ಬಸವ ಪಟಆರೋಹಣ: ಶ್ರೀ ಗವಿಮಠಜಾತ್ರೆಗೆ ವಿದ್ಯುಕ್ತವಾಗಿ ಚಾಲನೆ
ಕೊಪ್ಪಳ : ನಗರದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಸಂಜೆ ೫ಬಸವ ಪಟಆರೋಹಣಮೂಲಕಜಾತ್ರೆಯ ಸಕಲ ಕಾರ್ಯಕ್ರಮಗಳಿಗೆ ವಿದ್ಯುಕ್ತವಾಗಿ ಚಾಲನೆ ದೊರೆಯಿತುಇಂದು ಶ್ರೀಗವಿಮಠದ ಕರ್ತೃಗದ್ದುಗೆಯ ಮುಂಭಾಗದಲ್ಲಿ ’ಬಸವ ಪಟಆರೋಹಣ’ ಎಂಬ ಧಾರ್ಮಿಕಕಾರ್ಯಕ್ರಮವೂಜರುಗಿತು. ಭಕ್ತರೆಲ್ಲರೂಕೂಡಿಕೊಂಡುನಂದಿ, ಈಶ್ವರ, ಸೂರ್ಯ, ಚಂದ್ರ, ವರುಣ, ಪ್ರಣವ ಮಂತ್ರವಿರುವ ಬಸವಪಟಕ್ಕೆಭಕ್ತರುಪೂಜೆ ಸಲ್ಲಿಸಿ, ನೈವೇದ್ಯ ಮಾಡಿ ಆ ಬಳಿಕ ಅದನ್ನು ಶ್ರದ್ಧೆಯಿಂದಕೈಯಲ್ಲಿ ಹಿಡಿದು ಶ್ರೀ ಗವಿಮಠದಕರ್ತೃಗದ್ದುಗೆಯ ಸುತ್ತಐದು ಸಾರಿ ಪ್ರದಕ್ಷಿಣೆ ಹಾಕುತ್ತಾ ಗವಿಸಿದ್ಧೇಶ್ವರನ ಜಯಘೋ?ಗಳೊಂದಿಗೆ ಕರ್ತೃಗದ್ದುಗೆಯ ಮುಂಭಾಗದಎದುರಿಗಿರುವ ಶಿಲಾಸ್ತಂಭಕ್ಕೆ ಬಸವಪಟವನ್ನುಆರೋಹಣಗೊಳಿಸಿದರು.
ಬಸವಪಟಆರೋಹಣ ಮಾಡುವಉದ್ದೇಶ: ನಮ್ಮದು ಕೃಷಿ ಪ್ರಧಾನ ನಾಡು.ಆಕಾರಣಕ್ಕಾಗಿನಂದಿ, ಈಶ್ವರ, ಸೂರ್ಯ, ಚಂದ್ರ,ವರುಣ, ಪೃಕೃತಿ ಇವುಗಳಿಗೆ ಪೂಜೆ ಸಲ್ಲಿಸುವದು ನಮ್ಮ ಪ್ರಥಮ ಕರ್ತವ್ಯವಾಗಿದೆ.ಶ್ರೀ ಗವಿಸಿದ್ಧನ ಸನ್ನಿಧಿಯ ಈ ನಾಡಿನಲ್ಲಿಸದಾಕಾಲ ಉತ್ತಮ ಮಳೆ, ಉತ್ತಮ ಬೆಳೆ ಬಂದುರೈತಾಪಿ ವರ್ಗಕ್ಕೆ ಸುಖ, ಶಾಂತಿ, ಸಮೃದ್ಧಿ ಸದಾದೊರೆಯಲೆಂಬ ಆಶಯಕ್ಕಾಗಿ’ಬಸವ ಪಟಆರೋಹಣ’ ಕಾರ್ಯಕ್ರಮವುಜರುಗುತ್ತದೆ.ಶ್ರೀಮಠದ ಜಾತ್ರಾ ಪರಂಪರೆಯಲ್ಲಿ ಬಸವ ಪಟಆರೋಹಣಕಾರ್ಯಕ್ರಮದ ಮೂಲಕವೇ ಜಾತ್ರೆಗೆ ವಿದ್ಯುಕ್ತವಾಗಿ ಚಾಲನೆ ಸಿಕ್ಕಂತಾಗುತ್ತದೆ.
