ಪಂಡಿತ್ ಎಂ. ವೆಂಕಟೇಶ್‌ಕುಮಾರ್

0

Get real time updates directly on you device, subscribe now.

ಪಂಡಿತ್ ಎಂ. ವೆಂಕಟೇಶ್‌ಕುಮಾರ್ (ಜನನಜುಲೈ ೧, ೧೯೫೩) ಒಬ್ಬ ಭಾರತೀಯ ಹಿಂದೂಸ್ತಾನಿ ಗಾಯಕ. ಸ್ವಾಮಿ ಹರಿದಾಸ್ ಮತ್ತುಕನಕದಾಸರು ರಚಿಸಿದ ಭಕ್ತಿಗೀತೆಗಳ ನಿರೂಪಣೆಗಾಗಿಅವರು ಹೆಚ್ಚು ಹೆಸರುವಾಸಿಯಾಗಿದ್ದಾರೆ. ಕುಮಾರ್‌ಕಿರಾಣಾ ಮತ್ತುಗ್ವಾಲಿಯರ್‌ಘರಾನಾಗೆ
ಆರಂಭಿಕಜೀವನ ಮತ್ತು ಸಂಗೀತತರಬೇತಿ
ಕುಮಾರ್‌ಉತ್ತರಕರ್ನಾಟಕದ ಬಳ್ಳಾರಿ ಪ್ರದೇಶದ ಲಕ್ಷ್ಮೀಪುರದಲ್ಲಿ ಜನಿಸಿದರು.ಕುಮಾರ್ ಅವರತಂದೆ ಹುಲೆಪ್ಪಅವರುಜನಪದಜಾನಪದಗಾಯಕ ಮತ್ತುತೊಗಲುಗೊಂಬೆಯಾಟಗಾರರಾಗಿದ್ದರು. ೧೯೬೮ರಲ್ಲಿ, ಅವರು ೧೫ ವ? ವಯಸ್ಸಿನವರಾಗಿದ್ದಾಗ, ವೆಂಕಟೇಶ್‌ಅವರನ್ನುಅವರತಾಯಿಯ ಸಹೋದರ, ಮಾವ ನಾಡೋಜ ಬೆಳಗಲ್ಲು ವೀರಣ್ಣಅವರು ವೀರಶೈವ ಸಂತ ಮತ್ತು ಹಿಂದೂಸ್ತಾನಿ ಸಂಗೀತಗಾರ ಪುಟ್ಟರಾಜ ಗವಾಯಿಗಳು ನಡೆಸುತ್ತಿದ್ದಗದಗಿನ ವೀರೇಶ್ವರ ಪುಣ್ಯಾಶ್ರಮಕ್ಕೆಕರೆದೊಯ್ದರು. ಮುಂದಿನ ೧೨ ವ?ಗಳ ಕಾಲ, ಅವರುಆಶ್ರಮದಲ್ಲಿ ವಾಸಿಸುತ್ತಿದ್ದರು ಮತ್ತು ಗವಾಯಿ ಅವರಅಡಿಯಲ್ಲಿಗ್ವಾಲಿಯರ್ ಮತ್ತುಕಿರಣ ಶೈಲಿಗಳಲ್ಲಿ ಹಿಂದೂಸ್ತಾನಿ ಗಾಯನವನ್ನುಕಲಿತರು. ಕುಮಾರ್‌ತಮ್ಮ ಪ್ರಸ್ತುತಿಗಳಲ್ಲಿ ಈ ಶೈಲಿಗಳನ್ನು ಸಂಯೋಜಿಸುತ್ತಾರೆ, ಆದರೂಅವರು ಈ ಘರಾನಾಗಳನ್ನು ಮೀರಿ ಪ್ರಭಾವಗಳನ್ನು ಒಪ್ಪಿಕೊಂಡರು, ಅವುಗಳಲ್ಲಿ ಪ್ರಮುಖರು ಪಟಿಯಾಲಾಘರಾನಾದ ಬಡೇಗುಲಾಮ್ ಅಲಿ ಖಾನ್.ಅವರ ಗುರುಗಳು ಕರ್ನಾಟಕ ಸಂಗೀತದಲ್ಲಿಯೂತರಬೇತಿ ಪಡೆದಿದ್ದರು ಮತ್ತುಇದರ ಪರಿಣಾಮವಾಗಿ ಪಂಡಿತ್‌ಕುಮಾರ್‌ಅವರ ಸಂಗೀತದಲ್ಲಿ ವಿಶೇ?ವಾಗಿಅವರ ಸರಗಮ್ ಮಾದರಿಗಳಲ್ಲಿ ಕರ್ನಾಟಕ ಅಂಶಗಳ ಕುರುಹುಗಳಿವೆ.
