ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಉದ್ಘಾಟಕರ, ಅತಿಥಿಗಳ ಹಾಗೂ ಕಲಾವಿದರ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳ ವಿವರ

0

Get real time updates directly on you device, subscribe now.

ಜನೇವರಿ-೧೫,೧೬ ಹಾಗೂ ೧೭ ರಂದುಜರುಗುವ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಉದ್ಘಾಟಕರ, ಅತಿಥಿಗಳ ಹಾಗೂ ಕಲಾವಿದರ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳ ವಿವರ.
ಕೊಪ್ಪಳ- ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ದಿನಗಣನೆಆರಂಬವಾಗಿದ್ದು ದಿನಾಂಕ ೧೫.೦೧.೨೫ ರಂದುಜರುಗುವಜಾತ್ರೆಯಮಹಾರಥೋತ್ಸವವನ್ನುಧಾರವಾಡದ ಸುಪ್ರಸಿದ್ಧ ಹಿಂದುಸ್ತಾನಿ ಗಾಯಕರಾದ ಪಂಡಿತ್ ಪದ್ಮಶ್ರೀ ಶ್ರೀ ಎಂ ವೆಂಕಟೇಶ್‌ಕುಮಾರ್‌ಅವರು ಉದ್ಘಾಟಿಸಿದರು. ಉದ್ಘಾಟನೆ ಸಮಾರಂಭದ ಸಾನಿಧ್ಯವನ್ನುತುಮಕೂರಿನ ಶ್ರೀ ಸಿದ್ದಗಂಗಾ ಮಠದ ಪರಮಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹಾಗೂ ವಿಜಯಪುರದ ಹುಬ್ಬಳ್ಳಿ ಶ್ರೀ ?ಣ್ಮುಖಾರೂಢಮಠದ ಪರಮಪೂಜ್ಯ ಶ್ರೀ ಅಭಿನವ ಸಿದ್ಧಾರೂಢ ಮಹಾಸ್ವಾಮಿಗಳು ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕರು ಹಾಗೂ ಚಿಂತಕರು ಮತ್ತು ಸಾಹಿತಿಗಳಾದ ಡಾ. ನಾಗತಿಹಳ್ಳಿ ಚಂದ್ರಶೇಖರ್‌ಅವರು ವಹಿಸಿಕೊಳ್ಳುವರು.
ಕೈಲಾಸ ಮಂಟಪದಲ್ಲಿ ನಡೆಯುವ ಸಂಗೀತಕಾರ್ಯಕ್ರಮದಲ್ಲಿಧಾರವಾಡದ ಶ್ರೀ ಬಸವರಾಜ ವಂದಲಿ ಹಾಗೂ ಹುಬ್ಬಳ್ಳಿಯ ಶ್ರೀ ಸುಜಯಿಂದ್ರಕುಲಕರ್ಣಿ ಹಾಗೂ ತಂಡದವರಿಂದ ಸಂಗೀತಕಾರ್ಯಕ್ರಮಜರುಗಲಿದೆ. ಮತ್ತು ಮೈಸೂರಿನ ಸರಿಗಮಪಖ್ಯಾತಿಯಗಾಯಕರಾದ ಶ್ರೀ ಹ?ಎಂ.ಆರ್ ಹಾಗೂ ತಂಡದವರಿಂದ ಸಂಗೀತಕಾರ್ಯಕ್ರಮನಡೆಸಿಕೊಡುವರು.

