ಕೊಪ್ಪಳ ರಿಪಬ್ಲಿಕ್ ಆಫ್ ಕೊಪ್ಪಳ ಆಗಿದೆ CVC
koppal ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಅಬಿವೃದ್ದಿ ಯೇ ಇಲ್ಲವಾಗಿದೆ. ಬೃಷ್ಟಾಚಾರ್ ತಾಂಡವಾಡುತ್ತಿದೆ. ಮೂರನೇ ಸಲ ಶಾಸಕರಾಗಿರುವ ರಾಘವೇಂದ್ರ ಹಿಟ್ನಾಳ್ ರವರು ಕೊಪ್ಪಳವನ್ನು ರಿಪಬ್ಲಿಕ್ ಆಫ್ ಕೊಪ್ಪಳ ಮಾಡಿದ್ದಾರೆ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರಕಾರದ ಬಸ್ ದರ ಮತ್ತು ಹಾಲಿನ ದರ ಹೆಚ್ಚಿಸಿರುವದರ ವಿರುದ್ಧ ಕೊಪ್ಪಳ ಜಿಲ್ಲಾ ಜೆಡಿಎಸ್ ಪಕ್ಷದ ವತಿಯಿಂದ ಕೊಪ್ಪಳ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆಯಲ್ಲಿ ಮಾತನಾಡಿದ ಸಿ.ವಿ.ಚಂದ್ರಶೇಖರ್ ಪ್ರಸ್ತುತ ಕಾಂಗ್ರೇಸ ರಾಜ್ಯ ಸರಕಾರವು ಆರ್ಥಿಕ ದಿವಾಳಿಯಾಗಿದ್ದು, ಈ ದಿವಾಳಿತನದ ಪರಿಣಾಮ” ಬಸ್ ದರ ಮತ್ತು ಹಾಲಿನ ದರ ಹೆಚ್ಚಿಸಿರುವದು” “ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ “ವಾಲ್ಮೀಕಿ ನಿಗಮದಲ್ಲಿ ನೂರಾರು ಕೋಟಿ ಹಗರಣ” ಇಂತಹ ಜನ ವಿರೋಧಿ ನೀತಿಗಳನ್ನು ಅನುಸರಿಸಿ ರಾಜ್ಯದಲ್ಲಿ ದುರಾಡಳಿತ ನಡೆಸುತ್ತಿದೆ. ಪುರುಷ ಪ್ರಯಾಣಿಕರ ಮೆಲೆ ಹೇರಿದೆ. ಅಲ್ಲದೆ ಹಾಲಿನ ದರ ಏರಿಸಿ ಅದರ ಲಾಭವನ್ನು ರೈತರಿಗೆ ನೀಡದೆ ಸಾರ್ವಜನಿಕರಿಗೆ ಹೊರೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.
ಬಡವರ ದೀನ ದಲಿತರ ಉದ್ದಾರವೇ ನಮ್ಮ ಗುರಿ ಎಂದು ಹೇಳುವ ಮುಖ್ಯಮಂತ್ರಿಗಳು ಅವರ ಶೋಷಣೆ ಮಾಡುತ್ತಿದ್ದಾರೆ.ಗೊತ್ತುಗುರಿ ಇಲ್ಲದ ಈ ಸರಕಾರ ಮನಸೋಯಿಚ್ಚೆಯಿಂದ ಆಡಳಿತ ನಡೆಸುತ್ತಿದೆ. ಅಧಿಕಾರದ ಮದ ದರ್ಪದಿಂದಾಗಿ ಕನಿಷ್ಟ ಪ್ರಶ್ನೆ ಮತ್ತು ಸಂವೇದನೆ ಇಲ್ಲದ ಸರಕಾರವಾಗಿದೆ. ಸರಕಾರ ರಚನೆಯಾದಾಗಿನಿಂದ ತೆರಿಗೆ ಹೆಚ್ಚಳ,ಬೆಲೆ ಏರಿಕೆ ಮಾಡಿ ರಾಜ್ಯದ ಜನರ ರಕ್ತ ಹೀರುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದ್ದು ತಾವು ಕೂಡಲೆ ಮಧ್ಯಪ್ರವೇಶ ಮಾಡಿ ಸರಕಾರಕ್ಕೆ ಕಿವಿ ಹಿಂಡುವ ಕೆಲಸಮಾಡಬೇಕೆಂದು ರಾಜ್ಯಪಾಲರಿಗೆ ನೀಡಿದ ಮನವಿಯಲ್ಲಿ ಆಗ್ರಹಿಸಿದರು ರಾಜ್ಯ ದಿವಾಳಿಯಾಗಿ ದೇಶದ ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ನೆರೆಯ ರಾಷ್ಟ್ರಗಳಲ್ಲಿ ಆದಂತ ಪರಿಸ್ಥಿ ನಿರ್ಮಾಣವಾಗಬಹುದು. ಆದ್ದರಿಂದ ರಾಜ್ಯಸರಕಾರಕ್ಕೆ ಈ ಬೆಲೆ ಏರಿಕೆಯನ್ನ ಹಿಂಪಡಿಯುವಂತೆ ಸೂಚಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸುರೇಶ ಭೂಮ್ ರೆಡ್ಡಿ, ನೇ ತೃತ್ವದಲ್ಲಿ ದೇವಪ್ಪ ಕಟ್ಟಿಮನಿರವರು – ಜಿಲ್ಲಾ ಗೌರವಾದ್ಯಕ್ಷರು ಜೆಡಿಎಸ್ಕೊಪ್ಪಳ, ಮಲ.ನ ಗೌಡ್ರ ಕೋನನಗೌಡ್ರರವರು- ಜಿಲ್ಲಾ, ವಕ್ರಾರರು ಜೆಡಿಎಸ್ ಕೊಪ್ಪಳ, ಶರಣಪ್ಪ ಜಡಿ ರವರು- ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಜೆಡಿಎಸ್ ಕೊಪ್ಪಳ, ಈಶಪ್ಪ ಮಾದಿನೂರ , ಯಮನಪ್ಪ ಕಟಗಿ ರವರು- ತಾಲೂಕು ಅಧ್ಯಕ್ಷರು ಸೇರಿದಂತೆ ಇತರರು ಉಪಸ್ತಿತ್ತಿದ್ದರು.