ವೃತ್ತಿ
ಅವರುಆಶ್ರಮವನ್ನುತೊರೆದ ೧೪ ವ?ಗಳ ನಂತರ ೧೯೯೩ ರಲ್ಲಿ, ಪುಣೆಯಲ್ಲಿ ಸವಾಯಿ ಗಂಧರ್ವ ಸಂಗೀತ ಮಹೋತ್ಸವದಲ್ಲಿ ಪ್ರದರ್ಶನ ನೀಡಲು ಭೀಮಸೇನ್ ಜೋಶಿ ಅವರಿಂದಆಹ್ವಾನವನ್ನು ಸ್ವೀಕರಿಸಿದಾಗ ಕುಮಾರ್‌ಅವರಿಗೆ ಮೊದಲ ವಿರಾಮ ಸಿಕ್ಕಿತು.ಆದಾಗ್ಯೂ, ಅವರುರಾಷ್ಟ್ರೀಯಉತ್ಸವದ ಸರ್ಕ್ಯೂಟ್‌ನಲ್ಲಿ ನಿಯಮಿತರಾಗುವ ಮೊದಲುಅವರು ಸುಮಾರು ಹತ್ತು ವ?ಕಾಯಬೇಕಾಯಿತು. ಅಂದಿನಿಂದ, ಅವರು ಅನೇಕ ರಾಷ್ಟ್ರೀಯ ಸಂಗೀತ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ೧೯೮೮ ರಿಂದಆಕಾಶವಾಣಿಯ “ಎ ಟಾಪ್” ದರ್ಜೆಯ ಕಲಾವಿದರಾಗಿದ್ದಾರೆ.ಭಕ್ತಿ ಸಂಗೀತದಲ್ಲಿ, ಕುಮಾರ್‌ತಮ್ಮಕನ್ನಡ ವಚನ ಮತ್ತುದಾಸರ ಪದಗಾಯನಕ್ಕಾಗಿ ಹೆಚ್ಚು ಮೆಚ್ಚುಗೆ ಪಡೆದಿದ್ದಾರೆ.ಅವರು ಅನೇಕ ಭಕ್ತಿ ಮತ್ತು ಶಾಸ್ತ್ರೀಯ ಸಿಡಿ ಆಲ್ಬಂಗಳನ್ನು ರೆಕಾರ್ಡ್ ಮಾಡಿದ್ದಾರೆ.
ಬೋಧನೆ
ಗದಗ ಸಮೀಪದ ವಿಜಯ್ ಮಹಾಂತೇಶ ಕಲಾ ಕಾಲೇಜಿನಲ್ಲಿಅಧ್ಯಾಪಕ ವೃತ್ತಿ ಆರಂಭಿಸಿದ ಕುಮಾರ್‌ಅಲ್ಲಿಒಂದೂವರೆ ವ? ಬೋಧನೆ ಮಾಡಿದರು. ಉಡುಪಿಯ ಮುಕುಂದಕೃಪಾದಲ್ಲಿಯೂ ಪಾಠ ಮಾಡಿದ್ದಾರೆ.ಅವರುಗಂಧರ್ವ ಮಹಾವಿದ್ಯಾಲಯದಿಂದ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆದರು.ಕರ್ನಾಟಕ ಸರ್ಕಾರವು ನಡೆಸಿದ ಪರೀಕ್ಷೆಗೆ ಸೂಚಿಸಲಾದ ಸಂಗೀತದ ಪಠ್ಯಪುಸ್ತಕವನ್ನುಅವರು ರಚಿಸಿದ್ದಾರೆ.
