ವಿಕಲಚೇತನರು ಸಕಲಚೇತನರಕಡೆ ಸಾಗಲು ಜಾಗೃತಿಜಾಥಾ ಮಹತ್ವದ ಹೆಜ್ಜೆ – ಜಿಲ್ಲಾಧಿಕಾರಿ ನಳಿನ್ ಅತುಲ್

0

Get real time updates directly on you device, subscribe now.

.ಸಂಸ್ಥಾನ ಶ್ರೀ ಗವಿಮಠ ಆಯೋಜಿಸಿರುವ ಸಕಲಚೇತನ ವಿಕಲಚೇತನರ ನಡೆ, ಸಕಲಚೇತನದಕಡೆಜಾಗೃತಿಅಭಿಯಾನ ಬಹಳ ಅಗತ್ಯ ಅನುಕೂಲವಾಗಿದೆ.ಇಲಾಖೆಯಿಂದ ವ?ದಲ್ಲಿಎರಡು ಬಾರಿತಪಾಸಣೆಯನ್ನುಮಾಡಲಾಗುತ್ತಿತ್ತು. ಪ್ರತಿಪ್ರತಿವ?ದತಪಾಸಣೆಗೆವಿವಿಧಸಂಪನ್ಮೂಲದಕೊರತೆಆಗುತ್ತಿತ್ತುಆದರೆ ಈ ವ?ದಿಂದ ಈ ಕೊರತೆಯನ್ನು ಸಂಸ್ಥಾನ ಶ್ರೀ ಗವಿಮಠ ಹಾಗೂ ಹುಬ್ಬಳ್ಳಿಯ ಮಹಾವೀರ ಲಿಂಬ್ ಸೆಂಟರ್‌ನೀಗಿಸಿವೆಎಂದು ಕೊಪ್ಪಳ ಜಿಲ್ಲಾಧಿಕಾರಿ ನಳಿನ್ ಅತುಲ್‌ಅವರುಅಭಿಪ್ರಾಯ ಪಟ್ಟರು.

ಕೊಪ್ಪಳ ಗವಿಮಠ ಪ್ರತಿ ವ? ಮಹಾ ಜಾತ್ರೋತ್ಸವದ ನಿಮಿತ್ಯಆಯೋಜಿಸುವ ಈ ವ?ದಜಾಗೃತಿಜಾಥಾ’ಸಕಲಚೇತನನ’ ’ವಿಕಲಚೇತನನ ನಡೆ ’ಸಕಲಚೇತನ’ದಕಡೆ ಎಂಬ ಘೋ?ವಾಕ್ಯದೊಂದಿಗೆ ದಿನಾಂಕ ೧೧.೦೧.೨೦೨೫ ಬೆಳಗ್ಗೆ ೮:೦೦ಕ್ಕೆ ಆಯೋಜಿಸಿದ ಜಾಗೃತಿಜಾಥಾಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದವರು. ಈ ಮಹತ್ವದಜಾಗೃತಿಯಿಂದ ವಿಕಲಚೇತನರು ಸಕಲಚೇತನರಕಡೆ ಸಾಗಲು ಮಹತ್ವದ ಹೆಜ್ಜೆಯಾಗಿದೆ. ಶ್ರೀಮಠವುಇಂತಹ ವಿಶೇ?ಸಾಮಾಜಿಕಜಾಗೃತಿಜಾಥಾ ಕಾರ್ಯಕ್ರಮಗಳನ್ನುಪ್ರತಿ ವರ್ಷ ನಡೆಸುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆಎಂದರು.

