ಶ್ರೀ ಗವಿಮಠಕ್ಕೆರೊಟ್ಟಿ, ನಿಂಬೆ ಹಣ್ಣು, ೨೦ಕ್ವಿಂಟಾಲ್ ಶೇಂಗಾ ಚಟ್ನಿ, ಮೆಣಸಿನಕಾಯಿ, ಬೆಲ್ಲ ಭಕ್ತರಿಂದಅರ್ಪಣೆ

Get real time updates directly on you device, subscribe now.

ಕೊಪ್ಪಳ- ಕು?ಗಿತಾಲೂಕಿನ ಹನುಮನಾಳ ಗ್ರಾಮ ಪಂಚಾಯಿತಿ ನರೇಗಾ ಕೂಲಿ ಕಾರ್ಮಿಕರ ವತಿಯಿಂದ ಕೊಪ್ಪಳ ಗವಿಸಿದ್ದೇಶ್ವರ ಮಠಕ್ಕೆ ಪ್ರತಿವರ್ಷದಂತೆ ಈ ವರ್ಷವೂ ಮಠದಜಾತ್ರಾ ಮಹಾದಾಸೋಹಕ್ಕೆ (೧೦೦೦೦) ಹತ್ತು ಸಾವಿರರೊಟ್ಟಿ, ೨(ಎರಡು) ಕ್ವಿಂಟಲ್‌ಕರ್ಚಿಕಾಯಿ (ಕಡಬು),೫೦ಕೆ.ಜಿ. ಕಾಳು ಗವಿಸಿದ್ದೇಶ್ವರ ಮಠಕ್ಕೆ ಹನುಮನಾಳದ ಹಾಗೂ ತುಗ್ಗಲದೋಣಿ ಸಧ್ಬಕ್ತರು ಭಜನಾ ಮುಖಾಂತರ ೨೬/೧/೨೦೨೫ ರಂದು ಶ್ರೀ ಮಠಕ್ಕೆಅರ್ಪಿಸಲಿದ್ದಾರೆ. ಪ್ರತಿ ವ?ದಂತೆ ಈ ವ?ವೂಕೂಡಕು?ಗಿತಾಲೂಕತಾವರಗೇರಾ ಹಾಗೂ ಹಂಚಿನಾಳ ಗ್ರಾಮಸ್ಥರಿಂದ ಲಿಂಬಿಕಾಯಿ, ಉಪ್ಪಿನಕಾಯಿ, ಹುಣಸೆಕಾಯಿ ಚಟ್ನಿಗಳನ್ನು ತಯಾರು ಮಾಡಲಾಗುತ್ತಿದೆ. ಸುಮಾರು ೨೭ ಸಾವಿರ ನಿಂಬೆಹಣ್ಣುಗಳಿಂದ ತಯಾರಿಸಿದ ನಿಂಬೆಕಾಯಿ ಚಟ್ನಿಯನ್ನು ಹದಿನೈದು ದಿನಗಳ ಕಾಲ ನಡೆಯುವಜಾತ್ರಾ ಮಹಾದಾಸೋಹಕ್ಕಾಗಿಎರಡುಗ್ರಾಮದಗ್ರಾಮಸ್ಥರು ತಯಾರಿಸಿ ಶ್ರೀಮಠಕ್ಕೆ ತಂದುಅರ್ಪಿಸಲಿದ್ದಾರೆ.
ಗುಲ್ಬರ್ಗಜಿಲ್ಲೆಯಜೀವರ್ಗಿತಾಲೂಕ ಹಾಗರಗುಂಡಿಗ್ರಾಮದಿಂದ ೨೦ಕ್ವಿಂಟಲ್ ಶೇಂಗಾ ಚಟ್ನಿಯನ್ನುಕೈಯಿಂದಕುಟ್ಟಿ ಪುಡಿ ಮಾಡಿ ಸಿದ್ಧಪಡಿಸುವ ಕಾರ್ಯ ಭರದಿಂದ ಸಾಗಿದೆ. ಈ ಗ್ರಾಮದ ಸದ್ಭಕ್ತರುಜಾತ್ರೆಯ ಮುನ್ನಾದಿನ ಶ್ರೀಮಠಕ್ಕೆ ಅರ್ಪಿಸಲಿದ್ದಾರೆ. ಬ್ಯಾಡಗಿ ನಗರದ ಮೆಣಸಿನಕಾಯಿ ವರ್ತಕರಿಂದಜಾತ್ರಾ ಮಹಾದಾಸೋಹಕ್ಕಾಗಿ ಸುಮಾರು ೨೧ ಚೀಲ ಮೆಣಸಿನಕಾಯಿ ಚೀಲಗಳನ್ನು ಕೆಂಪುಚಟ್ನಿತಯಾರ ಮಾಡುವುದಕ್ಕಾಗಿಜಾತ್ರಾ ಮಹಾದಾಸೋಹಕ್ಕೆ ಸಲ್ಲಿಸಿದ್ದಾರೆ.ಕೊಪ್ಪಳತಾಲೂಕಿನಗುಡಗೇರಿಗ್ರಾಮದ ಭಕ್ತರಿಂದ ೩೦೦೦ ರೊಟ್ಟಿ, ೨ ಹೆಸರು ಪ್ಯಾಕೆಟ್‌ಇತರ ಧಾನ್ಯಗಳನ್ನು, ರೋಣತಾಲೂಕುಇಟಗಿಗ್ರಾಮದ ಗವಿಸಿದ್ದೇಶ್ವರ ಶಾಖಾಮಠದ ಸದ್ಭಕ್ತರಿಂದ ಕೊಪ್ಪಳ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಮಹಾಪ್ರಸಾದಕ್ಕೆ ೧೧ ಕ್ವಿಂಟಲ್ ಲಾಡು ಮಹಾಪ್ರಸಾದವನ್ನು ಸಮರ್ಪಿಸಿದ್ದಾರೆ.ದಾನಿಗಳಿಗೆ ಪೂಜ್ಯರು ಆಶಿರ್ವದಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!