ಕುಮಾರ್‌ಅವರುಧಾರವಾಡದಯೂನಿವರ್ಸಿಟಿ ಕಾಲೇಜ್‌ಆಫ್ ಮ್ಯೂಸಿಕ್‌ನಲ್ಲಿ ೩೩ ವ?ಗಳ ಕಾಲ ಕಲಿಸಿದರು. ಈ ಬದ್ಧತೆಯು ನಿಯಮಿತವಾಗಿಅವರಿಗೆ ಸಂಗೀತ ಕಚೇರಿಗಳನ್ನು ತಿರಸ್ಕರಿಸುವಅಗತ್ಯವಿತ್ತು, ಆದರೆ ಸಂಗೀತ ಕಚೇರಿಗಳು ಬರಲುಕ?ಕರವಾದ ಸಮಯದಲ್ಲಿಅವರಿಗೆ ಸ್ಥಿರತೆಯನ್ನು ನೀಡುವ ಕೆಲಸವನ್ನುತ್ಯಜಿಸಲುಅವರು ನಿರಾಕರಿಸಿದರು. ಅವರು ೨೦೧೫ ರಲ್ಲಿ ನಿವೃತ್ತರಾದರು.
ಪ್ರಶಸ್ತಿಗಳು
ಕುಮಾರ್‌ಅವರು ಸೇರಿದಂತೆ ಪ್ರಶಸ್ತಿಗಳು ಮತ್ತು ಬಿರುದುಗಳನ್ನು ಪಡೆದಿದ್ದಾರೆ:ಕರ್ನಾಟಕರಾಜ್ಯೋತ್ಸವ ಪ್ರಶಸ್ತಿ (೧೯೯೯)ಕರ್ನಾಟಕ ಸಂಗೀತ ನಾಟ್ಯಅಕಾಡೆಮಿ ಪ್ರಶಸ್ತಿ (೨೦೦೭),ವತ್ಸಲಾ ಭೀಮಸೇನ್ ಜೋಶಿ ಪ್ರಶಸ್ತಿ (೨೦೦೮),ಕೃ? ಹಂಗಲ್ ಪ್ರಶಸ್ತಿ (೨೦೦೯),ಸಂಗೀತ ನಾಟಕಅಕಾಡೆಮಿ ಪ್ರಶಸ್ತಿ (೨೦೧೨),ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದಗೌರವಡಾಕ್ಟರೇಟ್ (೨೦೧೪),ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ (೨೦೧೬),ಗಂಗೂಬಾಯಿ ಹಂಗಲ್‌ರಾಷ್ಟ್ರೀಯ ಪ್ರಶಸ್ತಿ (೨೦೧೭),ಮಧ್ಯಪ್ರದೇಶ ಸರ್ಕಾರದಿಂದ ಕಾಳಿದಾಸ್ ಸಮ್ಮಾನ್. (೨೦೧೭ ವ?ಕ್ಕೆ.೨೦೨೧ ರಲ್ಲಿ ಪ್ರಶಸ್ತಿ ನೀಡಲಾಗಿದೆ).ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ವಿಶ್ವವಿದ್ಯಾಲಯದ ಮಾನವ ಶ್ರೇ?ತೆಗಾಗಿಗೌರವಡಾಕ್ಟರೇಟ್ (೨೦೨೨).

ಚಿತ್ರ ನಿರ್ದೇಶಕ, ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್
ಚಿತ್ರ ನಿರ್ದೇಶಕ, ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್ ಬಹುಮುಖ ಪ್ರತಿಭೆ.ಕತೆಗಾರ, ಕಾದಂಬರಿಗಾರ ,ಅಂಕಣಕಾರ, ಅಧ್ಯಾಪಕ, ಸಂಘಟಕ, ಪ್ರಕಾಶಕ ಹೀಗೆ ಬಹುಮುಖ ವ್ಯಕ್ತಿತ್ವದಇವರುಕನ್ನಡ ಸಾಹಿತ್ಯ, ಕನ್ನಡ ಸಮಾಜ ಮತ್ತು ಸಿನಿಮಾ ಕ್ಷೇತ್ರಗಳಲ್ಲಿ ಒಂದು ಮುಖ್ಯ ಹೆಸರು.
