ರಥೋತ್ಸವಕ್ಕೆ ಕ್ಷಣಗಣನೆ ..ಶ್ರೀ ಗವಿಮಠದಜಾತ್ರೆ ಲಘು ರಥೋತ್ಸವ(ಉಚ್ಛಾಯಿ)  -ದೇವಿಗೆ ಉಡಿ ತುಂಬುವಕಾರ್ಯಕ್ರಮ

0

Get real time updates directly on you device, subscribe now.

ಕೊಪ್ಪಳ- ಶ್ರೀ ಗವಿಮಠದಜಾತ್ರೆಯ ಅಂಗವಾಗಿ ಜರುಗುವ ಮಹಾರಥೋತ್ಸವದ ಹಿಂದಿನ ದಿನವಾದಮಹಾರಥೋತ್ಸವು ಸಾಂಗತ್ಯವಾಗಿ, ನಿರ್ವಿಘ್ನವಾಗಿ, ಧಾರ್ಮಿಕ ಸದಾಶಯಗಳಂತೆ ಯಶಸ್ವಿಯಾಗಲಿ ಎಂಬ ಮುನ್ನುಡಿಯಂತೆಇಂದು ದಿನಾಂಕ ೧೪.೦೧.೨೦೨೫ರಂದು ಸಾಯಂಕಾಲ ೬ಘಂಟೆಗೆ ಲಘು ರಥೋತ್ಸವಕಾರ್ಯಕ್ರಮಜರುಗಿತು.ಇದಕ್ಕೆ ’ಉಚ್ಛಾಯ’ ಎಂತಲೂಕರೆಯುತ್ತಾರೆ.ಲಘು ರಥೋತ್ಸವಕ್ಕೆ ಪೂಜೆ ಸಲ್ಲಿಸಿದ ನಂತರ ವಿಜೃಂಭಣೆಯಿಂದ ಭಕ್ತಿ-ಭಾವಗಳೊಂದಿಗೆ ಲಘು ರಥೋತ್ಸವಜರುಗಿತು.ಆಕರ್ಷಕ ನಂದಿಕೋಲು, ಪಂಜು, ಇಲಾಲುಗಳು, ವಾದ್ಯಗಳು, ಲಘು ರಥೋತ್ಸವಕ್ಕೆ ಮೆರಗುತಂದುಕೊಟ್ಟವು.ಭಕ್ತಾಧಿಗಳು ಉತ್ತತಿಯನ್ನುಎಸೆದು ಭಕ್ತಿ-ಭಾವ ಮೆರೆದರು.
ದೇವಿಗೆ ಉಡಿ ತುಂಬುವಕಾರ್ಯಕ್ರಮ
ದಿನಾಂಕ ೧೪-೦೧-೨೦೨೫ ಮಂಗಳವಾರ ಸಂಜೆ ೫.೦೦ ಘಂಟೆಗೆಕೈಲಾಸಮಂಟಪದಲ್ಲಿರುವಅನ್ನಪೂರ್ಣೇಶ್ವರಿಗುಡಿದೇವಿಗೆ ಉಡಿ ತುಂಬುವಕಾರ್ಯಕ್ರಮಜರುಗಿತು. ಶ್ರೀ ಗವಿಮಠದಜಾತ್ರೆಯ ಅಂಗವಾಗಿ ಜಾತ್ರೆಯ ಮುನ್ನ ಪ್ರತಿವರ್ಷ ಶ್ರೀ ಅನ್ನಪೂರ್ಣೇಶ್ವರಿದೇವಿಗೆಉಡಿತುಂಬುವಕಾರ್ಯಕ್ರಮವುಸಾಯಂಕಾಲ ಜರುಗಿತು.ಈ ಕಾರ್ಯಕ್ರಮದಲ್ಲಿ ಗವಿಮಠದ ಬೆಟ್ಟದ ಮೇಲಿರುವ ಶ್ರೀ ಅನ್ನಪೂರ್ಣೆಶ್ವರಿದೇವಿಗೆಉಡಿತುಂಬುವಕಾರ್ಯದಲ್ಲಿಎಲ್ಲತಾಯಂದಿರು ಸಕ್ರೀಯವಾಗಿ ಭಾಗವಹಿಸಿದರು.ಶ್ರೀ ಅನ್ನಪೂರ್ಣೆಶ್ವರಿದೇವಿಗೆ ಬಾಳೆಕಂಬ, ತೆಂಗಿನಗರಿ, ಕಬ್ಬಿನ ಹಂದರ ಹಾಕಿರುತ್ತಾರು. ಹೋಳಿಗೆ ಸಜ್ಜಕದ ನೈವೇದ್ಯವಾಗುತ್ತದೆ. ಆಗಮಿಸಿದ ಎಲ್ಲತಾಯಂದಿರಿಗೂ ಮಂಗಳಕರವಾದ ಬಾಗೀನ ಕೊಡುವ ಮೂಲಕ ಉಡಿತುಂಬುವಕಾಯಕವನ್ನು ಪರಸ್ಪರರು ನಡೆಸಿಕೊಂಡರು.ಅಷ್ಟೊತ್ತಿಗೆ ಪೂಜ್ಯ ಶಿವಯೋಗಿಗಳವರ ಲಿಂಗ ಪಾದೋದಕ ಬರುವುದು.ಅದನ್ನು ಸಿಂಪಡಿಸಿದ ನಂತರಅನ್ನ ಸಂತರ್ಪಣೆ ನಡೆಯಿತು. ಕೊಪ್ಪಳ ಹಾಗೂ ಸುತ್ತಲಿನ ಸಹಸ್ರಾರು ಮಹಿಳೆಯರು ಇದರಲ್ಲಿ ಭಾಗವಹಿಸಿದರು..
ಉದ್ದೇಶ:ಶ್ರೀ ಅನ್ನಪೂರ್ಣೇಶ್ವರಿಗೆ ಹಾಗೂ ಎಲ್ಲತಾಯಂದಿರಿಗೂಉಡಿತುಂಬುವ ಮೂಲಕ ಜಾತ್ರೆಯಎಲ್ಲ ಕಾರ್ಯಕ್ರಮಗಳು ಸುಸೂತ್ರವಾಗಿ, ಮಂಗಳಕರವಾಗಿ ಸಾಗಬೇಕೆಂಬುದು ಈ ಕಾರ್ಯಕ್ರಮದಉದ್ದೇಶ. ಇದರಜೊತೆಗೆತಮ್ಮತಮ್ಮ ಇಷ್ಟಾರ್ಥಗಳ ಶೀಘ್ರ ಈಡೇರಿಕೆಗಾಗಿ, ಕುಟುಂಬದಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ ಎಂಬ ಸಂಕಲ್ಪದೊಂದಿಗೆತಾಯಂದಿರುಅನ್ನಪೂರ್ಣೇಶ್ವರಿದೇವಿಗೆಉಡಿತುಂಬುವ ಈ ಮೂಲಕ  ಹರಕೆ ಮಾಡಿಕೊಳ್ಳುತ್ತಾರೆ. ಈ ಕಾರ್ಯಕ್ರಮದಲ್ಲಿ ಮಹೇಶ್ವರದೇವಸ್ಥಾನದ ಅಕ್ಕನ ಬಳಗದವರು, ಪ್ಯಾಟಿಈಶ್ವರದೇವಸ್ಥಾನದ ಅಕ್ಕನ ಬಳಗದವರು ಹಾಗೂ ಕೊಪ್ಪಳದ ಸಮಸ್ತ ತಾಯಂದಿರು ಭಾಗವಹಿಸುತ್ತಾರೆ.ಎಂದುಗವಿಮಠದ ಪ್ರಕಟಣೆ ತಿಳಿಸಿದೆ.
 ಸಂಸ್ಥಾನ ಶ್ರೀ ಗವಿಮಠದ ಗವಿಸಿದ್ಧೇಶ್ವರ ಸಂಗೀತ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಸಂಗೀತ
ಕಾರ್ಯಕ್ರಮ
ದಿನಾಂಕ ೧೪.೦೧.೨೦೨೫, ಮಂಗಳವಾರ, ಸಾಯಂಕಾಲ ೬.೦೦ ಗಂಟೆಗೆ ಶ್ರೀ ಗವಿಸಿದ್ದೇಶ್ವರ ಸಂಗೀತ ವಿದ್ಯಾಪೀಠ ವಿದ್ಯಾರ್ಥಿಗಳಿಂದ ಕೈಲಾಸ ಮಂಟಪದಲ್ಲಿ ಸಂಗೀತಕಾರ್ಯಕ್ರಮಜರುಗಲಿದೆ.ಈಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹೂವಿನಹಡಗಲಿಯ ಶ್ರೀ ಮ.