ಕವಿ ಎ ಎಸ್ ಮಕಾನದಾರರಿಗೆ ರಾಜ್ಯಮಟ್ಟದ ಸರ್ವೋತ್ತಮ ಸೇವಾ ಪುರಸ್ಕಾರ ಪ್ರಶಸ್ತಿ

ಗದಗ. ಹಿರಿಯ ಪ್ರಧಾನ ವ, ಸಿ. ಜೆ ಎಂ ನ್ಯಾಯಾಲಯದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿರುವ ಹಿರಿಯ ಸಾಹಿತಿ ಎ. ಎಸ್. ಮಕಾನದಾರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣದ,ಶಾಸಕ ರಿಜ್ವಾನ್ ಹರ್ಷದ ಮುಂತಾದ ಗಣ್ಯರ ಸಮ್ಮುಖದಲ್ಲಿ ವಿಧಾನ ಸೌಧದ ಬ್ಯಾಂಕ್ವಟ್ ಹಾಲ್ ನ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪುರಸ್ಕಾರ ಪ್ರದಾನ ಮಾಡಿದರು
ಕರ್ನಾಟಕ ಸರ್ಕಾರ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಆ ಸು )ಇಲಾಖೆ
ಕರ್ನಾಟಕ ಸಚಿವಾಲಯ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಸರ್ಕಾರಿ ನೌಕರರ ಸೇವಾ ದಿನಾಚರಣೆ-2025 ಮತ್ತು ರಾಜ್ಯ ಸರ್ವೋತ್ತಮ ಸೇವಾ ಪುರಸ್ಕಾರ -2023 ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ವಿಶೇಷ ಸಾಧಕರಿಗೆ ಇಲಾಖಾವಾರು ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ನ್ಯಾಯಾಂಗ ಇಲಾಖೆಯ ವತಿಯಿಂದ ಎ ಎಸ್. ಮಕಾನದಾರರಿಗೆ ಪ್ರಶಸ್ತಿ ಪ್ರಧಾನ ಮಾಡಿದರು
ಕಳೆದ 2012ರಿಂದ ಮಾನ್ಯ ಕರ್ನಾಟಕ ಸರ್ಕಾರ ಜಿಲ್ಲಾ ಸರ್ವೋತ್ತಮ ಸೇವಾ ಪುರಸ್ಕಾರ ಮತ್ತು ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪುರಸ್ಕಾರ ನೀಡುವ ಯೋಜನೆ ಜಾರಿಗೆ ತಂದಿದ್ದು ರಾಜ್ಯ ದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಮಕಾನದಾರ ಭಾಜನರಾಗಿದ್ದು
ನ್ಯಾಯಾಂಗ ಇಲಾಖೆಯ ಇತಿಹಾಸ ದಲ್ಲಿಯೇ ಇಲಾಖಾವಾರು ರಾಜ್ಯ ಮಟ್ಟದ ಪುರಸ್ಕಾರಕ್ಕೂ ಭಾಜನ ರಾಗಿದ್ದಕ್ಕೆ ಇಲಾಖೆಗೆ ಒಂದು ವಿಶೇಷ ಗರಿ ಮೂಡಿದಂತಾಗಿದೆ
ಮಾನ್ಯ ಪ್ರಧಾನ ಜಿಲ್ಲಾ ಮತ್ತು
ಸತ್ರ ನ್ಯಾಯಾಧೀಶರು, ಅಧೀನ ನ್ಯಾಯಾಲಯಗಳ ನ್ಯಾಯಧೀಶರು, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರು ಪದಾಧಿಕಾರಿಗಳು, ನ್ಯಾಯಾಂಗ ಇಲಾಖೆಯ ಸಹೋದ್ಯೋಗಿ ಮಿತ್ರರು,ಗದಗ ಜಿಲ್ಲಾ ಪರಿಸರದ ಸಾಹಿತಿ ಮಿತ್ರರ ಸಹಕಾರ ಇಲಾಖೆಯ ಮಾನ್ಯ ಹಿರಿಯ ಅಧಿಕಾರಿಗಳು ಮಾರ್ಗದರ್ಶನ ವೇ ಮುಖ್ಯ ಕಾರಣ ವೆಂಬುದು ಸಾಹಿತಿ ಮಕಾನದಾರ ಅವರ ಅಭಿಮತ
ಗದಗ ಜಿಲ್ಲಾ ನ್ಯಾಯಾಂಗ ಇಲಾಖೆಯ ನೌಕರರ ಸಂಘ ಮತ್ತು ಜಿಲ್ಲಾ ನೌಕರರ ಸಹಕಾರಿ ಪತ್ತಿನ ಸಂಘದ ಪದಾಧಿಕಾರಿಗಳು ಅಭಿನಂದನೆಗಳು ಸಲ್ಲಿಸಿದ್ದಾರೆ
Comments are closed.