ಜೀವನ
ಮಂಡ್ಯಜಿಲ್ಲೆಯ ನಾಗತಿಹಳ್ಳಿ ಎಂಬಲ್ಲಿ ಆಗಸ್ಟ್ ೧೫, ೧೯೫೮ರ ವ?ದಲ್ಲಿಚಂದ್ರಶೇಖರ್ ಜನಿಸಿದರು. ತಂದೆತಿಮ್ಮಶೆಟ್ಟಿಗೌಡರು, ತಾಯಿ ಪಾರ್ವತಮ್ಮ. ಪ್ರಾರಂಭಿಕ ಶಿಕ್ಷಣವನ್ನು ತಮ್ಮಊರಾದ ನಾಗತಿಹಳ್ಳಿಯಲ್ಲಿ ಪಡೆದಅವರು ಮುಂದೆತಮ್ಮ ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿ ನಡೆಸಿದರು. ಸ್ನಾತಕೋತ್ತರ ಪದವಿ ಕನ್ನಡ ಎಂ.ಎ ಯನ್ನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ೮ ಚಿನ್ನದ ಪದಕಗಳು ಮತ್ತು ೨ ನಗದು ಬಹುಮಾನಗಳೊಂದಿಗೆ ಪ್ರಥಮರ‍್ಯಾಂಕ್ ಪಡೆದಿದ್ದಾರೆ.
ತಮ್ಮಗ್ರಾಮವಾದ ನಾಗತಿಹಳ್ಳಿಯಲ್ಲಿ ’ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ‘ಯನ್ನು ಆರಂಭಿಸಿದರು.ಜೊತೆಗೆ ಪ್ರತಿಯುಗಾದಿಯ ಸಂದರ್ಭದಲ್ಲಿ ‘ನಾಗತಿಹಳ್ಳಿ ಸಾಂಸ್ಕೃತಿಕ ಹಬ್ಬಕ್ಕೆ ಸಹಾ ಚಾಲನೆ ನೀಡಿದರು ಈ ಮೂಲಕ ಗ್ರಾಮೀಣಜನರ ಸಾಂಸ್ಕೃತಿಕ ಪ್ರಜ್ಞೆಯನ್ನು ಜಾಗೃತಿಗೊಳಿಸುವ ಕೆಲಸವನ್ನು ಆರಂಭಿಸಿದರು. ಈ ವೇದಿಕೆಯ ಮೂಲಕ ಗ್ರಾಮದಲ್ಲಿ ಸುಸಜ್ಜಿತಗ್ರಂಥಾಲಯ, ರಂಗಮಂದಿರ, ಕಂಪ್ಯೂಟರ್ ಕೇಂದ್ರಗಳನ್ನು, ಕೃಷಿ ಅಧ್ಯಯನ ಪ್ರವಾಸ, ಉಚಿತ ವೈದ್ಯಕೀಯ ಶಿಬಿರಗಳು, ಸಹಕಾರಿ ಸಂಘಗಳ ಸ್ಥಾಪನೆ ಮುಂತಾದಗ್ರಾಮಮುಖೀ ಚಿಂತನೆಗಳನ್ನು ಅನು?ನಗೊಳಿಸುತ್ತಿದ್ದಾರೆ ,. ಈ ವೇದಿಕೆಯುಗ್ರಾಮೀಣರಆರ್ಥಿಕ ಸಮಸ್ಯೆಗಳಿಗೂ ಸ್ಪಂದಿಸುತ್ತಿರುವ ಸಂಗತಿ ನಾಗಮಂಗಲ ತಾಲ್ಲೂಕಿನ ಬಿದರಕೆರೆ, ಯರಗನಹಳ್ಳಿ, ಸಬ್ಬನಕುಪ್ಪೆಗ್ರಾಮಸ್ಥರಿಗೂ ಸ್ಫೂರ್ತಿ ನೀಡಿದೆ. ಈ ವೇದಿಕೆಯ ಆಶಯಗಳನ್ನೇ ಸುತ್ತಮುತ್ತಲಿನ ಗ್ರಾಮಸ್ಥರೆಲ್ಲರೂ ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ.