ಶ್ರೀಗವಿಸಿದ್ಧೇಶ್ವರ ಗದ್ದುಗೆಯ ಮೇಲೆ ಶೋಭಾಯಮಾನವಾದ ಪಂಚಕಳಸಗಳು
ಶನಿವಾರ ಸಂಜೆ ೫ ಗಂಟೆಗೆಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಗವಿಸಿದ್ಧೇಶ್ವರ ಗದ್ದುಗೆಯ ಮೇಲೆ ಪಂಚಕಳಸಗಳು ಶೋಭಾಯಮಾನವಾದವು. ಸಾಮಾನ್ಯವಾಗಿಎಲ್ಲ ಮಠಮಾನ್ಯಗಳಿಗೆ ಒಂದೇ ಕಳಸವಿರುತ್ತದೆ. ಆದರೆ ಕೊಪ್ಪಳದ ಶ್ರೀಗವಿಮಠದ ಕರ್ತೃ ಶ್ರೀಗವಿಸಿದ್ಧೇಶ್ವರ ಗದ್ದುಗೆಯ ಮೇಲೆ ಐದು ಕಳಸಗಳು ಶೋಭಾಯಮಾನವಾಗಿರುತ್ತವೆ. ರಥೋತ್ಸವದ ದಿವಸಗಳು ಸಮೀಪಿಸುತ್ತಿರುವಾಗ ಈ ಐದು ಕಳಸಗಳನ್ನು ಒಂದು ವಾರದ ಮೊದಲೇ ಕೆಳಗೆ ಇಳಿಸಿಕೊಂಡು ಆಯಾಓಣಿಯದೈವದವರುಕೊಂಡೊಯ್ಯುತ್ತಾರೆ.
ನಂತರ ಆವುಗಳನ್ನು ತೊಳೆದು ತಿಕ್ಕಿ ಸ್ವಚ್ಚಗೊಳಿಸಿ ಶೃಂಗಾರಗೊಳಿಸಿ ಶ್ರೀಗವಿಮಠಕ್ಕೆ ಶ್ರಧ್ದಾ ಭಕ್ತಿಯಿಂದ ಭಜನೆ, ಡೋಲು, ಭಕ್ತಿ ಭಾವದಿಂದ ಶ್ರೀಮಠಕ್ಕೆ ತರುತ್ತಾರೆ. ಈ ಪಂಚಕಳಸಗಳನ್ನು ಆಯಾಓಣಿಯದೈವದವರು ಶ್ರೀ ಗವಿಮಠಕ್ಕೆತಂದು ಏರಿಸಿ ಪೂಜೆ ಮಾಡಿಸಿ ಪ್ರಸಾದ ಪಡೆದು ಮರಳುತ್ತಾರೆ. ಇದು ಪ್ರತಿವರ್ಷದ ಸಂಪ್ರದಾಯ ಹಾಗೂ ಪದ್ಧತಿ. ಭಕ್ತರು ಶ್ರೀಗವಿಮಠದ ಗೋಪುರಕ್ಕೆ ಏರಿಸಿದ ಐದು ಕಳಸಗಳನ್ನು ನೋಡಿ ಪುಳಕಿತರಾಗುತ್ತಾರೆ.
ಜಂಗಮಾರಾಧನೆ:
ಶ್ರೀ ಗವಿಸಿದ್ಧೇಶ್ವರ ಜತ್ರಾ ಮಹೋತ್ಸವದ ನಿಮಿತ್ಯ ಶ್ರೀಮಠದಲ್ಲಿ ಅನೇಕ ಧಾರ್ಮಿಕ ವಿಧಿ ವಿಧಾನಗಳ ಕಾರ್ಯಗಳು ಜರುಗುತ್ತವೆ.ಪಂಚ ಕಳಸಗಳ ಕಳಸಾರೋಹಣ ನಂತರಇದೇಉರಿನಎಲ್ಲಜಂಗಮಪುಂಗವರಿಗೆ ಭೂರಿ ಭೋಜನ ಪ್ರಸಾದ, ಜಂಗಮರಾಧನೆಕಾರ್ಯ ಅನೂಚಾನವಾಗಿ ನಡೆದು ಬಂದಿದೆ. ಪ್ರಸಾದದತರುವಾಯದಕ್ಷಿಣೆ ಹಾಗೂ ತಾಂಬೂಲಾಧಿಗಳನ್ನು ನೀಡಿಜಂಗಮ ಯೋಗಿಗಳ ಸಮಾರಾಧನೆಯು ಸಾಯಂಕಾಲ ನೆರವೇರಿತು.