ವಿಕಲಾಂಗ ಮಕ್ಕಳಿಗೆ ಮತ್ತು ವಿಕಲಾಂಗ ವಯಸ್ಕರರಿಗೆ ವೀಲ್ ಚೇರ್ಸ್ ವಿತರಣೆ
ಕೊಪ್ಪಳದಲ್ಲಿ ಚೈಲ್ಡ್ ಸಪೋರ್ಟ್ ಫೌಂಡೇಶನ್ ನಿಂದ ವಿಕಲಾಂಗ ಮಕ್ಕಳಿಗೆ ಮತ್ತು ವಿಕಲಾಂಗ ರಿಗೆ ತೀರಾ ನಡೆಯಲಿಕೆ ಬರದೆ ವೀಲ್ ಚೇರ್ ಅವಶ್ಯಕತೆ ಇರುವಂತವರಿಗೆ ಇಂದು ಬಾಲಕಿಯರ ಪದವಿಪೂರ್ವ ಕಾಲೇಜು ಆವರಣದಲ್ಲಿ ವಿತರಿಸಲಾಯಿತು. ಚೈಲ್ಡ್ ಸಪೋರ್ಟ್ ಪೌಂಡೇಶನ್ ಕೊಪ್ಪಳದಲ್ಲಿ ಸುಮಾರು ನಾಲ್ಕೈದು ವರ್ಷದಿಂದ ಮಕ್ಕಳ ಕುರಿತು ಕೆಲಸ ಮಾಡುತ್ತಿದ್ದು ಒಂದಲ್ಲ ಒಂದು ಕಾರ್ಯಚಟುವಟಿಕೆಗಳನ್ನು ಮಾಡುತ್ತಾ ಮಕ್ಕಳಿಗೆ ಅವಶ್ಯಕತೆಗೆ ತಕ್ಕಂತೆ ತಕ್ಕ ಮಟ್ಟಿಗೆ ಕೆಲವು ಮೂಲಭೂತ ಅವಶ್ಯಕತೆಗಳನ್ನು ಪೂರೈಸುವ ಕೆಲಸ ಮಾಡುತ್ತಾ ಬಂದಿದೆ ಎಂದು ಪ್ರಾಸ್ತಾವಿಕ ವಾಗಿ ಶಂಕರ್ ಅವರು ಮಾತನಾಡುತ್ತಾ ಪರಿಚಯಿಸಿದರು.ನಂತರ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳಾದ ದೇಶೆಪಾಂಡೆ ಅವರು ವೀಲ್ ಚೇರ್ ಗಳನ್ನು ವಿತರಿಸುವ ಮೂಲಕ ಇನ್ನಷ್ಟು ಅತಿಅವಶ್ಯಕ ಇರುವವರಿಗೆ ಸಹಾಯಮಾಡಿ ಎಂದು ತಿಳಿಸಿದರು.ತುಂಬಾ ದೂರದಿಂದ ಬಂದ ಮಗುವಿನ ಪಾಲಕರಿಗೆ ವಿತರಿಸಿ ಕೆಲವು ಹತ್ತಿರ ಇರುವ ಮಕ್ಕಳನ್ನು ಮಾತ್ರ ಕರೆಯಲಾಗಿತ್ತು ಅವರಿಗೆ ಅವರ ಪೊಷಕರಿಗೆ ತಲುಪಿಸುವುದು ಮುಖ್ಯವಾದ್ದರಿಂದ ಮಕ್ಕಳಿಗೆ ಸಹಕಾರ ಆಗಲಿ ಎನ್ನುವ ನಿಟ್ಟಿನಲ್ಲಿ ವಿತರಣೆ ಮಾಡಲಾಯಿತು.ಈ ಒಂದು ಸಂದರ್ಭದಲ್ಲಿ ಹತ್ತು ಜನ ವಿಕಲಾಂಗರಿಗೆ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಚೈಲ್ಡ್ ಸಪೋರ್ಟ್ ಪೌಂಡೇಶನ್ ನ ವಿನಾಯಕ ,ಮತ್ತು ಬಾಲಾಜಿಯವರು ಹಾಗೂ ಕೃಷ್ಣಾ ಅವರು ಉಪಸ್ಥಿತಿ ಇದ್ದರು.