ಪ್ರಾಧ್ಯಾಪಕ ಮತ್ತು ಬರಹಗಾರರಾಗಿ
ಕನ್ನಡ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸತೊಡಗಿದ ನಾಗತಿಹಳ್ಳಿ ಚಂದ್ರಶೇಖರರುಕಥಾಲೋಕದಲ್ಲಿತಮ್ಮದೇಛಾಪು ಮೂಡಿಸಿದರು. ಇನ್ನೂಎಂಟನೆಯತರಗತಿಯಲ್ಲಿಓದುತ್ತಿರುವಾಗಲೇಅವರು ’ಆವರ್ತ’ ಎಂಬ ಕಥೆ ಬರೆದರು. ಇದುವರೆಗೆಕಥೆ, ಕಾದಂಬರಿ, ಪ್ರವಾಸ ಕಥನಗಳನ್ನು ಒಳಗೊಂಡ ಅವರ ಸುಮಾರು ೪೦ ಪ್ರಕಟಣೆಗಳು ಬೆಳಕು ಕಂಡಿವೆ. ’ಹದ್ದುಗಳು’, ’ನನ್ನ ಪ್ರೀತಿಯ ಹುಡುಗನಿಗೆ’, ’ಮಲೆನಾಡಿನ ಹುಡುಗಿ, ಬಯಲು ಸೀಮೆಯ ಹುಡುಗ’, ’ಸನ್ನಿಧಿ’, ’ಪ್ರೇಮಕಥಾ ಸಂಪುಟ’, ’ಅಕಾಲ’, ’ಛಿದ್ರ’ ನಾಗತಿಹಳ್ಳಿಯವರ ಪ್ರಸಿದ್ಧ ಕಥಾ ಸಂಕಲನ ಗಳು. ’ಬಾ ನಲ್ಲೆ ಮಧುಚಂದ್ರಕೆ’, ’ಚುಕ್ಕಿ ಚಂದ್ರಮರ ನಾಡಿನಲ್ಲಿ’, ’ವಲಸೆ ಹಕ್ಕಿಯ ಹಾಡು’ ಅವರ ಕಾದಂಬರಿಗಳು. ’ಆಯನ’, ’ಅಮೆರಿಕ! ಅಮೇರಿಕಾ!!’, ’ದಕ್ಷಿಣಧ್ರುವದಿಂ’, ’ಹೊಳೆದಂಡೆ’ ಮುಂತಾದವುಅವರ ಪ್ರವಾಸ ಕಥನಗಳು’. ’ನನ್ನ ಪ್ರೀತಿಯ ಹುಡುಗಿಗೆ’ ಹಲವು ಸಂಪುಟಗಳಲ್ಲಿ ಮೂಡಿಬಂದಿರುವಅವರಆತ್ಮಕಥೆಯಾಗಿದೆ. ’ಶತಮಾನದಂಚಿನಲ್ಲಿ’ ಅವರ ವಿವಿಧ ಲೇಖನಗಳ ಸಂಗ್ರಹ ಸಂಪುಟವಾಗಿದೆ.ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿಕಾರ್ಯ ನಿರ್ವಹಿಸಿದ್ದಾರೆ.
