ವಿಕಲಚೇತನರಿಗೆ ಸಮಾಜ ನೋಡುವ ದುಷ್ಠಿಕೋನ ಬದಲಾಗಬೇಕು: ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮಿಜಿ

0

Get real time updates directly on you device, subscribe now.

ಯಾರಿಗೆ ಕಣ್ಣಿಲ್ಲ, ಕಿವಿ, ಕಾಲು ಮತ್ತು ಕೈಯಿಲ್ಲದಂತಹ ವಿಕಲಚೇತನರಿಗೆ ಸಮಾಜವು ನೋಡುವ ದುಷ್ಠಿಕೋನ ಬದಲಾಗಬೇಕು ಎಂದು ಕೊಪ್ಪಳ ಶ್ರೀ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮಿಜಿಗಳು ಹೇಳಿದರು.
ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಗವಿಮಠ, ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳು ಮತ್ತು ಹಲವಾರು ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಶನಿವಾರ ಕೊಪ್ಪಳ ನಗರದಲ್ಲಿ ಏರ್ಪಡಿಸಲಾಗಿದ್ದ “ವಿಕಲ ಚೇತನನ ನಡೆ ಸಕಲ ಚೇತನದ ಕಡೆ” ಎಂಬ ಕೃತಕ ಅಂಗಾಂಗ ಜೋಡಣೆ ಬೃಹತ್ ಜಾಗೃತಿ ನಡಿಗೆ ಕಾರ್ಯಕ್ರಮದ ನಂತರ ಗವಿಮಠ ಆವರಣದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಶ್ರೀಗಳು ಮಾತನಾಡಿದರು.
ಯಾವುದೋ ಒಂದು ಅಪಘಾತ, ಪೂರ್ವಜನ್ಮದ ಕೃತವೂ ಕೆಲವರಲ್ಲಿ ಕೈ, ಕಾಲು, ಕಣ್ಣು, ಕಿವಿ ಹೀಗೆ ಏನೋ ನ್ಯೂನತೆಯಾಗಿರುತ್ತದೆ. ಮೊದಲು ಅವರಿಗೆ ಆತ್ಮಸ್ಥೈರ್ಯತೆಬೇಕು. ಇದರ ಜೊತೆಗೆ ಪ್ರೀತಿ, ಸಹನಾಭೂತಿಯೂ ಅತ್ಯವಶ್ಯಕವಾಗಿದೆ. ಪ್ರತಿ ವರ್ಷ ನಡೆಯುವ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವವು ಕೇವಲ ರಥೋತ್ಸವವಾಗಿ ನಡೆಯದೇ ಸಮಾಜಿಕ ಸಂದೇಶಗಳನ್ನು ಸಾರುತ್ತದೆ. ಇಂತಹ ಸಮಾಜಿಕ ಸಂದೇಶಗಳು ಕೆವಲ ಜಾಗೃತಿ ಅಭಿಯಾನಕ್ಕೆ ಮಾತ್ರ ಸೀಮಿತವಾಗದೇ ಕಾರ್ಯಗತವಾಗಬೇಕು ಎಂದರು.
ಈ ವರ್ಷ `ವಿಕಲಚೇತನರ ನಡೆ ಸಕಲಚೇತನದ ಕಡೆ’ ಎಂಬ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಮಕ್ಕಳಲ್ಲಿ ಸಹನಾಭೂತಿ, ವಿಕಲಚೇತನರ ಬಗ್ಗೆ ಪ್ರೇಮ ಬೆಳಸಿಕೊಳ್ಳುವುದಕ್ಕಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಜಾತ್ರೆಯಲ್ಲಿ ಕೃತಕ ಕೈ-ಕಾಲುಗಳಿಗಾಗಿ ಎಷ್ಟು ಜನ ನೋಂದಾಯಿಸಿಕೊಳ್ಳುತ್ತಾರೆ, ಅವರೆಲ್ಲರಿಗೂ ಉಚಿತವಾಗಿ ಕೃತಕ ಕೈ-ಕಾಲುಗಳ ಜೋಡಣೆ ಮಾಡಲಾಗುವುದು. ಶ್ರವಣ ನ್ಯೂನತೆಯುಳ್ಳ ವಿದ್ಯಾರ್ಥಿಗಳಿಗೆ ಶ್ರವಣ ಸಾಧನಗಳ ವಿತರಣೆ ಮಾಡಲಾಗುತ್ತಿದೆ. ಈ ಮಹತ್ತರ ಕಾರ್ಯಕ್ಕಾಗಿ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ, ಶ್ರೀ ಮಹಾವೀರ ಲಿಂಬ್ ಸಂಸ್ಥೆ, ರೆಡ್ ಕ್ರಾಸ್ ಸಂಸ್ಥೆಗಳು ಸಹಕಾರ ನೀಡಿವೆ. ಇವುಗಳ ಜೊತೆಗೆ ಕೈಜೊಡಿಸಲು ಹಲವಾರು ದಾನಿಗಳು ಸಹ ಮುಂದೆ ಬಂದಿದ್ದಾರೆ ಎಂದು ಹೇಳಿದರು.
ಕೈ, ಕಾಲು ಇಲ್ಲದವರಿಗೆ ಕೃತಕ ಕೈ, ಕಾಲು ಜೋಡಿಸುವುದು ಮಹತ್ತರವಾದ ಕಾರ್ಯವಾಗಿದೆ. ಅಜ್ಜನ ಜಾತ್ರೆಯ ರಥ ಸಾಗುವುದಕ್ಕಿಂತ ಮುಂಚೆ ಈ ಅಬಿಯಾನದಲ್ಲಿ ಇಂದು ಸಾವಿರಾರೂ ಸಂಖ್ಯೆಯಲ್ಲಿ ಪಾಲ್ಗೊಂಡ ಮಕ್ಕಳ ಹೆಜ್ಜೆಯ ಗುರುತುಗಳು ಎಲ್ಲರಿಗೂ ದಿಕ್ಸೂಚಿಯಾಗಲಿ. ಮುಂದಿನ ವರ್ಷ ಯಾವ ವಿಷಯದ ಬಗ್ಗೆ ಜಾಥಾ ಮತ್ತು ಕೆಲಸ ಮಾಡಬೇಕು ಎಂಬುವುದನ್ನು ವಿದ್ಯಾರ್ಥಿಗಳೇ ಸಲಹೆ ನೀಡಬೇಕು. ಆಯ್ಕೆಯಾಗುವ ವಿಷಯವನ್ನು ತಿಳಿಸಿದ ವಿದ್ಯಾರ್ಥಿಯಿಂದಲೇ ಮುಂದಿನ ವರ್ಷದ ಜಾಥಾ ಕಾರ್ಯಕ್ರಮ ಉದ್ಘಾಟಿಸಲಾಗುವುದು ಎಂದು ಶ್ರೀಗಳು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
*ಬಹುಮಾನ ವಿತರಣೆ:* ಈ ಜಾಗೃತಿ ಅಭಿಯಾನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಗದೀಶ್, ಕೊಪ್ಪಳ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಎಸ್ ಶಂಕ್ರಯ್ಯ, ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕರಾದ ಪುಷ್ಪಾವತಿ, ಹುಬ್ಬಳ್ಳಿಯ ಶ್ರೀ ಮಹಾವೀರ ಲಿಂಬ್ ಸಂಸ್ಥೆಯ ಮಹೇಂದ್ರ ಸಿಂಗ್ವಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಶಾಖೆಯ ಚೇರಮನ್ ವಿಜಯಕುಮಾರ ಹಾಗೂ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!