ನಂತರ ಕೊಪ್ಪಳ ತಾಲೂಕು ಶಾಸಕರಾದರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ ಈ ಈಜಾಗೃತಿಜಾಥಾಕಾರ್ಯಕ್ರಮಅಭಿಮಾನ ಪಡುವಂತಹದುದೇವರುಎಲ್ಲಿದ್ದಾನೆಎಂದರೆ ವಿಕಲಚೇತನರಿಗೆಚೇತನತುಂಬುವ ಕೆಲಸ ಮಾಡುತ್ತಿರುವ ಶ್ರೀ ಅಭಿನವ ಗವಿಸಿದ್ದೇಶ್ವರ ಶ್ರೀಗಳಲ್ಲಿ ಇದ್ದಾನೆ.ತ್ರಿವಿಧದಾಸೋಹಜೊತೆಗೆಇಂತಹ ಮಹತ್ವದ ಸೇವೆ ಮಾಡುತ್ತಿರುವ ಸಂದರ್ಭದಲ್ಲಿ ಶ್ರೀಮಠದ ಜೊತೆ ನಾವು ಸದಾಇರುತ್ತೇವೆಎಂದು ಹೇಳಿದರು.ನಂತರ ಜಿಲ್ಲಾಧಿಕಾರಿಗಳು ಹಸಿರು ಬಾವುಟತೋರಿಸುವ ಮೂಲಕ ಜಾಗೃತಿಜಾಥಾಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಾರ್ವಜನಿಕ ಮೈದಾನದಿಂದಆರಂಭಗೊಂಡ ಈ ಜಾಗೃತಿಜಾಥಾವು ಅಶೋಕ ವೃತ್ತಗಡಿಯಾರಕಂಬದ ಮೂಲಕ ಶ್ರೀ ಗವಿಮಠಕ್ಕೆತಲುಪಿತು. ಅಪರ ಜಿಲ್ಲಾಧಿಕಾರಿಗಳಾದ ಸಿದ್ದರಾಮೇಶ್ವರ, ಜಿ.ಪಂ.ಮುಖ್ಯಕಾರ್ಯನಿರ್ವಹಣಾ ಅಧಿಕಾರಿಗಳಾದ ರಾಹುಲ್‌ರತ್ನಂ ಪಾಂಡೆ, ಜಿಲ್ಲಾ ಪೊಲೀಸ್ ವರಿ? ಅಧಿಕಾರಿಗಳಾದ ಡಾಕ್ಟರ್.ರಾಮ್.ಎಲ್.ಅರಸಿದ್ದಿ,ಉಪವಿಭಾಗಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ್ ಮಾಲಗತ್ತಿ, ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ವಿಭಾಗದ ಉಪ ನಿರ್ದೇಶಕರಾದಜಗದೀಶ್ ಜಿ.ಹೆಚ್,ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗಳಾದ ಮಲ್ಲಪ್ಪತೊದಲಬಾಗಿ,ಉಪ ಪೊಲೀಸ್ ವರಿ?ಧಿಕಾರಿಗಳಾದ ಮುತ್ತಣ್ಣ.ಪಿ.ಸವರಗೋಳ, ಭಾರತೀಯರೆಡ್‌ಕ್ರಾಸ್ ಸಂಸ್ಥೆಯಚೇರಮನ್ ವಿಜಯಕುಮಾರ ಪಾಟೀಲ, ಹುಬ್ಬಳ್ಳಿಯ ಮಹಾವೀರ ಲಿಂಬ್ ಸೆಂಟರ್‌ನ ಮಹೇಂದ್ರ ಸಿಂಘ್ವಿ, ಶಾಲಾಶಿಕ್ಷಣ ಮತ್ತು ಸಾಕ್ಷರತಾಇಲಾಖೆಯಕ್ಷೇತ್ರ ಶೀಕ್ಷಣಾಧಿಕಾಗಳಾದ ಶಂಕ್ರಯ್ಯಟಿ.ಎಸ್. ವಿವಿಧ ಇಲಾಖೆಗಳ,ಶಾಲಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಶಿಕ್ಷಕರು ಸಾವಿರಾರು ವಿದ್ಯಾರ್ಥಿಗಳುಜಾಥಾದಲ್ಲಿ ಭಾಗವಹಿಸಿದ್ದರು.

 

 

Get real time updates directly on you device, subscribe now.

Leave A Reply

Your email address will not be published.

error: Content is protected !!