ದೃಶ್ಯ ಮಾಧ್ಯಮ :
ಹೀಗೆ ಕಥೆ ಹೇಳುವುದರಲ್ಲಿ ಪ್ರೀತಿಯುಳ್ಳ ನಾಗತಿಹಳ್ಳಿ ಚಂದ್ರಶೇಖರರಿಗೆಕಥೆ ಹೇಳುವ ದೃಶ್ಯ ಮಾಧ್ಯಮದಕಡೆಕೂಡಾ ಒಲವು ಹರಿದು ಬಂತು.ಚಂದ್ರಶೇಖರ್ ಸಿನಿಮಾಉದ್ಯಮದಲ್ಲಿಕಾರ್ಯ ಪ್ರಾರಂಭಿಸಿದ್ದು ’ಕಾಡಿನ ಬೆಂಕಿ’ ಚಿತ್ರದ ಸಂಭಾ?ಣೆ ಬರೆಯುವುದರ ಮೂಲಕ. ತದನಂತರ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇವರ ಮಾತಾಡ್ ಮಾತಾಡು ಮಲ್ಲಿಗೆಚಿತ್ರ ೨೦೦೭ರಲ್ಲಿ ಕ್ಯಾನೆಚಿತ್ರೋತ್ಸವದಲ್ಲಿತೆರೆಕಂಡಿತ್ತು. ಇಂದುಕನ್ನಡಚಿತ್ರರಂಗದಲ್ಲಿ ನಾಗತಿಹಳ್ಳಿ ಚಂದ್ರಶೇಖರರ ಚಿತ್ರಗಳು ವಿಶಿ? ಸ್ಥಾನ ಪಡೆದಿವೆ. ಅವರ ’ಮಾತಾಡ್ ಮಾತಾಡು ಮಲ್ಲಿಗೆ’ ಸಾಗರಗಳನ್ನು ದಾಟಿಕೇನ್ಸ್‌ಅಂತಹ ಪ್ರತಿಷ್ಟಿತ ಉತ್ಸವಗಳಲ್ಲಿ ಪ್ರದರ್ಶನಕಂಡಿತು. ತಮ್ಮಅಧ್ಯಾಪನದ ದಿನಗಳಲ್ಲಿ ಚಿತ್ರಕಥೆ, ಸಂಭಾ?ಣೆ, ಗೀತ ರಚನೆಗಳಲ್ಲಿ ಭಾಗಿಯಾಗುತ್ತಿದ್ದ ನಾಗತಿಹಳ್ಳಿ ಚಂದ್ರಶೇಖರ್‌ಅವರ ಕಾಯಕಗಳು ’ಕಾಡಿನ ಬೆಂಕಿ’, ಸಂಕ್ರಾಂತಿ’, ಪ್ರಥಮಉ?ಕಿರಣ’, ’ಉದ್ಭವ’, ’ಊರ್ವಶಿ’ ಮುಂತಾದ ಪ್ರಸಿದ್ಧ ಚಿತ್ರಗಳಿಗೆ ಮೆರುಗು ನೀಡಿತ್ತು.೧೯೯೧ ರಲ್ಲಿ ಮೂಡಿಬಂದ ’ಉಂಡು ಹೋದಕೊಂಡು ಹೋದ’ ಚಿತ್ರದಿಂದ ಮೊದಲ್ಗೊಂಡಂತೆ, ’ಬಾ ನಲ್ಲೆ ಮಧುಚಂದ್ರಕೆ’, ’ಕೊಟ್ರೇಶಿ ಕನಸು’, ’ಅಮೆರಿಕ!ಅಮೇರಿಕಾ!!’, ’ಹೂಮಳೆ’, ’ನನ್ನ ಪ್ರೀತಿಯ ಹುಡುಗಿ’, ’ಪ್ಯಾರಿಸ್ ಪ್ರಣಯ’, ’ಅಮೃತಧಾರೆ’, ’ಮಾತಾಡ್ ಮಾತಾಡು ಮಲ್ಲಿಗೆ’, ’ಒಲವೆ ಜೀವನ ಲೆಖ್ಖಾಚಾರ’, ’ನೂರೂಜನ್ಮಕು’ ’ಬ್ರೇಕಿಂಗ್ ನ್ಯೂಸ್’, ’ಇ?ಕಾಮ್ಯ’, ’ಇಂಡಿಯಾ ಗಿS ಇಂಗ್ಲೆಂಡ್’ ಮುಂತಾದ ಚಿತ್ರಗಳನ್ನು ಅವರು ನಿರ್ದೇಶಿಸಿದ್ದಾರೆ.

