ಸರ್ವೋದಯ ಸಂಸ್ಥೆಯಲ್ಲಿ ಡಾ.ಅಂಬೇಡ್ಕರ್ ಜಯಂತಿ
ಕೊಪ್ಪಳ: ದಲಿತರು ದಮನಿತರ ಬದುಕಿನ ಆಶಾಕಿರಣ, ವಿಶ್ವಜ್ಞಾನಿ ಡಾ.ಬಿ.ಆರ್ ಅಂಬೇಡ್ಕರ್ ಅವರ ೧೩೪ನೇ ಜಯಂತಿಯನ್ನ ನಗರದ ಕಿನ್ನಾಳ ರಸ್ತೆಯಲ್ಲಿರುವ ಸರ್ವೋದಯ ಸಮಗ್ರ ಗ್ರಾಮೀಣಾಭಿವೃದ್ದಿ ಸಂಸ್ಥೆಯಲ್ಲಿ ಅತ್ಯಂತ ಸಡಗರದಿಂದ ಆಚರಿಸಲಾಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ಶಂಕ್ರಪ್ಪ ಅವರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ದಾವಣಗೆರೆಯ ಬಿಎಸ್‌ಎನ್‌ಎಲ್ ಅಧಿಕಾರಿ ಸತ್ಯನಾರಾಯಣ ಅವರು ಭಾಗವಹಿಸಿದ್ದರು.
ಸಂಸ್ಥೆಯ ಅಧ್ಯಕ್ಷರಾದ ನಾಗರಾಜ ದೇಸಾಯಿ ಅವರು ಈ ವೇಳೆ ಮಾತನಾಡುತ್ತಾ ಸಮ ಸಮಾಜ ನಿರ್ಮಾಣ ಇಂದಿನ ಅವಶ್ಯಕತೆಯಾಗಿದೆ ಎಂದರು ಮುಂದುವರೆದು ಮಾತನಾಡಿದ ಅವರು ಸಮಾಜಕ್ಕೆ ಅಂಬೇಡ್ಕರ್ ಅವರ ಕೊಡುಗೆ ಅನನ್ಯವಾದುದು ಎಂದು ಹೇಳಿದರು. ಸಮಾಜದಲ್ಲಿ ಯಾವುದೇ ಜಾತಿಯು ಮೇಲಲ್ಲ ಮತ್ತು ಕೀಳಲ್ಲ ಜಾತಿ ಮತ್ತು ವರ್ಣಗಳ ವ್ಯವಸ್ಥೆ ಮುಖ್ಯವಲ್ಲ ಒಕ್ಕೂಟ ವ್ಯವಸ್ಥೆಯಲ್ಲಿ ಸಮಾಜದ ಪ್ರತಿಯೊಬ್ಬ ಪ್ರಜೆಯು ಒಂದೇ ಎಂದು ಹೇಳಿದರು.
ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ದೀಪಾ ಸುನೀಲ್ ಅವರು ಮಾತನಾಡುತ್ತಾ ಅಂಬೇಡ್ಕರ್ ಅವರ ಜ್ಞಾನ ಅಪಾರವಾದುದು ಶೋಷಿತ ಸಮಾಜದಲ್ಲಿ ಹುಟ್ಟಿದ ಅವರು ಎಷ್ಟೇ ನೋವು ಅವಮಾನಗಳನ್ನು ಅನುಭವಿಸಿದರೂ ಎದೆಗುಂದದೆ ನಿರಂತರ ಅಭ್ಯಾಸದಲ್ಲಿ ತೊಡಗಿ ರಾಷ್ಟ್ರ ಮತ್ತು ಅಂತರಾಷ್ರೀಯ ಮಟ್ಟದಲ್ಲಿ ಕಂಗೊಳಿಸಿದ ಪರಿ ಇಂದು ಇಡೀ ವಿಶ್ವ ಅವರ ಜನ್ಮ ದಿನಾಚರಣೆಯನ್ನು ಆಚರಿಸುವಂತಾಗಿದೆ ಎಂದರು. ಆಡಳಿತಾಧಿಕಾರಿಗಳಾದ ಶಶಿ ಪುರಂದರೆ ಅವರು ಅಂಬೇಡ್ಕರ್ ಅವರ ಶಿಕ್ಷಣದ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡರೆ, ಡಾ.ವಾಣಿ ಅವರು ಅಂಬೇಡ್ಕರ್ ಅವರ ಬಾಲ್ಯ ಜೀವನದ ಬಗ್ಗೆ ಮಾತನಾಡಿದರು. ಕೃಷ್ಣಪ್ರಸಾದ ಅವರು ಅಂಬೇಡ್ಕರ್ ಅವರು ಜೀವನದುದ್ದಕ್ಕೂ ಅನುಭವಿಸಿದ ಅವಮಾನಗಳು ಮತ್ತು ಅದರ ವಿರುದ್ದ ಎದೆಗುಂದದೆ ಸೆಟೆದು ಂತು ನಿರಂತರ ಅಭ್ಯಾಸ ಮಾಡಿ ಆ ಅವಮಾನಗಳಿಗೆ ಪ್ರತ್ಯುತ್ತರ ಕೊಟ್ಟ ಸಾಧನೆಗಳ ಬಗ್ಗೆ ಮಾತನಾಡಿದರು. ಮತ್ತೋರ್ವ ಸಿಬ್ಬಂದಿ ರಮೇಶ ಅವರು ಭಾರತೀಯ ಸಂವಿಧಾನಕ್ಕೆ ಅಂಬೆಡ್ಕರ್ ಅವರ ಕೊಡುಗೆಯ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ರಮೇಶ ದೀಕ್ಷಿತ್ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು ಹಾಗೂ ಅಕ್ಕಮ್ಮ ಅವರು ಸ್ವಾಗತಿಸಿದರು ದಿಲೀಪ್ ಅವರು ವಂದನಾರ್ಪಣೆಯನ್ನು ನೆರವೇರಿಸಿದರು. ಈ ಸಂದರ್ಬದಲ್ಲಿ ಸರ್ವೋದಯ ಗ್ರಾಮೀಣಾಭೀವೃದ್ದಿ ಸಂಸ್ಥೆಯ ಸರ್ವ ಸಿಬ್ಬಂದಿ ವರ್ಗದವರು ಹಾಜರಿದ್ದರು.