ಸರ್ಕಾರಿ ಕಾರ್ಯಕ್ರಮವೋ, ಕಾಂಗ್ರೆಸ್ ಕಾರ್ಯಕ್ರಮವೋ
ಕೊಪ್ಪಳ: ನಗರ ಸಮೀಪದ ಭಾಗ್ಯನಗರದ ನಗರೋತ್ಥಾನ ೪ನೇ ಹಂತದ ಕಾಮಗಾರಿಗಳಿಗೆ ಅಡಿಗಲ್ಲು ಕಾರ್ಯಕ್ರಮವು ಸರ್ಕಾರದ ಕಾರ್ಯಕ್ರಮವೋ, ಕಾಂಗ್ರೆಸ್ ಕಾರ್ಯಕ್ರಮವೋ ಎಂಬ ಸಂಶಯ ಉಂಟಾಯಿತು ಎಂದು ಭಾಗ್ಯನಗರ ಪಟ್ಟಣ ಪಂಚಾಯಿತಿಯ ಬಿಜೆಪಿ ಸದಸ್ಯರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲಾಡಳಿತ, ಪೌರಾಡಳಿತ್ , ನಗರಾಭಿವೃದ್ಧಿ ಕೋಶ, ಪಟ್ಟಣ ಪಂಚಾಯಿತಿದ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ವೇದಿಕೆಯ ಮೇಲೆ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಭಾಗವಹಿಸಿದ್ದರು. ಈ ಮೂಲಕ ಶಿಷ್ಟಾಚಾರ ಉಲ್ಲಂಘನೆ ಮಾಡಲಾಗಿದೆ. ಅಲ್ಲದೇ ಪಟ್ಟಣ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಮಾತನಾಡಲಿಲ್ಲ. ಕಾರ್ಯಕ್ರಮದ ನಿರೂಪಣೆಯನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಮಾಡಿದರು ಇದರಿಂದಾಗಿ ಸರ್ಕಾರಿ ಕಾರ್ಯಕ್ರಮವೋ ಅಥವಾ ಕಾಂಗ್ರೆಸ್ ಕಾರ್ಯಕ್ರಮವೋ ಎಂಬುದು ಅರ್ಥವಾಗಲಿಲ್ಲ ಎಂದು ತಿಳಿಸಿದ್ದಾರೆ.