ಭಗವಂತನ ಪ್ರೇರಣೆಯಿಂದ ಮಹತ್ವದ ಕಾರ್ಯಗಳು ನಡೆಯುತ್ತಿವೆ: ಸಿದ್ದಾರೂಢ ಸೇವಾ ಟ್ರಸ್ಟ್ ಅಧ್ಯಕ್ಷ ಆತ್ಮಾನಂದ ಭಾರತಿ ಮಹಾಸ್ವಾಮಿಜೀ
ಕೊಪ್ಪಳ.ಜ.13: ಭಗವಂತನ ಪ್ರೇರಣೆಯಿಂದ ಪ್ರತಿಯೊಂದು ಕೆಲಸ ಕಾರ್ಯಗಳು ಸುಗಮವಾಗಿ ಜರುಗುತ್ತವೆ ಉತ್ತಮ ಸಂಸ್ಕಾರ ಹೊಂದಬೇಕು ಎಂದು ದದೇಗಲ್ ಗ್ರಾಮದ ಸಿದ್ದಾರೂಢ ಸೇವಾ ಟ್ರಸ್ಟ್ ಅಧ್ಯಕ್ಷ ಆತ್ಮಾನಂದ ಭಾರತಿ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಮಂಗಳಾಪೂರ ರಸ್ತೆ ಬಳಿ ಇರುವ ಶ್ರೀ ಗವಿಗುಮ್ಮಣ್ಣೇಶ್ವರ ದೇವಸ್ಥಾನದ ಕಾರ್ತಿಕೋತ್ಸವ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಆರ್ಶಿವಚನ ನೀಡಿದ ಅವರು ಮನಸ್ಸು ಜ್ಮನ ಶ್ರೇಷ್ಠವಾಗಿದ್ದು ಒಳ್ಳೆಯದು ಮಾಡಲು ಸಾಧ್ಯವಾಗಿಲ್ಲ ಎಂದರೆ ಕೆಟ್ಟ ಕೆಲಸವನ್ನು ಯಾರು ಮಾಡಬಾರದು ಎಂದು ಕಿವಿಮಾತು ಹೇಳಿದರು.
ಶ್ರೀ ಗವಿಗುಮ್ಮಣ್ಣೇಶ್ವರ ದೇವಸ್ಥಾನದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ದೇವಸ್ಥಾನ ಅಭಿವೃದ್ಧಿ ಅಭಿವೃದ್ಧಿ ಪಡಿಸಿ ಉತ್ತಮ ಪ್ರವಾಸಿ ತಾಣವಾಗಿ ಪರಿವರ್ತಿಸಬೇಕು ಎಂದು ಸಲಹೆ ನೀಡಿದರು.
ಶ್ರೀ ಗವಿಗುಮ್ಮಣ್ಣೇಶ್ವರ ದೇವಸ್ಥಾನದ ಅಧ್ಯಕ್ಷ ಬಸವರಾಜ ಪಲ್ಲೇದ, ಗೌರವಾಧ್ಯಕ್ಷ ಸಿದ್ದಪ್ಪ ಹಂಚಿನಾಳ, ಪಂಪಣ್ಣ ಪಲ್ಲೇದ ಮಾತನಾಡಿದರು.
ಬೆಳಿಗ್ಗೆ ಶ್ರೀ ಗವಿಗುಮ್ಮಣ್ಣೇಶ್ವರ, ಶಿವಲಿಂಗು, ನಂದೀಶ್ವರ, ನಾಗದೇವರ ಮೂರ್ತಿಗೆ ಮಹಾ ರುದ್ರಾಭಿಷೇಕ ನಂತರ ವಿವಿಧ ಫಲಪುಷ್ಪಗಳಿಂದ ಅಲಂಕಸಿ, ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದದೊಂದಿಗೆ ವಿಶೇಷ ಪೂಜೆ ನಡೆಯಿತು.
ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಜರುಗಿತು.
