ಕೊಪ್ಪಳ ಬಂದ್ ಯಶಸ್ವಿ Complete Photos Details
ಕೊಪ್ಪಳ : ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ ಖಂಡಿಸಿ ಕೊಪ್ಪಳ ಜಿಲ್ಲೆ ಬಂದ್ ಮಾಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕೊಪ್ಪಳ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಕೇಂದ್ರ ಕೊಪ್ಪಳ ಹಾಗೂ ಭಾಗ್ಯನಗರದ ಅವಳಿ ನಗರಗಳಲ್ಲಿ ಸೋಮವಾರ ಬೆಳಿಗ್ಗೆಯಿಂದಲೇ ಎಲ್ಲಾ ಅಂಗಡಿಗಳು ಸ್ವಯಂ ಪ್ರೇರಣೆಯಿಂದ ಬಂದು ಮಾಡಿಕೊಂಡು ಬಂದ್ ಪ್ರತಿಭಟನೆಗೆ ಬೆಂಬಲ ಸೂಚಿಸಿದರು, ಸಂವಿಧಾನ ಸಂರಕ್ಷಣಾ ಸಮಿತಿಯ ನಾಯಕರು ಶಿಸ್ತು ಕಾಪಾಡಿಕೊಂಡಿದ್ದರಿಂದ ಎಲ್ಲಿಯೂ ಅಹಿತಕರ ಘಟನೆಗಳು ನಡೆಯಲಿಲ್ಲ, ಅಶೋಕ ವೃತ್ತದ ಸುತ್ತ ಮಾನವ ಸರಪಳಿ ರಚಿಸಿ ನಂತರ ಸಾವಿರಾರು ಸಂಖ್ಯೆಗಳಲ್ಲಿ ಪ್ರತಿಭಟನಾಕಾರರು ಮಧ್ಯಾಹ್ನದ ಸುಮಾರಿಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿ ರಾಷ್ಟ್ರೀಯ ಹೆದ್ದಾರಿಯಿಂದ ಸಾಲಾರ್ ಜಂಗ್ ರಸ್ತೆ ಮೂಲಕ ಡಾ: ಬಿ,ಆರ್,ಅಂಬೇಡ್ಕರ್ ವೃತ್ತಕ್ಕೆ ತಲುಪಿ, ಅಂಬೇಡ್ಕರ್ ಅವರ ಪುತ್ತಳಿಗೆ ನಾಯಕರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ಬಳಿಕ ಮೆರವಣಿಗೆ ಮುಂದುವರಿಸಿ ಶಾರದಾ ಟಾಕೀಸ್ ತಿರುವಿನಿಂದ ಗಡಿಯಾರ ಕಂಬದಿಂದ ಜವಾಹರ್ ರಸ್ತೆ ಮೂಲಕ ಅಶೋಕ ವೃತ್ತ ತಲುಪಿ ಬೃಹತ್ ಬಹಿರಂಗ ವೇದಿಕೆಯಾಗಿ ಮಾರ್ಪಟ್ಟಿತ್ತು, ಸಂವಿಧಾನ ಸಂರಕ್ಷಣಾ ಸಮಿತಿಯ ಮುಖಂಡ ಹನುಮೇಶ್ ಕಡೆಮನಿ ಮಾತನಾಡಿ ಡಾ: ಬಿ,ಆರ್, ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ದೇಶದಿಂದ ಗಡಿಪಾರು ಮಾಡಬೇಕು, ಇಂಥವರಿಂದ ದೇಶದಲ್ಲಿ ಅಶಾಂತಿಯಾಗುತ್ತಿದೆ, ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಇಡೀ ದೇಶದಲ್ಲಿ ರಕ್ತಪಾತವಾಗುತ್ತದೆ ಎಂದು ಎಚ್ಚರಿಕೆ ನೀಡಿದರು,