೧೬.೦೧.೨೦೨೫,ಗುರುವಾರ,ಸಾಯಂಕಾಲ ೬:೦೦ಗೆ ಕೈಲಾಸ ಮಂಟಪದಲ್ಲಿ ನಡೆಯುವ ಭಕ್ತ ಹಿತಚಿಂತನ ಸಭೆಯಕಾರ್ಯಕ್ರಮದ ವಿವರ
ಭಕ್ತಹಿತಚಿಂತನಸಭೆಯದಿವ್ಯಸಾನಿಧ್ಯವನ್ನು ಭಾಲ್ಕಿ ಹಿರೇಮಠ ಸಂಸ್ಥಾನದ ಪರಮಪೂಜ್ಯ ಶ್ರೀ ಗುರು ಬಸವ ಪಟ್ಟದೇವರು ಹಾಗೂ ಒಳ ಬಳ್ಳಾರಿಯ ಸುವರ್ಣಗಿರಿ ವಿರಕ್ತ ಮಠದ ಶ್ರೀಮ.ನಿ.ಪ್ರ.ಬಸವಲಿಂಗ ಮಹಾಸ್ವಾಮಿಗಳು ಹಾಗೂ ಮಂಗಳೂರಿನ ಅರಳಲೇ ಹಿರೇಮಠ ಶ್ರೀ ಷ.ಬ್ರ. ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿಕೊಳ್ಳುವರು.ದಾವಣಗೆರೆಯ ಶ್ರೀ ಜಡೆಸಿದ್ದ ಶಿವಯೋಗಿಶ್ವರ ಮಠದ ಶ್ರೀ ಶೋ ಬ್ರ.ಶಿವಾನಂದ ಮಹಾಸ್ವಾಮಿಗಳಿಂದ ಉಪದೇಶಾಅಮೃತವನ್ನು ನೀಡುವರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅಸ್ಸಾಂರಾಜ್ಯದಜೋಹೃಟ್ ಪ್ರದೇಶದ ಫಾರೆಸ್ಟ್ ಮ್ಯಾನ್‌ಆಫ್‌ಇಂಡಿಯಾಎಂದು ಪ್ರಖ್ಯಾತಿಯನ್ನು ಪಡೆದ ಪದ್ಮಶ್ರೀ ಜಾದವ್ ಪಾಯಂಗ್‌ರವರು ಭಾಗವಹಿಸುವರು.
ನಂತರ ನಡೆಯುವ ಸಂಗೀತಕಾರ್ಯಕ್ರಮದಲ್ಲಿ ಪಂಡಿತ್‌ಡಾ. ಮೈಸೂರು ಮಂಜುನಾಥ್‌ಇವರಿಂದ ವಾಯೋಲಿನ್, ಮುಂಬೈನ ಪಂಡಿತ್‌ರೂಪಕುಲಕರ್ಣಿವರಿಂದ ಬಾನ್ಸೂರಿ,ಧಾರವಾಡದ ಪಂಡಿತ್‌ಕೈವಲ್ಯಕುಮಾರ್‌ಗುರವ್‌ಇವರಿಂದಗಾಯನ, ಬೆಂಗಳೂರಿನ ಪಂಡಿತ್‌ಗಿರಿಧರಉಡುಪಇವರಿಂದಘಟಂ, ಮುಂಬೈನ ಪಂಡಿತ್ ಮುಕುಂದರಾಜ್‌ದೇವುಇವರಿಂದತಬಲ ಕಾರ್ಯಕ್ರಮಜರುಗಲಿದೆ.

ದಿನಾಂಕ ಜನವರಿ ೧೭, ಶುಕ್ರವಾರ, ಸಾಯಂಕಾಲ ೬:೦೦ಗೆ ಸಮಾರೋಪ ಸಮಾರಂಭಕಾರ್ಯಕ್ರಮದ ವಿವರ
ಕಾರ್ಯಕ್ರಮದ ಸಾನಿಧ್ಯವನ್ನು ಹೆಬ್ಬಾಳದ ಬೃಹನ್ಮಠದ ಶ್ರೀ ಷ.ಬ್ರ. ನಾಗಭೂ?ಣ ಶಿವಾಚಾರ್ಯ ಮಹಾಸ್ವಾಮಿಗಳು, ಶಿರೂರು ಮಹಾಂತತೀರ್ಥಯೋಗ ಮತ್ತು ನಿಸರ್ಗಚಿಕಿತ್ಸಾಕೇಂದ್ರದ ಪೂಜ್ಯ ಶ್ರೀ ಡಾಕ್ಟರ ಬಸವಲಿಂಗ ಮಹಾಸ್ವಾಮಿಗಳು ವಹಿಸಿಕೊಳ್ಳುವರು. ಬೆಂಗಳೂರಿನ ಉಚ್ಚ ನ್ಯಾಯಾಲಯದಗೌರವಾನ್ವಿತ ನ್ಯಾಯಮೂರ್ತಿಗಳಾದ ಸನ್ಮಾನ್ಯ ಶ್ರೀ ವಿ.ಶ್ರೀಶಾನಂದ್‌ರವರು ಸಮಾರೋಪ ನುಡಿಯನ್ನು ನುಡಿಯಲಿದ್ದಾರೆ.
ನಂತರಜೀಕನ್ನಡಖ್ಯಾತಿಯ ಶ್ರೀಮತಿ ಶುಭರಾಘವೇಂದ್ರ ಮೈಸೂರು ಹಾಗೂ ತಂಡದವರಿಂದ ಮತ್ತು ಸಹಗಾಯನಕಾರ್ಯಕ್ರಮ ವೆ.ಚಿ.ಅರುಣ್‌ಕುಮಾರ್ ಬೆಂಗಳೂರು ಇವರಿಂದ ಮತ್ತು ಕಲರ್ಸ್‌ಕನ್ನಡಎದೆತುಂಬಿ ಹಾಡುವೆನುಖ್ಯಾತಿಯ ಬೆಂಗಳೂರಿನ ಶ್ರೀ ಸೂರ್ಯಕಾಂತ್ ಗಡಿನಿಂಗದಹಳ್ಳಿ ಇವರಿಂದ ಸುಗಮ ಸಂಗೀತಕಾರ್ಯಕ್ರಮಜರುಗಲಿದೆ ನಂತರದಲ್ಲಿಗಂಗಾವತಿಯ ಶ್ರೀ ಬಿ.ಪ್ರಾಣೇಶ್‌ಇವರಿಂದಹಾಸ್ಯೋತ್ಸವಕಾರ್ಯಕ್ರಮಜರುಗಲಿದೆಎಮದು ಶ್ರೀ ಗವಿಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Get real time updates directly on you device, subscribe now.

Leave A Reply

Your email address will not be published.

error: Content is protected !!