ಡಿಸೆಂಬರ್ ಬಳಿಕ ಅಲ್ಲ ಐದು ವರ್ಷವೂ ಸಿದ್ದರಾಮಯ್ಯನವರೇ ಸಿಎಮ್ ಇರುತ್ತಾರೆ- ರಾಘವೇಂದ್ರ ಹಿಟ್ನಾಳ
ಕೊಪ್ಪಳ : ಜಾತಿ ಗಣತಿ ಸಮಿಕ್ಷೆ ಯಾರಿಗೂ ನಷ್ಟವಾಗುವುದಿಲ್ಲ ಸಮಾಜದಲ್ಲಿ ಜಾತಿವಾರು ಸಮಿಕ್ಷೆಯಿಂದ ಆರ್ಥಿಕ. ಶೈಕ್ಷಣಿಕ ಪ್ರಗತಿ ಕಾಣಲಿದೆ ವಿರೋಧ ಪಕ್ಷದವರು ವಿರೋಧಕ್ಕಾಗಿ ವಿರೋಧ ಮಾಡುತ್ತಿದ್ದಾರೆ ಸಮಿಕ್ಷೆಯ ವರದಿಯನ್ನು ಸಿಎಂ ಮುತುವರ್ಜಿ ವಹಿಸಲಿದ್ದಾರೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಲ್ಡೋಟಾ ಕಾರ್ಖಾನೆಗೆ ಪರಿಸರ ಇಲಾಖೆ ಕಳೆದ ವರ್ಷ ಅನುಮತಿ ನೀಡಿರೋದು ೨೦೨೪ ರಲ್ಲಿ ಅನುಮತಿ ನೀಡಿದ್ದಾರೆ ಅನ್ನೋ ಮಾಹಿತಿ ಇದೆ. ಕೇಂದ್ರದ ಪರಿಸರ ಇಲಾಖೆಯಿಂದ ಅನುಮತಿ ಸಿಕ್ಕಿರೋದು ೨೦೨೪ ರಲ್ಲಿ ಅನ್ನೋ ಮಾಹಿತಿ ಇದೆ. ಸಿಎಮ್ ಸಿದ್ದರಾಮಯ್ಯನವರು ಯಾವದೇ ಕೆಲಸ ಮಾಡಬಾರದು ಅನ್ನೋ ತಾಕೀತು ಮಾಡಿದ್ದಾರೆ ಹಳೆಯ ಆದೇಶದ ಕಾಪಿ ಹಾಕಿದ್ದಾರೆ..
ಹೀಗಾಗಿ ನಾವು ಮತ್ತೊಮ್ಮೆ ಸಿಎಮ್ ಗಮನಕ್ಕೆ vರುತ್ತೇವೆ. ಎನ್ವಿರ್ನಾಮೆಂಟ್ ಕ್ಲಿಯರೇನ್ಸ್ ಕೊಡೋದು ಕೇಂದ್ರ ಸರ್ಕಾರ.
ಜಿಲ್ಲೆಯ ಜನ ಪ್ರತಿನಿಧಿಗಳು ಮತ್ತೊಮ್ಮೆ ಸಿಎಮ್ ಗಮನಕ್ಕೆ ತರ್ತೀವಿ ಎಂದ ಹಿಟ್ನಾಳ. ಫ್ಯಾಕ್ಟರಿ ಅವರು ಏನೇ ಮಾಡಲಿ..
ಜನ ಮತ್ತು ಸ್ವಾಮೀಜಿಯವರ ನಿರ್ದಾರ ಅಂತಿಮ..ಸಿದ್ದರಾಮಯ್ಯನವರು ಯಾವದೇ ಚಟುವಟಿಕೆಗೆ ಅವಕಾಶ ಕೊಡಲ್ಲ ಅನ್ನೋ ನಂಬಿಕೆ ಇದೆ. —
ಸಿದ್ದರಾಮಯ್ಯನವರು ಐದು ವರ್ಷ ಇರ್ತಾರೆ. ಡಿಸೆಂಬರ್ ಬಂದ್ರೆ ಸಿದ್ದರಾಮಯ್ಯ ಅತೀ ಹೆಚ್ಚು ಬಾರಿ ಸಿಎಮ್ ಆದ ದಾಖಲೆ ಆಗತ್ತೆ..
ಡಿಸೆಂಬರ್ ಬಳಿಕ ಅಲ್ಲ,ಐದು ವರ್ಷ ಅವರೇ ಸಿಎಮ್ ಇರ್ತಾರೆ. ಗ್ಯಾರಂಟಿ ಜೊತೆಗೆ ಅನುದಾನ ಕ್ಕೂ ಹಣ ಕೊಟ್ಟಿದ್ದಾರೆ. ಕೇವಲ ಕಾಂಗ್ರೆಸ್ ನವರಿಗೆ ಅಷ್ಟೆ ಅಲ್ಲ,ಬಿಜೆಪಿಯವರಿಗೆ ಹಣ ಕೊಟ್ಟಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗ ಒಂದು ಮನೆ ಕೊಟ್ಟಿಲ್ಲ. ಸಚಿವ ಸ್ಥಾನ ನೀಡೋದು ಹೈಕಮಾಂಡ್ ಗೆ ಬಿಟ್ಟಿದ್ದು ಪಕ್ಷದ ತೀರ್ಮಾನ ಇದೀಗ ಸಚಿವ ಸ್ಥಾನದ ಚರ್ಚೆನೆ ಇಲ್ಲ ಬ್ರಷ್ಟಾಚಾರದಲ್ಲಿ ನಂಬರ್ ೧ ಅನ್ನೋ ರಾಯರೆಡ್ಡಿ ಹೇಳಿಕೆ ವಿಚಾರ. ಅವತ್ತು ನಾನ ಇರಲಿಲ್ಲ,ರಾಯರೆಡ್ಡಿ ಅವರು ಬ್ರಷ್ಟಾಚಾರ ಆಗಬಾರದು ಎಂದು ಹೇಳಿದ್ದಾರೆ..
ನಾನು ರಾಯರೆಡ್ಡಿ ಜೊತೆಗೆ ಮಾತಾಡಿದ್ದೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪ್ರಸನ್ನ ಗಡಾದ, ಗುರುರಾಜ ಹಲಗೇರಿ ಮಲ್ಲು ಪೂಜಾರ್, ಶಿವಕುಮಾರ ಶೆಟ್ಟರ, ಕೃಷ್ಣ ಇಟ್ಟಂಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.