮುಸ್ತಫಾ ಕುದರಿಮೋತಿ, ಅಂಜುಮನ್ ಕಮಿಟಿ ಅಧ್ಯಕ್ಷ ಅಸೀಪ್ ಕರ್ಕಿಹಳ್ಳಿ, ಸಿರಾಜ್ ಕೋಲ್ಕಾಅರ್, ಸಿರಾಜ್ ಮನೀಯರ, ಅಜೀಜ್ ಮಾನ್ವಿಕರ್, ಆರ್. ಎಂ. ರಫಿ, ಹಾಜಿ ಹುಸೇನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
Comments are closed.