ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹಾದಾಸೋಹದಲ್ಲಿಸಾವಯವ ಬೆಲ್ಲದ ೧೪ಲಕ್ಷ ಜಿಲೇಬಿ

0

Get real time updates directly on you device, subscribe now.

ಕೊಪ್ಪಳ- ದಕ್ಷಿಣ ಭಾರತದ ಕುಂಭಮೇಳವೆಂದು ಪ್ರಖ್ಯಾತಿ ಪಡೆದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಧಾರ್ಮಿಕ ಸಾಮಾಜಿಕ ಸಾಂಪ್ರದಾಯಿಕ ಕಾರ್ಯಕ್ರಮಗಳ ಸಂಗಮ. ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ನಿಮಿತ್ಯ ನಾಡಿನ ಅನೇಕ ಭಕ್ತರು ವಿವಿಧ ವಿಶಿ? ಭಕ್ತಿ ಸೇವೆಗಳನ್ನು ಸಲ್ಲಿಸುವುದರ ಮೂಲಕ ಭಕ್ತಿಅರ್ಪಿಸುವದುಅಪ್ಯಾಯಮಾನ. ಹಾಗೆಯೇಸಿಂಧನೂರಿನ ವಿಜಯಕುಮಾರ್ ಹಾಗೂ ಗೆಳೆಯರ ಬಳಗದ ೧೦ ಜನರತಂಡ ನಿರಂತರವಾಗಿ ಸಮಾಜ ಸೇವೆ ಕಾರ್ಯವನ್ನು ಮಾಡುತ್ತಿದ್ದು, ಪ್ರತಿ ವ?ವೂ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಪ್ರತಿ ವ?ದಂತೆ ಈ ವ?ವೂಕೂಡ ಗೆಳೆಯರ ಬಳಗ ವಿಶೇ?ವಾಗಿ ಮಹಾದಾಸೋಹಕ್ಕೆ ಸೇವೆಯನ್ನು ಸಲ್ಲಿಸುತ್ತಿದೆ.೧೫ರಂದುರಥೋತ್ಸವಹಾಗೂ ೧೬ನೇ ತಾರೀಖುಎರಡು ದಿನಗಳ ಕಾಲ ಶ್ರೀ ಗವಿಸಿದ್ದೇಶ್ವರ ಜಾತ್ರಾ

 


ಮಹೋತ್ಸವಕ್ಕೆ ಬರುವ ಭಕ್ತಾದಿಗಳಿಗೆ ಜಿಲೇಬಿಯನ್ನುತಯಾರು ಮಾಡಿ ಬಡಿಸುವ ಸೇವಾ ಕೈಂಕರ್ಯಕ್ಕೆ ಈ ತಂಡಈಗಾಗಲೇ ಜಿಲೇಬಿ ತಯಾರು ಮಾಡುವ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.ಜಿಲೇಬಿ ತಯಾರಿ ಸೇವೆಗೆ ಸುಮಾರು ೫೦ ಕ್ವಿಂಟಲ್ ಮೈದಾ ಹಿಟ್ಟು, ೧೩೦ ಕ್ವಿಂಟಲ್‌ಸಾವಯವಬೆಲ್ಲ, ೧೬೦೦ ಲೀಟರ್‌ಎಣ್ಣೆ, ೩೦೦ ಲೀಟರ್‌ತುಪ್ಪ, ೨೦ ಕೆಜಿಯಾಲಕ್ಕಿ, ೧೫೦ ಲೀಟರ್ ಮೊಸರುಅನ್ನು ಬಳಸಲಾಗುತ್ತಿದೆ.ಎರಡು ದಿನಗಳ ಕಾಲ ಸುಮಾರು ೪೫೦ ಕ್ವಿಂಟಲ್‌ಜಿಲೇಬಿಯನ್ನುತಯಾರಿಸಲಾಗುತ್ತದೆ. ಸುಮಾರು ೧೨ ರಿಂದ ೧೪ ಲಕ್ಷಜಿಲೇಬಿ ತಯಾರಾಗಬಹುದುಎಂದುಬಾಣಸಿಗರು ಹೇಳುತ್ತಾರೆ. ಈ ಒಂದುಕಾರ್ಯಕ್ಕೆ ೧೨೦ ಬಾಣಸಿಗರು,ಅವರಿಗೆ ಸಹಾಯ ಮಾಡಲು ೧೫೦ ಜನ ಹಾಗೂ ಕಾರ್ಯಕರ್ತರು ನಿರಂತರವಾಗಿ ಸೇವೆಯನ್ನು ಮಾಡುತ್ತಿದ್ದಾರೆ. ಈ ಜಿಲೇಬಿಗಳನ್ನು ತಯಾರಿಸಿದ ನಂತರವ್ಯವಸ್ಥಿತವಾಗಿಡಲು ೧೩೦೦ ಟ್ರೇಗಳನ್ನು ಸಿಂಧನೂರಿನ ಮಹಾನಂದಿ ಪ್ಲಾಸ್ಟಿಕ್ ಮಾಲೀಕರಾದ ಲಕ್ಷ್ಮಣ್ ಶೆಟ್ಟಿಅವರುಉಚಿತವಾಗಿ ನೀಡಿದ್ದಾರೆ.ಈ ಎರಡು ದಿನಗಳ ಕಾಲ ಜಾತ್ರಾ ಮಹಾ ದಾಸೋಹದಲ್ಲಿಜಾತ್ರೆಗೆ ಆಗಮಿಸಿದ ಭಕ್ತರುಜಿಲೇಬಿಯನ್ನು ಸವಿಯಲಿದ್ದಾರೆ.ಹೆಚ್ಚಿನ ಮಾಹಿತಿಗಾಗಿ-೯೪೪೯೨೪೭೨೫೯ ಸಂಪರ್ಕಿಸಬಹುದುಎಂದು

Get real time updates directly on you device, subscribe now.

Leave A Reply

Your email address will not be published.

error: Content is protected !!