ಸಂಜೆ ಪಲ್ಲೇದವರ ಓಣಿ ಹಾಗೂ ಮಂಗಳಾಪೂರ, ದದೇಗಲ್ ಗ್ರಾಮಸ್ಥರಿಂದ ಕಾರ್ತಿಕೋತ್ಸವ ನಡೆಯಿತು.
ರಾತ್ರಿ ಪಲ್ಲೇದವರ ಓಣಿ ಶ್ರೀ ಬಸವೇಶ್ವರ ಭಜನಾ ಮಂಡಳಿ ಹಾಗೂ ದದೇಗಲ್ ಗ್ರಾಮದ ಶ್ರೀ ಮಾರುತೇಶ್ವರ ಭಜನಾ ಮಂಡಳಿ ವತಿಯಿಂದ ಭಕ್ತಿ ಭಾವದಿಂದ ವಿಶೇಷ ಭಜನಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ಗವಿಗುಮ್ಮಣ್ಣೇಶ್ವರ ದೇವಸ್ಥಾನದ ಅಧ್ಯಕ್ಷ ಬಸವರಾಜ ಪಲ್ಲೇದ, ಗೌರವಾಧ್ಯಕ್ಷ ಸಿದ್ದಪ್ಪ ಹಂಚಿನಾಳ, ಉಪಾಧ್ಯಕ್ಷ ಗವಿಸಿದ್ದಪ್ಪ ಗುರಪ್ಪ ಪಲ್ಲೇದ, ಮಲ್ಲಿಕಾರ್ಜುನ ಸಜ್ಜನ, ವಿರುಪಾಕ್ಷಪ್ಪ ಅಂಗಡಿ, ಶೇಖರಗೌಡ ಓಜನಹಳ್ಳಿ, ಮಲ್ಲಿಕಾರ್ಜುನ ಶಿದ್ನೇಕೋಪ್ಪ, ರಾಜು ಮಂಗಳಾಪೂರ, ವಿರುಪಾಕ್ಷಪ್ಪ ಮುರಳಿ, ಕುಮಾರಸ್ವಾಮಿ ಭದ್ರಪೂರಮಠ, ಮಲ್ಲಪ್ಪ ಗವಿಸಿದ್ದಪ್ಪ ಪಲ್ಲೇದ, ಪರುಶುರಾಮ ಅಂಬಿಗರ, ಸುರೇಶ ಕಾಟ್ರಳ್ಳಿ, ಅನೀಲ ಕರಮುಡಿ, ಬಸವರಾಜ ಬಂಡಿಹಾಳ, ಯಲ್ಲಪ್ಪ ಹುರಿಗೆಜ್ಜಿ, ಶಿವಪ್ಪ ಗುಡಗೇರಿ, ವಿರುಪಾಕ್ಷಪ್ಪ ಹೂಗಾರ, ಗವಿ ಜಂತಗಲ್, ಮಲ್ಲಪ್ಪ ನಾಗಪ್ಪ ಪಲ್ಲೇದ, ಶಿವುಕುಮಾರ ಕಲ್ಲನವರ, ಪ್ರಭುಗೌಡ ಪಾಟೀಲ್, ಮಂಜುನಾಥ ಸಾಲಿಮಠ, ಹನುಮಂತಪ್ಪ ಶೆಳ್ಳಿ, ಕಿರಣ, ಮಹಾಂತೇಶ ಬಾವಿ, ರವಿ ದಿವಟರ್,ಗವಿಸಿದ್ದಪ್ಪ ನಾಗಪ್ಪ ಪಲ್ಲೇದ, ನಾಗರಾಜ ಲಕ್ಕುಂಡಿ ಮಠ, ವಿರೇಶ ಪಲ್ಲೇದ, ಪ್ರಕಾಶ ಪಲ್ಲೇದ, ಶ್ರೀ ಕಾಂತ ಚಿಕ್ಕನಗೌಡ್ರ ಹಾಗೂ ಪಲ್ಲೇದವರ ಓಣಿಯ ಗುರು ಹಿರಿಯರು, ಯುವಕರು, ಮಹಿಳೆಯರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.