ಕೃಷಿ ಪತ್ತಿನ ಸಹಕಾರ ಚುನಾವಣೆ : ಹುಲಿಗಿಯಲ್ಲಿ ಬಿಜೆಪಿ ಮೇಲುಗೈ

Get real time updates directly on you device, subscribe now.

ಒಂದು ಮತದಿಂದ ಗೆದ್ದ ಕಮಲ ಪಡೆ

ಕೊಪ್ಪಳ: ತೀವ್ರ ಕೂತೂಹಲ ಕೆರಳಿಸಿದ್ದಲ್ಲದೇ ಹಿಟ್ನಾಳ್ ಕುಟುಂಬಕ್ಕೆ ಪ್ರತಿಷ್ಠೆಯಾಗಿದ್ದ ತಾಲೂಕಿನ ಹುಲಿಗಿ ಗ್ರಾಮದ ಕೃಷಿ ಪ್ರಾಥಮಿಕ ಸಹಕಾರ ಸಂಘದಲ್ಲಿ ಒಂದು ಮತಗಳ ಅಂತರದಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ.
ಹೌದು, ಜಿದ್ದಾಜಿದ್ದಿ ಹಾಗೂ ಹಲವು ನಾಟಕೀಯ ಪ್ರಹಸನಗಳಿಗೆ ಸಾಕ್ಷಿಯಾಗಿದ್ದ ಕೃಷಿ ಪತ್ತಿನ ಸಹಕಾರ ಚುನಾವಣೆಯಲ್ಲಿ ಕೊನೆಗೂ ಬಿಜೆಪಿ ಬೆಂಬಲಿತ ಸದಸ್ಯರು ಅಧ್ಯಕ್ಷ, ಉಪಾಧ್ಯಕ್ಷರಾಗಿ ಹೊರ ಹೊಮ್ಮಿದ್ದಾರೆ.

ಇದರಲ್ಲಿ ಬಿಜೆಪಿಯ ಪ್ರಭುರಾಜ್ ಪಾಟೀಲ್ ಬಣದ ವೆಂಕಟೇಶ.ಬಿ 7 ಮತ‌ ಪಡೆದು ಅಧ್ಯಕ್ಷರಾಗಿ ಒಂದು ಮತಗಳಿಂದ ಆಯ್ಕೆಯಾದರು.
ಕಾಂಗ್ರೆಸ್ ನ ಪಾಲಾಕ್ಷಪ್ಪ ಗುಂಗಾಡಿ ಬಣದ ಧರ್ಮರಾಜ್ ರಾವ್ ಅವರು 6 ಮತ ಪಡೆದು ಪರಾಜಿತರಾದರು.
ವಿನಯಕುಮಾರ ಜೈನ್ ಅವರನ್ನು ಉಪಾಧ್ಯಕ್ಷರಾಗಿ ಅವಿರೋಧವವಾಗಿ ಆಯ್ಕೆ ಮಾಡಲಾಯಿತು.

ಕೃಷಿ ಪತ್ತಿನ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದ ಮಾಜಿ ಶಾಸಕ ಬಸವರಾಜ ಹಿಟ್ನಾಳ್ ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಅಧ್ಯಕ್ಷ, ಉಪಾಧ್ಯಕ್ಷ ಗಾದಿಯಲ್ಲಿ ಕುಳ್ಳಿರಿಸಲು ತೀವ್ರ ಪ್ರಯತ್ನ ಪಟ್ಟರು.
ಆದರೆ, ಈ ಭಾಗದ ಮುಖಂಡ ಪ್ರಭುಗೌಡ ಪಾಟೀಲ್ ಸೇರಿ ಇನ್ನಿತರ ಮುಖಂಡರ ನಿರಂತರ ಪ್ರಯತ್ನದಿಂದ ಹುಲಿಗಿ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಕಮಲ‌ ಪಡೆ ಗೆದ್ದು ಬಿಗಿದೆ.
ಚುನಾವಣೆಯಲ್ಲಿ ಬಿಜೆಪಿ ಜಯ ಬೇರಿ ಬಾರಿಸಿದ್ದಕ್ಕೆ ಕಾರ್ಯಕರ್ತರು ಸಂಭ್ರಮ ಮನೆ ಮಾಡಿದೆ.
ಹುಲಿಗಿಯ ಕೃಷಿ ಪತ್ತಿನ ಸಹಕಾರಿ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದ್ದಕ್ಕೆ ರಾಜ್ಯ ಕಾರ್ಯಕಾರಿಣಿ ಸದಸ್ಯ, ವೈದ್ಯರಾಗಿರುವ ಬಸವರಾಜ ಕ್ಯಾವಟರ್, ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ್, ವಿಪ ಸದಸ್ಯೆ ಹೇಮಲತಾ ನಾಯಕ ಸಂತಸ ವ್ಯಕ್ತಪಡಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!