ಬಂಡಾಯ ಸಾಹಿತಿ ಬಸವರಾಜ ಸೂಳಿಬಾವಿ ಮಾತನಾಡಿ ಗೃಹ ಸಚಿವರಿಗೂ ಹಾಗೂ ಸಾಮಾನ್ಯ ಜನರಿಗೂ ಅಷ್ಟೇ ಗೌರವ ಸಿಗಬೇಕು ಎಂದು ಹೇಳಿದವರು ಅಂಬೇಡ್ಕರ್, ಏನು ಅಮಿತಾ ಅವರು ನಿಂತು ಹೇಳಿದ್ದಾರಲ್ಲ ಆ ಭವನ ಕಟ್ಟಿಸಿದ್ದು ಯಾವ ದೇವರು ಅಲ್ಲ, ಅಂಬೇಡ್ಕರ್ ಅವರಿಂದ ಅಸ್ತಿತ್ವಕ್ಕೆ ಬಂದಂತಹ ಸಂವಿಧಾನ ಎಂಬದ್ದನ್ನು ತಿಳಿದುಕೊಳ್ಳಲಿ, ನೀವು ಗೃಹ ಮಂತ್ರಿ ಆಗಲಿಕೆ ಸಂವಿಧಾನವೇ ಹೊರತು ದೇವರಲ್ಲ ಎಂದು ಚಾಟಿ ಬೀಸಿದರು.
ನಗರ ಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಮಾತನಾಡಿ ಲೋಕಸಭೆಯಲ್ಲಿ ನಿಂತು ಮಾತನಾಡಿರೋದು ಎಷ್ಟು ಮೂರ್ಖರು ಇವರು,ಇವರು ಮಾತನಾಡಿರೋದು ಸ್ವಲ್ಪ, ಆದರೆ ಇನ್ನೂ ಬಹಳಷ್ಟು ಇದೆ, ಇವರ ಸಚಿವರು ನಾವು ಬಂದಿದ್ದೆ ಸಂವಿಧಾನ ಬದಲಾಯಿಸಲು ಎಂದು ಬಹಿರಂಗವಾಗಿ ಹೇಳಿದ್ದರು,ಇವರಿಗೆ ದಮ್ಮಿದ್ರೆ ಸಂವಿಧಾನ ಬದಲಾಯಿಸಲಿ ಇಡೀ ದೇಶದಲ್ಲಿ ರಕ್ತ ಹರಿಯುತ್ತದೆ, ನಮ್ಮ ದೇಶದ ಸಂವಿಧಾನವನ್ನು ಮೆಚ್ಚಿ ಅನೇಕ ದೇಶಗಳು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಂದ ಸಲಹೆ ಪಡೆದಿದ್ದಾರೆ, ಎಲ್ಲಾ ಸಮಾಜದವರಿಗೂ ಸಮಾನತೆಯನ್ನು, ನಮಗಾಗಿ ಹಕ್ಕನ್ನು ಕೊಟ್ಟಿರತಕ್ಕಂತ ಬಾಬಾ ಸಾಹೇಬ್ ಅವರ ಬಗ್ಗೆ ಗಡಿಪಾರು ಆದಂತಹ ತಾವು ಮಾತನಾಡುತ್ತೀರಾ ? ಅಷ್ಟು ದಮ್ಮು ಬಂದಿದೆ ನಿಮಗೆ ? ಇನ್ನೊಮ್ಮೆ ಸಂವಿಧಾನ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತಂಟೆಗೆ ಬಂದರೆ ಇಡೀ ದೇಶ ಹೊತ್ತಿ ಉರಿಯುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರು ಸ್ವೀಕರಿಸಿದ ಮನವಿಯಲ್ಲಿ ದಿನಾಂಕ: 17-12-2024 ರಂದು ಜನತೆಯ ಪ್ರಾತಿನಿಧಿಕ ಸಂಸ್ಥೆಯಾದ ಸಂಸತ್ತಿನಲ್ಲಿ ಗೃಹ ಸಚಿವ ಅಮಿತ್ ಶಾ ಸಂದರ್ಭವಿಲ್ಲದೆ ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎನ್ನುವುದು ಫ್ಯಾಶನ್ ಆಗಿದೆ, ಅದರ ಬದಲಾಗಿ ದೇವರ ಧ್ಯಾನ ಮಾಡಿದ್ದರೆ ಏಳೇಳು ಜನ್ಮದ ಪಾಪ ಪರಿಹಾರವಾಗಿ ಮಣ್ಯ ಲಭಿಸುತ್ತಿತ್ತು ಎಂಬ ಹೇಳಿಕೆಯು ಅಂಬೇಡ್ಕರ್ ಬಗ್ಗೆ ಕೇಂದ್ರ ಸರ್ಕಾರಕ್ಕೆ ಎಂಥ ನಿಲುವು ಇದೆ ಎಂದು ಜನತೆಗೆ ಗೊತ್ತಾಗಿದೆ.ಅಂಬೇಡ್ಕರ್‌ರವರು ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರೋತ್ತರದ ಮಹಾ ಪಂಡಿತರು.ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದವರು,ಅಸ್ಪೃಶ್ಯತೆ ನಿವಾರಣೆ,ಲಿಂಗ ತಾರತಮ್ಯ ವಿರುದ್ಧ ನಿರಂತರ ಹೋರಾಡಿದವರು. ಇಂತಹ ಮಹಾಮೇರು ವ್ಯಕ್ತಿತ್ವದ ಅಂಬೇಡ್ಕರ್ ರವರನ್ನು ಅವಮಾನ ಮಾಡಿರುವುದು ದೇಶದ ಸರ್ವ ಜನತೆಗೆ ವಿಷಾದವನ್ನುಂಟು ಮಾಡಿದೆ. ಶೋಷಿತರು ಅಂಬೇಡ್ಕರ್ ರವರನ್ನು ಸಾಮಾಜಿಕ ನ್ಯಾಯಕ್ಕಾಗಿ ಹಾಡಿ ಹೊಗಳುತ್ತಿದ್ದಾರಲ್ಲದೇ ಯಾವ ಫ್ಯಾಷನ್‌ಗೂ ಅಲ್ಲ. ಇದನ್ನು ಚೆನ್ನಾಗಿ ಅರಿತುಕೊಂಡ ಗೃಹ ಸಚಿವ ಅಮಿತ್ ಶಾ ಅಂಬೇಡ್ಕರ್ ಅವರನ್ನು ಅವಹೇಳನ ಮಾಡಿರುವುದು ಖಂಡನೀಯ.ಕೊಪ್ಪಳ ಜಿಲ್ಲೆಯ ಜನರು ಎಚ್ಚೆತ್ತುಕೊಂಡು ಅಮಿತ್ ಶಾರ ಬೇಜವಾಬ್ದಾರಿ ಹೇಳಿಕೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಅಮಿತ್ ಶಾರನ್ನು ಗೃಹ ಸಚಿವ ಸ್ಥಾನದಿಂದ ವಜಾಗೊಳಿಸಿ, ದೇಶದಿಂದ ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ದಿನಾಂಕ: 06-01-2025 ಸೋಮವಾರದಂದು “ಸಂವಿಧಾನ ಸಂರಕ್ಷಣಾ ಸಮಿತಿ ಕೊಪ್ಪಳ” ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳು, ಅಹಿಂದ, ಅಲ್ಪಸಂಖ್ಯಾತರು, ಆಟೋ ಚಾಲಕರ, ಮಾಲಿಕರ ಸಂಘ ಹಾಗೂ ಎಲ್ಲಾ ಸಮಾಜಗಳ ಸಮುದಾಯದ ಮುಖಂಡರು ಹಾಗೂ ಅಂಬೇಡ್ಕರ್ ಅನುಯಾಯಿಗಳ ಬೆಂಬಲದೊಂದಿಗೆ ಕೊಪ್ಪಳ ಬಂದ್ ಮಾಡಿ ಗೃಹ ಸಚಿವ ಅಮಿತ್ ಶಾರವರ ಹೇಳಿಕೆಯನ್ನು ಖಂಡಿಸಿ ಕೇಂದ್ರ ಸರ್ಕಾರಕ್ಕೆ ಕೊಪ್ಪಳ ಜನತೆ ಉಗ್ರವಾದ ಹೋರಾಟ ಮಾಡುವುದರೊಂದಿಗೆ ಈ ಮನವಿ ಪತ್ರನ್ನು ತಮಗೆ ಜಿಲ್ಲಾಧಿಕಾರಿಗಳು ಕೊಪ್ಪಳರವರ ಮೂಲಕ ರವಾನಿಸಿದ್ದೇವೆ, ಗೃಹ ಸಚಿವ ಸ್ಥಾನದಿಂದ ಉಚ್ಚಾಟಿಸಿ, ದೇಶದಿಂದ ಗಡಿ ಪಾರು ಮಾಡಬೇಕೆಂದು ಕೋರಿದ್ದಾರೆ,
ಸಂವಿಧಾನ ಸಂರಕ್ಷಣಾ ಸಮಿತಿ ಮುಖಂಡರುಗಳಾದ ರಾಮಣ್ಣ ಚೌಡಕಿ, ಬಂಡಾಯ ಸಾಹಿತಿ ಅಲ್ಲಮ ಪ್ರಭು ಬೆಟ್ಟದೂರ,ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಬಸವರಾಜ ಶೀಲವಂತರ್, ದಲಿತ ಸಂಘಟನೆಯ ನಾಯಕ ಸಿದ್ದರಾಮ ಹೊಸಮನಿ, ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಅಪ್ಪಣ್ಣವರ್,ದಲಿತ ಪರ ಸಂಘಟನೆ ಹಿರಿಯ ನಾಯಕ ಟಿ,ರತ್ನಾಕರ, ಯಮನೂರಪ್ಪ ನಾಯ್ಕ ಮುಂತಾದವರು ಮಾತನಾಡಿದರು ಮುನೀರ್ ಸಿದ್ದಿಕಿ, ಕೆ.ಬಿ,ಗೋನಾಳ,ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್,ಎ,ಗಫಾರ್, ಜಿಲ್ಲಾ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ ತುಕಾರಾಮ್ ಬಿ,ಪಾತ್ರೋಟಿ, ಪರುಶುರಾಮ ಕೆರೆಹಳ್ಳಿ, ಜ್ಯೋತಿ ಎಮ್,ಗೊಂಡಬಾಳ, ಕಾಶಪ್ಪ ಚಲವಾದಿ, ಸುಕ್ರಾಜ್ ತಾಳಕೇರಿ, ನಿಂಗಪ್ಪ ಜಿ,ಎಸ್, ಬೆಣಕಲ್ಲ, ಕರ್ನಾಟಕ ಜನಶಕ್ತಿ ಸಂಘಟನೆಯ ರಾಜ್ಯ ನಾಯಕ ಕರಿಯಪ್ಪ ಗುಡಿಮನಿ, ಆದಿಲ್ ಪಟೇಲ್, ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಮುದುಕಪ್ಪ ಎಮ್, ಹೊಸಮನಿ, ಈಶಪ್ಪ ಶಿರೂರು, ಕೌಸರ್ ಕೋಲ್ಕಾರ್, ಯಲ್ಲಪ್ಪ ಬಳಗಾನೂರ,ಗವಿಸಿದ್ದಪ್ಪ ಬೆಲ್ಲದ್, ಮಖಬೂಲ್ ರಾಯಚೂರು ಮುಂತಾದವರು ಭಾಗವಹಿಸಿದ್ದರು.