ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ: ಡಾ. ಬಸವರಾಜ್ ಕ್ಯಾವಟರ್

0

Get real time updates directly on you device, subscribe now.

Koppal  ಕೊಪ್ಪಳ ನಗರದ ಕಿನ್ನಾಳ ರಸ್ತೆಯಲ್ಲಿರುವ ಅಂಡರ್ ಪಾಸ್ ರಸ್ತೆಯ ಗೋಡೆಗೆ ರಾಜ್ಯ ಸರ್ಕಾರದ ಆಡಳಿತದ ವೈಫಲ್ಯ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಪೋಸ್ಟರ್ ಗಳನ್ನು ಅಂಟಿಸಿ  ಬಿಜೆಪಿ ಪಕ್ಷದಿಂದ ಬೃಹತ್ ಪ್ರತಿಭಟನೆ ಮಾಡಲಾಯಿತು.

ರಾಜ್ಯ ಸರ್ಕಾರ ಆಡಳಿತ ಬಂದ ಎರಡು ವರ್ಷಗಳು ಗತಿಸಿದರು ರಾಜ್ಯದಲ್ಲಿ ಸೂಕ್ತ ಕಾನೂನು ವ್ಯವಸ್ಥೆ ಸಂಪೂರ್ಣ ಹದಿಗೆಟ್ಟಿದೆ ಮತ್ತು ಸಾರ್ವಜನಿಕ ವಲಯದಲ್ಲಿ ಬಹಳಷ್ಟು ಜನ ಸಾವಿಗೆ ತುತ್ತಾಗುತ್ತಿದ್ದಾರೆ, ನಿರಂತರವಾಗಿ ಅಧಿಕಾರಿ ವರ್ಗದವರು ಮತ್ತು ಆಡಳಿತದ ನಾಯಕರು ಒಡಗುಡಿ ಸರ್ಕಾರಿ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು ಇದಕ್ಕೆ ಕಡಿವಾಣ ಯಾವಾಗ ಎನ್ನುವುದು ಪ್ರಶ್ನೆಯಾಗಿದೆ.ಮಹಿಳೆಯರಿಗೆ ಸೂಕ್ತ ರಕ್ಷಣೆ ಇಲ್ಲದಂತಾಗಿದೆ, ಎಲ್ಲಿ ಅಂದರಲ್ಲಿ ದೌರ್ಜನ್ಯಗಳು, ರೋಹಿತಕರ ಘಟನೆಗಳು, ಯುವಕರ ಮಧ್ಯದಲ್ಲಿ ಬಡಿದಾಟಗಳು ಹೀಗೆ ನಿರಂತರವಾಗಿ ಒಂದಲ್ಲ ಒಂದು ರೀತಿಯಲ್ಲಿ ಘಟನೆಗಳು ನಡೆಯುತ್ತ ಇವೆ ಎಂದು ಬಸವರಾಜ್ ಕ್ಯಾವಟರ್ ಒತ್ತಾಯಿಸಿದರು.

ನವೀನ್ ಗುಳಗಣ್ಣನವರು ಮಾತನಾಡಿ ಇತ್ತೀಚಿಗೆ ಗುತ್ತಿಗೆದಾರ ಸಚಿನ್ ಎನ್ನುವರು ಸಾವಿಗಿಡಾಗಿದ್ದಾರೆ ಅದಕ್ಕೇ ನೇರವಾಗಿ ಪ್ರಿಯಾಂಕ ಖರ್ಗೆ ಅವರು ಕಾರಣರಾಗಿದ್ದಾರೆ. ಕೂಡಲೇ ರಾಜೀನಾಮೆ ಕೊಡಬೇಕು ಮತ್ತು ಬಿಜೆಪಿ ಮುಖಂಡರ ನೇತೃತ್ವದಲ್ಲಿ ಹೋರಾಟ ಮಾಡಿದರೆ ಮಾನ್ಯ ಪ್ರಿಯಾಂಕ ಖರ್ಗೆಯವರು ಈ ವಿಷಯವನ್ನು ಹಗುರವಾಗಿ ತೆಗೆದುಕೊಂಡು ಎಳೆನೀರು, ಕಾಫಿ, ತಿಂಡಿ ಕೊಡುತ್ತೇವೆಂದು ಹೋರಾಟಗಾರರ ಸ್ವಾಭಿಮಾನಕ್ಕೆ ಧಕ್ಕೆ ಬರುವ ರೀತಿಯಲ್ಲಿ ನಡೆದುಕೊಂಡಿದ್ದಾರೆ ಇದು ನಿಜಕ್ಕೂ ಖಂಡನೀಯವಾಗಿದೆ.
ಈ ಎಲ್ಲ ವಿಷಯಗಳನ್ನು ಇಟ್ಟುಕೊಂಡು ಭಾರತೀಯ ಜನತಾ ಪಾರ್ಟಿಯ ಎಸ್ ಸಿ ಮೋರ್ಚಾ ಮತ್ತು ಯುವ ಮೋರ್ಚಾ ಹಾಗೂ ಪಕ್ಷದ ಮುಖಂಡರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮಾಡಲಾಯಿತು ಈ ಪ್ರತಿಭಟನೆ ತಡೆದು ಪೊಲೀಸರು ಬಂಧಿಸಿ ನಗರದ ಹೊರವಲಯದಲ್ಲಿರುವ ಪೊಲೀಸ್ ಕ್ವಾಟ್ರಸ್ ನಲ್ಲಿ ಬಿಡುಗಡೆಗೊಳಿಸಿ ಕಳುಹಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಹೇಮಲತಾ ನಾಯಕ್,, ಸುನಿಲ್ ಹೆಸರೂರ್, ಎಸ್ಸಿ ಮೋರ್ಚಾದ ಜಿಲ್ಲಾಧ್ಯಕ್ಷರಾದ ಗಣೇಶ್ ಹೊರತಟ್ನಾಳ, ಯುವ ಮೋರ್ಚಾ ಜಿಲ್ಲಾಧ್ಯಕ್ಷರಾದ ಮೌನೇಶ್ ದಡೆಸುಗೂರ್, ನಗರಸಭಾ ಸದಸ್ಯರಾದ ಸೋಮಣ್ಣ ಹಳ್ಳಿ, ಡಿ ಮಲ್ಲಣ್ಣ, ಜಯಶ್ರೀ ಗೊಂಡಬಾಳ, ಶೋಭಾ ನಗರಿ, ಉಮೇಶ್ ಕರಡೇಕರ್, ಚನ್ನಬಸಪ್ಪ ಗಾಳಿ, ಅನೇಕ ಗಣ್ಯಮಾನ್ಯರು ಈ ಹೋರಾಟದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.

Get real time updates directly on you device, subscribe now.

Leave A Reply

Your email address will not be published.

error: Content is protected !!