ವಿಶೇಷ ವಿಮಾನದಲ್ಲಿ ಸುರಕ್ಷಿತವಾಗಿ ಬೆಂಗಳೂರು ತಲುಪಿದ ಕೊಪ್ಪಳ ಪ್ರವಾಸಿಗರ ತಂಡ

ಕೊಪ್ಪಳ, ಏ. ೨೪: ಪ್ರವಾಸಕ್ಕಾಗಿ ಕಾಶ್ಮೀರಕ್ಕೆ ತೆರಳಿ ಶ್ರೀನಗರದಲ್ಲಿಯೇ ಇದ್ದ ಕೊಪ್ಪಳ ಪ್ರವಾಸಿಗರ ತಂಡ ಸುರಕ್ಷಿತವಾಗಿ ಬೆಂಗಳೂರು ತಲುಪಿದೆ.
ಮೊನ್ನೆ ಪೆಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯ ನಂತರ ಶ್ರೀನಗರದ ತಮ್ಮ ಹೋಟಲ್ ನಲ್ಲಿಯೇ ಇದ್ದಂತಹ ಕೊಪ್ಪಳದ ಉದ್ಯಮಿಗಳು ಹಾಗೂ ರಾಜಕೀಯ ಮುಖಂಡರಾದ ಶಿವಕುಮಾರ ಶೆಟ್ಟರ್, ಶರಣಪ್ಪ ಸಜ್ಜನ್, ಕಾಟನ್ ಪಾಷಾ ಅವರ ಕುಟುಂಬದವರನ್ನು ನಿನ್ನೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಭೇಟಿಯಾಗಿದ್ದರು. ಹೋಟಲ್ ನಿಂದ ಹೊರಗಡೆ ಎಲ್ಲಿಯೂ ಹೋಗದಂತೆ ಹೇಳಿದ್ದ ಸಚಿವರು ಕರ್ನಾಟಕದ ಎಲ್ಲ ಪ್ರವಾಸಿಗರನ್ನು ವಿಶೇಷ ವಿಮಾನದಲ್ಲಿ ಕರೆದುಕೊಂಡು ಹೋಗುವುದಾಗಿ ಹೇಳಿದ್ದರು.
ಅದರಂತೆ ಕೊಪ್ಪಳದ ೧೯ ಜನರ ತಂಡವನ್ನು ವಿಶೇಷ ವಿಮಾನದಲ್ಲಿ ಮದ್ಯಾನ ೨ ಗಂಟೆಗೆ ಬೆಂಗಳೂರಿಗೆ ತಲುಪಿಸಿದ್ದಾರೆ. ಎಲ್ಲಾ ಪ್ರವಾಸಿಗರು ಸುರಕ್ಷಿತವಾಗಿ ಬೆಂಗಳೂರು ತಲುಪಿದ್ದಾರೆ.
“ಸುರಕ್ಷಿತವಾಗಿ ಮರಳಿ ಬೆಂಗಳೂರು ತಲುಪುವದಕ್ಕೆ ಕಾರಣೀಕರ್ತರಾದ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಹಾಗೂ ಸಚಿವರಾದ ಸಂತೋಷ್ ಲಾಡ್ ಅವರಿಗೆ ಧನ್ಯವಾದಗಳು”
– ಶಿವಕುಮಾರ್ ಶೆಟ್ಟರ್
“ಶ್ರೀನಗರದಿಂದ ಬೆಂಗಳೂರಿಗೆ ವಿಮಾನ ಪ್ರಯಾಣ ದರ ಅತೀ ಹೆಚ್ಚಾಗಿತ್ತು. ಸಚಿವರಾದ ಸಂತೋಷ್ ಲಾಡ್ ಇಡೀ ರಾತ್ರಿ ಎಲ್ಲಾ ವಸತಿಗೃಹಗಳಿಗೆ ತೆರಳಿ ಕನ್ನಡಿಗರಿಗೆ ಭೇಟಿಯಾಗಿ ಸಾಂತ್ವಾನ, ದೈರ್ಯ ಹೇಳಿದರು. ಎಲ್ಲರಿಗೂ ವಿಶೇಷ ಕಾಳಜಿವಹಿಸಿ ವಿಮಾನದಲ್ಲಿ ಕರೆತಂದಿದ್ದಾರೆ. ಅವರಂತಹ ಸರಳ ವ್ಯಕ್ತಿತ್ವದ ಶ್ರೀಮಂತ ಮನಸ್ಸಿನ ಸಚಿವರು ಅಪರೂಪ. ಅವರಿಗೆ ಮತ್ತು ಶಾಸಕರಾದ ರಾಘವೇಂದ್ರ ಹಿಟ್ನಾಳರಿಗೆ ಧನ್ಯವಾದಗಳು”
-ಕಾಟನ್ ಪಾಷಾ
Comments are closed.