ನಿ.ಪ್ರ. ಡಾಕ್ಟರ|| ಹಿರಿಶಾಂತವೀರ ಮಹಾಸ್ವಾಮಿಗಳು, ಶ್ರೀ ಷ.ಬ್ರ. ೧೦೮ ಶ್ರೀ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು. ಕುಕುನೂರಿನ ಶ್ರೀ ಷ.ಬ್ರ. ಶ್ರೀ ಚನ್ನಮಲ್ಲ ಮಹಾಸ್ವಾಮಿಗಳು ಚಿಕ್ಕಮ್ಯಾಗೇರಿಯ ಶ್ರೀ ಷ.ಬ್ರ. ೧೦೮ ಶ್ರೀ ಗುರು ಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿಕೊಳ್ಳಲಿದ್ದಾರೆ
ಬೆಂಗಳೂರಿನ ಶ್ರೀದೇವಿ ಪಾಟೀಲ್, ಅರ್ಪಿತ ಮತ್ತುಅರ್ಚನಕುಂಬಾರ್‌ಗಂಗಾವತಿಯಅಭಿನಯ, ಬಳ್ಳಾರಿಯ ಭೂಮಿಕಜೆ.ಎಂ.ಶಿವಪುರದ ಲೇಖನಾ ಕಲ್ಗುಡಿ, ಹರಪನಹಳ್ಳಿಯ ಅಮೃತ, ಹಿರೇಸಿಂದೋಗಿಯ ಸುದೀಕ್ಷಾ ಯರಾಸಿ.ಹೊಗರನಾಳದ ಸುಕೃತಇವರಿಂದ ಭರತನಾಟ್ಯಕಾರ್ಯಕ್ರಮಜರುಗಲಿದೆ. ಹುಬ್ಬಳ್ಳಿಯ ಅವನೇಶ ನೀಲಗುಂದಇವರಿಂದಅಭಿನಯ, ಕೊಪ್ಪಳದ ವಿಎಂಪಿ ಇವರಿಂದ ಸುಗಮ ಸಂಗೀತ, ಸೊಲ್ಲಾಪುರದ ಶಿವಪೂಜಿ ಇವರಿಂದಗಾಯನಕಾರ್ಯಕ್ರಮಜರುಗಲಿವೆ. ಸುಗಮ ಸಂಗೀತಕಾರ್ಯಕ್ರಮಕ್ಕೆ ಸಮರ್ಥ್ ಮಂಗಳೂರು ಹಾಗೂ ವಿನಯ್ ಶಿರೂರಮಠ ಹಾರ್ಮೋನಿಯಂ, ಶ್ರೀನಿವಾಸ್ ಜೋಶಿ ಮಹಮ್ಮದ್‌ರಿಜ್ವಾನ್‌ಗಂಗಾವತಿತಬಲಾ, ಶ್ರೀ ಕೃ? ಸುರಮಾರ ತಾಳ ಸಾಥ್ ನೀಡಲಿದ್ದಾರೆ. ಭಾನುಪ್ರಿಯಕುಂಬಾರ್ ಮತು ಸನ್ನಿಧಿ ಮ್ಯಾಗಳ ಮಠ ನಿರೂಪಣೆ ಪುನೀತಕುಮಾರ್ ಕೆ ಸಾಯಿ ಸಮರ್ಥ್‌ಕಾರ್ಯಕ್ರಮ ನಿರ್ವಹಣೆ ಮಾಡುವರು.ಎಂದುಗವಿಮಠದ ಪ್ರಕಟಣೆ ತಿಳಿಸಿದೆ.

Get real time updates directly on you device, subscribe now.

Leave A Reply

Your email address will not be published.

error: Content is protected !!