ಕಲಾತ್ಮಕ ಚಿತ್ರಗಳ ಚಿಂತನಾತ್ಮಕಗುಣ, ಸಾಮಾಜಿಕ ಚಿತ್ರಗಳ ಸ್ಪಂದನೆ, ಆಧುನಿಕ ಬದುಕಿನ ವೈವಿಧ್ಯಮಯ ವೈರುಧ್ಯ ಇವುಗಳ ಜೊತೆಗೆ ಹಿತಮಿತದ ಸಂಗೀತ, ದೃಶ್ಯ ವೈಭವ ಇವುಗಳನ್ನೆಲ್ಲ ನಾಗತಿಹಳ್ಳಿ ತಮ್ಮ ಸೃಜನಶೀಲ ಸ್ಪರ್ಶದಲ್ಲಿ ಬೆಳ್ಳಿತೆರೆಯಲ್ಲಿ ಅಭಿವ್ಯಕ್ತಿಸಿದ್ದಾರೆ. ಕನ್ನಡಚಿತ್ರರಂಗದಲ್ಲಿನ ಹಲವಾರು ಪ್ರಶಸ್ತಿ, ಗಲ್ಲಾಪೆಟ್ಟಿಗೆಯ ಯಶಸ್ಸುಗಳು ಮತ್ತು ಸೋಲುಗಳನ್ನು ನಾಗತಿಹಳ್ಳಿ ಸಮಭಾವತ್ವದಲ್ಲಿ ಸ್ವೀಕರಿಸಿ ಮುನ್ನಡೆಯುತ್ತಿದ್ದಾರೆ. ಇಂದುಕನ್ನಡಚಿತ್ರರಂಗದಲ್ಲಿ ಪ್ರಸಿದ್ಧ ಸಂಗೀತ ನಿರ್ದೆಶಕರಾಗಿರುವ ಮನೋಮೂರ್ತಿಅವರನ್ನುಅಮೇರಿಕದ ಸಾಫ್ಟ್ವೇರ್‌ಕ್ಷೇತ್ರದಿಂದಕನ್ನಡಚಿತ್ರ ಸಂಗೀತಕ್ಕೆಕರೆತಂದಕೀರ್ತಿಕೂಡಾ ನಾಗತಿಹಳ್ಳಿ ಚಂದ್ರಶೇಖರ್‌ಅವರದ್ದು,ಇದೇರೀತಿ ಸ್ಟೀಫನ್ ಪ್ರಯೋಗ್‌ಅವರನ್ನು ಸಂಗೀತ ನಿರ್ದೇಶಕರಾಗಿಕನ್ನಡಚಿತ್ರರಂಗಕ್ಕೆ ಪರಿಚಯಿಸಿದ್ದಾರೆ.
ನಿರ್ದೇಶಿಸಿರುವ ಸಿನಿಮಾಗಳು
೧ಉಂಡೂ ಹೋದಕೊಂಡೂ ಹೋದ ೧೯೯೧ –
೨ ಬಾ ನಲ್ಲೆ ಮಧುಚಂದ್ರಕೆ ೧೯೯೩ –
೩ ಕೊಟ್ರೇಶಿ ಕನಸು ೧೯೯೪ –
೪ಅಮೇರಿಕಅಮೇರಿಕ ೧೯೯೬ –
೫ ಹೂಮಳೆ ೧೯೯೮ –
೬ ನನ್ನ ಪ್ರೀತಿಯ ಹುಡುಗಿ ೨೦೦೧ –
೭ ಪ್ಯಾರಿಸ್ ಪ್ರಣಯ ೨೦೦೨ –
೮ಅಮೃತಧಾರೆ ೨೦೦೩ –
೯ ಮಾತಾಡ್ ಮಾತಾಡು ಮಲ್ಲಿಗೆ ೨೦೦೫
೧೦ ಒಲವೆ ಜೀವನ ಲೆಕ್ಕಾಚಾರ ೨೦೦೭ –
೧೧ ನೂರುಜನ್ಮಕೂ ೨೦೦೯
೧೨ ಬ್ರೇಕಿಂಗ್ ನ್ಯೂಸ್ ೨೦೧೨
೧೩ಇ?ಕಾಮ್ಯ ೨೦೧೬
೧೪ಇಂಡಿಯಾ ಗಿS ಇಂಗ್ಲೆಂಡ್ ೨೦೧೯

Get real time updates directly on you device, subscribe now.

Leave A Reply

Your email address will not be published.

error: Content is protected !!